ದೀಪಾವಳಿ ಹಬ್ಬಕ್ಕೆ ಟ್ರೈನ್-ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ..

0
691

ದೂರದ ನಗರಗಳಿಂದ ದಿಪಾವಳಿಗೆಂದು ಊರಿಗೆ ಹೋಗುವುದು ಹರ ಸಾಹಸವೇ ಬಸ್ ಗೆ ಹೋಗ್ಬೇಕು ಅಂದ್ರೆ 500 ರೂ ಇರುವ ಚಾರ್ಜ್ 2000 ಕ್ಕೆ ಏರುತ್ತೆ. ಆದಕಾರಣ ಏನಾದ್ರು ಮಾಡಿ ರೈಲ್ ನಲ್ಲೆ ಹೋಗಬೇಕು ಅಂತ ತುಂಬಾ ಜನರು ಹರಸಾಹಸ ಪಡುತ್ತಾರೆ. ಅದರಲ್ಲಿ ದಿಪಾವಳಿಗೆ ಎಲ್ಲರೂ ಊರಿಗೆ ಹೋಗುವರೆ ಆದಕಾರಣ ಪ್ರಯಾಣ ಮಾಡುವುದು ಅಷ್ಟೊಂದು ಸರಳವಲ್ಲ ಮತ್ತೆ train reservation ಮಾಡುಬೇಕು ಅಂದ್ರೆ 2 ತಿಂಗಳ ಮುಂಚೆಯೇ ಬುಕ್ ಮಾಡಿರಬೇಕು ಒಂದು ವೇಳೆ ಬುಕಿಂಗ್ ಕಾಲಿ ಇದ್ದರು ತಿಂಗಳ ಮೊದಲಿಗೆ ಊರಿಗೆ ಹೋಗುವುದು ಯಾವಾಗೆ ಅಂತ ಗ್ಯಾರಂಟಿ ಇರೋದಿಲ್ಲ ಅದಕ್ಕೆ ಒಂದು ವಾರದ ಮೊದಲು ಟ್ರೈನ್ ಬುಕ್ ಮಾಡಿದರೆ ವೈಟಿಂಗ್ ಅಂತ ಇರುತ್ತೆ, ಒಂದು ವೇಳೆ ನಿಮ್ಮ ಬುಕಿಂಗ್ ವೈಟಿಂಗ್ ಇದ್ರೆ ಈ ಮಾಹಿತಿ ನೋಡಿ.


Also read: LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

ಆನ್​ಲೈನ್ ಮೂಲಕ ನೀವು ಟಿಕೇಟ್​ ಬುಕ್​ ಮಾಡುವಾಗ IRCTC ಕ್ಲಾಸ್​ ಅಪ್​ಗ್ರೇಡೇಶನ್ ಆಯ್ಕೆಯನ್ನು ನೀಡುತ್ತದೆ. ಇಲ್ಲಿ ವೈಟಿಂಗ್​ ಲೀಸ್ಟ್​ನಲ್ಲಿರುವ ಟಿಕೆಟ್​ನ್ನು ಆಟೋ ಅಪ್​ಗ್ರೇಡೇಶನ್ ಅಡಿಯಲ್ಲಿ ಖಾಲಿಯಿರುವ ಉನ್ನತ ಶ್ರೇಣಿಯ ಸೀಟುಗಳಿಗೆ ಅಪ್​ಗ್ರೇಡ್​ ಮಾಡಲಾಗುತ್ತದೆ. ಅಂದರೆ ನೀವು ಜನರಲ್ ಟಿಕೆಟ್ ಬುಕ್ ಮಾಡಿ ವೈಟಿಂಗ್​ನಲ್ಲಿದ್ದರೆ, ಎಸಿ ಕೋಚ್​ನಲ್ಲಿ ಸೀಟುಗಳಿದ್ದರೆ ಅದು ನಿಮಗೆ ಸಿಗುತ್ತದೆ. ಈ ಅವಕಾಶವನ್ನು IRCTC ಸಂಸ್ಥೆ ಪ್ರಯಾಣಿಕರಿಗೆ ತಮ್ಮ ಟಿಕೆಟ್​ಗಳನ್ನು ಅಪ್ಡೇಟ್​​ ಮಾಡುವ ಅವಕಾಶವನ್ನು ಒದಗಿಸುತ್ತಿದೆ. ಒಂದು ವೇಳೆ ನೀವು ಟಿಕೆಟ್​ ಬುಕ್ಕಿಂಗ್ ಮಾಡುವಾಗ ಅಪ್​ಗ್ರೇಡ್​ ಆಯ್ಕೆಯನ್ನು ಆರಿಸಿಕೊಳ್ಳದಿದ್ದರೆ , ನಿಮ್ಮ ಟಿಕೆಟ್​​ ಪಿಎನ್​ಆರ್ ಅಪ್​​ಗ್ರೇಡ್​ ಪಟ್ಟಿಯಲ್ಲಿ ಇರುವುದಿಲ್ಲ. IRCTC ಪ್ರಕಾರ, ರಿಯಾಯಿತಿ ಮೇಲಿನ ಟಿಕೆಟ್, ಉಚಿತ ಪಾಸ್ ಹೊಂದಿರುವವರು ಮತ್ತು ಹಿರಿಯ ನಾಗರೀಕರ ಟಿಕೇಟ್​ಗಳ ಮೇಲೆ ಈ ಅಪ್​ಗ್ರೇಡ್​ ಆಯ್ಕೆ ನೀಡಲಾಗುವುದಿಲ್ಲ. ಟಿಕೆಟ್​ ಪಟ್ಟಿ​ ರೂಪಗೊಳ್ಳುವಾಗ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಮೂಲಕ ಇಲ್ಲಿ ಟಿಕೆಟ್​ಗಳು ಸ್ವಯಂ ಅಪ್​ಗ್ರೇಡ್​ ಆಗುತ್ತದೆ. ಈ ಯೋಜನೆಯಲ್ಲಿ ಟಿಕೇಟ್ ನಿರೀಕ್ಷಕರು ಪ್ರಯಾಣಿಕರನ್ನು ಆಯ್ಕೆ ಮಾಡುವ ಯಾವುದೇ ವ್ಯವಸ್ಥೆ ಇರುವುದಿಲ್ಲ.


Also read: ಇಲ್ಲಿವೆ 3 ಸಾವಿರ ವರ್ಷಗಳ ಹಿಂದಿನ ಹುಣಸೆ ಮರಗಳು; ಬೇಡಿಕೊಂಡ ವರವನ್ನು ಪಾಲಿಸುವ ಕಲ್ಪವೃಕ್ಷದ ಹಣ್ಣನ್ನು ಸೇವಿಸಿದರೆ ಗುಪ್ತರೋಗಗಳು ಮಾಯವಾಗುತ್ತೆ..

ಹಿಂದಿನ ವ್ಯವಸ್ಥೆ ಹೇಗಿತ್ತು?

ಮೊದಲಿಗೆ ಬುಕ್ ಮಾಡುವಾಗ ವೈಟಿಂಗ್ ತೋರಿಸಿದರೆ ಅದು ticket confirmation ಆದರೆ ಮಾತ್ರ ಪ್ರಯಾಣಿಸಬಹುದಿತ್ತು, ನೀವು ಯಾವ ದರ್ಜೆಯ ಸಿಟ್-ಗೆ ಬುಕ್ ಮಾಡಿರುತ್ತೀರ ಅದೇ ಅರ್ಜೆಯಲ್ಲಿ ಸಿಟ್ ಕಾಲಿಯಾದರೆ ಮಾತ್ರ ನಿಮ್ಮ ವೈಟಿಂಗ್ confirmation ಆಗುತ್ತಿತು ಅವಾಗೆ ನೀವು ಪ್ರಯಾಣ ಮಾಡಬಹುದಿತ್ತು ಒಂದು ವೇಳೆ ಬೇರೆ ದರ್ಜೆಯಲ್ಲಿ ಕಾಳಿ ಇದ್ದರು ನಿಮ್ಮ ವೈಟಿಂಗ್ confirmation ಆಗುತ್ತಿರಲಿಲ್ಲ.

ಹೊಸ ವ್ಯವಸ್ಥೆ ಹೇಗಿದೆ?


Also read: ಈ ವಯಾಗ್ರ ಗಿಡದ ಬೇರು ಕೋಟಿ ಕೋಟಿ ಬೆಲೆಬಾಳುತ್ತೆ ಅಂತೆ; ಇದನ್ನು ನೋಡಿದ್ರೆ ಅಚ್ಚರಿಯಾಗತ್ತಿರ…

ಈ ಹೊಸ ಯೋಜನೆಯ ಮೂಲಕ ವೈಟಿಂಗ್ ಲೀಸ್ಟ್​ನಲ್ಲಿರುವ ಟಿಕೆಟ್​ದಾರರು ಸೀಟ್ ದೃಢಪಡಿಸಿಕೊಳ್ಳಬಹುದು. ಇಲ್ಲಿ ವೈಟಿಂಗ್ ಲೀಸ್ಟ್​ ಇರದಿದ್ದರೆ ಯಾವುದೇ ಟಿಕೇಟ್​ನ ನವೀಕರಣ ಇರುವುದಿಲ್ಲ. ​ಟಿಕೆಟ್ ಅಪ್​ಗ್ರೇಡ್​ ನಂತರ ಕೂಡ ನಿಮ್ಮ ಪಿಎನ್​ಆರ್​ ಸಂಖ್ಯೆ ಒಂದೇ ಆಗಿರುತ್ತದೆ. ಅಲ್ಲದೆ ಈ ಪಿಎನ್​ಆರ್ ಮೂಲಕ ಪಿಆರ್​ಎಸ್​ನ ಪೂರ್ಣ ಮಾಹಿತಿಯನ್ನು ಪಡೆಯಬಹುದು ಎಂದು ಭಾರತೀಯ ರೈಲ್ವೇ ಇಲಾಖೆ ತಿಳಿಸಿದೆ.