ಇನ್ಮುಂದೆ ತರಕಾರಿ ತರುವ ಸಾಹಸಕ್ಕೆ ಚಿಂತೆ ಬೇಡ; ರೈಲ್ವೆ, ಬಸ್ ನಿಲ್ದಾಣಗಳಲ್ಲೇ ಹಣ ಹಾಕಿ, ಬಟನ್ ಒತ್ತಿದರೇ ಸಾಕು ದೊರೆಯಲಿದೆ ಹಣ್ಣು-ತರಕಾರಿ.!

0
182

ಬೆಳೆಯುತ್ತಿರುವ ತಂತ್ರಜ್ಞಾನದಿಂದ ಜನರಿಗೆ ಊಹಿಸಲು ಸಾಧ್ಯವಾಗದಷ್ಟು ಅನುಕೂಲತೆಗಳು ಬರುತ್ತಿವೆ. ಮೊದಲು ATM ಬಂದು ಬ್ಯಾಂಕ್-ಗಳ ಸರಧಿಯಲ್ಲಿ ನಿಲ್ಲುವುದು ತಪ್ಪಿತು, ನಂತರ ಮತಷ್ಟು ಮುಂದೆ ಹೋಗಿ ಮೊಬೈಲ್-ಅಲ್ಲೇ ಎಲ್ಲ ಸಿಗುವಂತೆ ಆಯಿತು ಈಗ ಹೀಗೆ ಜನರು ಯಾವ ವಿಷಯಕ್ಕೆ ಕಷ್ಟ ಪಡುತ್ತಾರೋ ಅದಕ್ಕೆ ಒಂದು ಹೊಸ ಉಪಾಯವನ್ನು ತರುತ್ತಿರುವ ತಂತ್ರಜ್ಞಾನ ಮಾರಟಕ್ಕೆ ಮತ್ತು ಮನೆಗೆ ಬೇಕಾದ ವಸ್ತುಗಳು ಜನರಿಗೆ ಸಿಗಲು ದಿನಕ್ಕೊಂದು ವಿಧಾನವನ್ನು ತರುತ್ತಿದೆ. ಈಗ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಇನ್ಮುಂದೆ ರೈಲ್ವೆ, ಬಸ್ ನಿಲ್ದಾಣಗಳಲ್ಲೇ ಏಟಿಎಂ ಮಾದರಿಯಲ್ಲಿ ತರಕಾರಿ ಸಿಗಲಿದೆ.

ಹಣ ಹಾಕಿ, ಬಟನ್ ಒತ್ತಿದರೇ ತರಕಾರಿ?

ಹೌದು ಇದೊಂದು ಬಾಕಿ ಇತ್ತು ಎನ್ನುವ ಜನರ ಮಾತಿನಂತೆ ಯಾರು ಊಹಿಸದ ಮಾರಾಟದ ಮತ್ತು ಖರೀದಿಯ ವಿಧಾನಗಳು ಬರುತ್ತಿದ್ದು. ಬಸ್, ರೈಲುಗಳ ಮೂಲಕ ದೂರದ ಊರುಗಳಿಂದ ಸಂಚರಿಸುವ ಪ್ರಯಾಣಿಕರು, ಮನೆಗೆ ತಲುಪಿ ಮತ್ತೆ ಹಣ್ಣು-ತರಕಾರಿಗಾಗಿ ಪರಾದಡುವ ಸಮಯಕ್ಕೆ ಬ್ರೇಕ್ ಬೀಳಲಿದೆ. ಏಕೆಂದರೆ ರಾಜ್ಯದ ವಿವಿಧ ರೈಲ್ವೆ, ಬಸ್ ನಿಲ್ದಾಣಗಳಲ್ಲಿಯೇ ಹಣ್ಣು-ತರಕಾರಿ ಬಟನ್, ಹಣ ಹಾಕಿ, ಬಟನ್ ಒತ್ತಿದರೇ ಸಾಕು ದೊರೆಯಲಿದೆ. ಈ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ರಾಜ್ಯದ ತೋಟಗಾರಿಕಾ ಇಲಾಖೆ ನೀಡಿದೆ. ಈ ಮೂಲಕ ದೂರದ ಊರುಗಳಿಗೆ ಪ್ರಯಾಣಿಸುವ ಬಹುತೇಕರಿಗೆ ಅನುಕೂಲವಾಗಿದೆ.

© kannada.oneindia

ಈ ಮಾದರಿಯನ್ನು ರಾಜ್ಯದ ತೋಟಗಾರಿಕಾ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ಮುಂದೆ ಬಸ್, ರೈಲ್ವೆ ನಿಲ್ದಾಣಗಳಲ್ಲಿಯೇ ಹಣ್ಣು-ತರಕಾರಿ ದೊರಕಿಸಿ ಕೊಡುವ ವ್ಯವಸ್ಥೆ ಮಾಡಿದೆ. ಪ್ರಾಯೋಗಿಕವಾಗಿ ಇದೀಗ ರಾಜ್ಯದ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಇಂತಹ ಯಂತ್ರವನ್ನು ಪ್ರಯೋಗಕ್ಕೆ ಇಳಿಸಿದ್ದು, ಮುಂದಿನ ದಿನಗಳಲ್ಲಿ ಜನರ ಪ್ರತಿಕ್ರಿಯೆ ಆಧರಿಸಿ, ಇತರೆಡೆಗಳಲ್ಲಿ ವಿಸ್ತರಣೆ ಮಾಡಲಿದೆ. ಇದರಿಂದ ಸಂಜೆ, ಬೆಳಿಗ್ಗೆ ಏನ್ ಅಡುಗೆ ಮಾಡೋದು. ತರಕಾರಿಗೆ ಹೋಗಿ ಬರಬೇಕಲ್ಲ, ಹಣ್ಣು ತಗೊಂಡು ಹೋಗಬೇಕಲ್ಲಾ ಎಂದು ಚಿಂತೆ ಮಾಡುತ್ತಿರುವರಿಗೆ ಸಾಕಷ್ಟು ಅನುಕೂಲವಾಗಿದೆ.

ಹೇಗೆ ಸಿಗುತ್ತೆ ತರಕಾರಿ?

source: active.com

ರೈಲ್ವೆ, ಬಸ್ ನಿಲ್ದಾಣಗಳ ಬಳಿಯಲ್ಲಿಯೇ ರಾಜ್ಯದ ತೋಟಗಾರಿಕಾ ಇಲಾಖೆಯ ಹಣ್ಣು-ತರಕಾರಿ ಮಾರಾಟದ ಒಂದು ವಾಹನ ನಿಂತಿರಲಿದೆ. ಇದರ ಬಳಿ ಸಾರ್ವಜನಿಕರು ತೆರಳಿ, 10 ಅಥವಾ 20 ರೂಗಳನ್ನು ಯಂತ್ರದೊಳಗೆ ತೂರಿಸಿ, ನಿಮಗೆ ಬೇಕಾದ ಹಣ್ಣು-ತರಕಾರಿಗಳನ್ನು ಗುಂಡಿ ಒತ್ತಿದರೇ ಸಾಕು, ಯಂತ್ರದ ಮೂಲಕ ಪಡೆದುಕೊಳ್ಳಬಹುದಾಗಿದೆ. ಇಂತಹ ಮಾರಾಟ ಮಳಿಗೆಯ ಯಂತ್ರವನ್ನು ಸದ್ಯದಲ್ಲಿಯೇ ತೋಟಗಾರಿಕಾ ಇಲಾಖೆಯ ಮೂಲಕ 23 ಕಡೆಯಲ್ಲಿ ಆರಂಭಿಸಲಿದೆ. ಈ ಮೂಲಕ ಮಾರಾಟ ಯಂತ್ರದ ಮೂಲಕ ರೈಲ್ವೆ, ಬಸ್ ನಿಲ್ದಾಣಗಳಲ್ಲಿಯೇ ನಿಮಗೆ ಹಣ್ಣು-ತರಕಾರಿ ಒದಗಿಸಿಕೊಡುವ ಸೌಲಭ್ಯವನ್ನು ತೋಟಗಾರಿಕಾ ಇಲಾಖೆ ಮಾಡಲಿದೆ. ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ತೋಟಗಾರಿಕೆ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್, ಹಣ್ಣು-ತರಕಾರಿ ಮಾರಾಟ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗಿದೆ ಸದ್ಯದಲ್ಲಿಯೇ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಯಲ್ಲಿ ಈ ಸೇವೆ ದೊರೆಯುತ್ತೆ ಎಂದು ಹೇಳಿದ್ದಾರೆ.