ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್; ಆಧಾರ್ ಜೋಡಣೆ ಮಾಡಿಲ್ಲವೆಂದು ಸದಸ್ಯರ ಹೆಸರನ್ನು ತೆಗೆದುಹಾಕುವಂತಿಲ್ಲ.!

0
1055

ಬಹುದಿನಗಳಿಂದ ಪಡಿತರ ಚೀಟಿಗೆ ಸಂಬಂಧಪಟ್ಟಂತೆ ಬಡವರಿಗೆ ತಲೆನೋವು ಆದ ರೇಶನ್ ಕಾರ್ಡ್-ಗೆ ಆಧಾರ್ ಕಾರ್ಡ್ ಜೋಡಣೆಗೆ ಕೇಂದ್ರ ಸರ್ಕಾರ ನಿರಾಳವಾಗುವಂತ ಸುದ್ದಿಯನ್ನು ನೀಡಿದ್ದು, ಇನ್ಮುಂದೆ ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿಲ್ಲ ಎಂಬ ಕಾರಣಕ್ಕೆ ಸದಸ್ಯರ ಹೆಸರನ್ನು ತೆಗೆದುಹಾಕುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೂಚನೆ ನೀಡಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು, ಪಡಿತರ ಪಡೆಯುವ ಫಲಾನುಭವಿಗಳನ್ನು ಆಧಾರಿತ ಎಲೆಕ್ಟ್ರಾನಿಕ್ ಪಾಯಿಂಟ್ ಗಳ ಮೂಲಕ ಗುರುತಿಸಲಾಗುತ್ತದೆ.

Also read: ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ; ಹೊಸ ಶಾಸಕರ ಅಖಾಡದಲ್ಲಿ ಹಳಬರು, ಸಚಿವ ಸ್ಥಾನ ಸಿಗದಿದ್ದರೆ ಮತ್ತೆ ರಾಜೀನಾಮೆ??

ಹೌದು ಬಡವರಿಗೆ ಅನ್ನ ನೀಡುವ ಉದ್ದೇಶದಿಂದ ರೇಶನ್ ಕಾರ್ಡ್ ವಿತರಣೆ ಮಾಡಲಾಗಿತ್ತು, ಆದರೆ ನಕಲಿ ಪಡಿತರ ಚೀಟಿ ಹಾವಳಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಜೋಡಣೆಯನ್ನು ನಿರ್ದೇಶಿಸಿತ್ತು, ಆದರೆ ಇದರಲ್ಲಿ ಹಲವು ಗೊಂದಲಗಳು ಹುಟ್ಟಿ ಬಡವರಿಗೆ ರೇಶನ್ ಸಿಗದಂತೆ ಆಗಿದ್ದು, ಅದೆಷ್ಟೋ ಕುಟುಂಬಗಳು ರೇಶನ್ ಇಲ್ಲದೆ ನರಳುವಂತೆ ಆಗಿತ್ತು, ಇದರಿಂದ ಹಲವರು ಊರೇ ಬಿಟ್ಟು ಬೇರೆಡೆಗೆ ಪಲಾಯನ ಮಾಡುವಂತೆ ಆಗಿತ್ತು.

ಮೊದಲು ಏನಿತ್ತು?

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡುವ ಆಧಾರ್ ಕಾರ್ಡ್, ಸರಕಾರದ ಯೋಜನೆಗಳ ಫಲಾನುಭವಿಗಳಾಗಲು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿರುವ ಹೊರತಾಗಿಯೂ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಸಂಖ್ಯೆ ಸಲ್ಲಿಕೆ ಕಡ್ಡಾಯ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚಿಸಿತ್ತು. ಇದರಿಂದ ರಾಜ್ಯದ 98 ಲಕ್ಷಕ್ಕೂ ಹೆಚ್ಚಿರುವ ಪಡಿತರದಾರರು ಮತ್ತೆ ಗೊಂದಲಕ್ಕೆ ಸಿಲುಕಿದ್ದರು ಈ ನಿಯಮದಂತೆ ಫೆಬ್ರವರಿಯಲ್ಲಿಯೇ ಪಡಿತರ ಪಡೆಯುವಾಗ ಎಲ್ಲ ಪಡಿತರದಾರರು, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನೀಡುವುದು ಕಡ್ಡಾಯ ಎಂದು ಸೂಚಿಸಲಾಗಿತ್ತು.

Also read: ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ? ಕೆಪಿಸಿಸಿ ಸ್ಥಾನಮಾನ ಬೇಡವೆಂದರು ಬಿಡದ ಹೈಕಮಾಂಡ್ ದಿಢೀರ್ ಕರೆ ದೆಹಲಿಯತ್ತ ಡಿ.ಕೆ. ಶಿವಕುಮಾರ್.!

ಈ ಹಿಂದೆ ಉಭಯ ಸಂಖ್ಯೆಗಳನ್ನು ನೀಡಿದ್ದರೂ, ಎಲ್ಲ ಪಡಿತರದಾರರು ಮತ್ತೊಮ್ಮೆ ಈ ಸಂಖ್ಯೆಗಳನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯವರಿಗೆ ಸಲ್ಲಿಸುವುದು ಕಡ್ಡಾಯ ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿತ್ತು, ಅಕ್ರಮ ತಡೆಗೆ ಈ ಕ್ರಮ: ಮತದಾರರ ಚೀಟಿ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯ ನೋಂದಣಿಯಿಂದ ಅಕ್ರಮ ತಡೆಯಲು ಸಾಧ್ಯ ಎನ್ನುವುದು ಇಲಾಖೆಯ ವಾದ. ಪಡಿತರದಾರರು ಗುಳೆ ಹೋಗಿದ್ದರೂ, ಅವರ ಹೆಸರಲ್ಲಿ ಬೇರೊಬ್ಬರು ಪಡಿತರ ಖರೀದಿಸುತ್ತಿರುವ ಅನೇಕ ಪ್ರಕರಣಗಳು ರಾಜ್ಯಾದ್ಯಂತ ಬೆಳಕಿಗೆ ಬಂದಿವೆ. ಇನ್ನು ಕೆಲವರು ತಮ್ಮ ಪಡಿತರ ಚೀಟಿಗಳನ್ನೇ ಒತ್ತೆ ಇಟ್ಟು ಬೇರೆಡೆ ಹೋಗಿರುವ ಉದಾಹರಣೆಗಳಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇವೆಲ್ಲವನ್ನೂ ತಡೆಗಟ್ಟಲು
ಸರ್ಕಾರ ಬಯೋಮೆಟ್ರಿಕ್ ಜಾರಿ ಮಾಡಿತ್ತು, ಅದರಂತೆ ಜನರಿಗೆ ಸರಿಯಾಗಿ ರೇಶನ್ ತಲುಪುತ್ತಿಲ್ಲ ಎನ್ನುವುದನ್ನು ತಿಳಿದ ಕೇಂದ್ರ ಪಡಿತರ ಚೀಟಿದಾರರಿಗೆ ನೆಮ್ಮದಿಯ ಸುದ್ದಿ ನೀಡಿದೆ.

Also read: ವಿರೋಧ ಪಕ್ಷಗಳು ಪಾಕಿಸ್ತಾನದ ರೀತಿ ಮಾತನಾಡುತ್ತಿವೆ; ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿದ ಪಕ್ಷಗಳಿಗೆ ಮೋದಿ ಚಾಟಿ.!

ಆಧಾರ್ ಕಾರ್ಡ್ ಇಲ್ಲವೆಂದು ಯಾವುದೇ ಪಡಿತರ ಚೀಟಿದಾರರ ಹೆಸರುಗಳನ್ನು ರೇಷನ್ ಕಾರ್ಡ್ ದತ್ತಾಂಶದಿಂದ ತೆಗೆದು ಹಾಕುವಂತಿಲ್ಲ. ಈ ಕುರಿತು ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಪಡಿತರ ಪಡೆಯುವ ಫಲಾನುಭವಿಗಳನ್ನು ಆಧಾರಿತ ಎಲೆಕ್ಟ್ರಾನಿಕ್ ಪಾಯಿಂಟ್ ಗಳ ಮೂಲಕ ಗುರುತಿಸಲಾಗುತ್ತದೆ. ಕೆಲವೊಮ್ಮೆ ತಾಂತ್ರಿಕ ತೊಂದರೆಯ ಕಾರಣದಿಂದ ಪಡಿತರ ಫಲಾನುಭವಿಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಲು ಆಗುವುದಿಲ್ಲ. ಅಂತಹ ಪಡಿತರ ಚೀಟಿದಾರರ ಹೆಸರುಗಳನ್ನು ರೇಷನ್ ಕಾರ್ಡ್ ಡೇಟಾಬೇಸ್ ನಿಂದ ತೆಗೆದು ಹಾಕಬೇಡಿ ಎಂದು ತಿಳಿಸಿರುವುದಾಗಿ ಕೇಂದ್ರ ಗ್ರಾಹಕ ವ್ಯವಹಾರ, ಸಾರ್ವಜನಿಕ ವಿತರಣೆ ಇಲಾಖೆ ಸಚಿವ ರಾಮವಿಲಾಸ್ ಪಾಸ್ವಾನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.