ಸದೃಢ ಆರೋಗ್ಯದ ಅಮೂಲ್ಯ ಉಪಾಯಗಳು!!

0
917

Kannada News | Health tips in kannada

ಸದೃಢ ಆರೋಗ್ಯದ ಉಪಾಯಗಳು

• ನಿಮ್ಮ ದೇಹ ಬಲಿಷ್ಠವಾಗಲು ರಾತ್ರಿಯ ಊಟದ ಬದಲಿಗೆ 2 ಬಾಳೆಹಣ್ಣು ಹಾಗೂ ತೆಂಗಿನಕಾಯಿಯನ್ನು ಸೇವಿಸಿ.
• ಚರ್ಮದ ಕಾಂತಿ ಹೆಚ್ಚಳಕ್ಕೆ ಬೆಟ್ಟದ ನೆಲ್ಲಿಕಾಯಿ ಬೀಜ ತೆಗೆದು, ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಪ್ರತಿದಿನವೂ ಸ್ವಲ್ಪ ಪುಡಿಯನ್ನು ಸೇವಿಸಬೇಕು.
• ಮೈ-ಕೈಯಲ್ಲಿ ಕಾಣಿಸಿಕೊಳ್ಳುವ ನೋವು ನಿವಾರಣೆಗೆ ಬಿಲ್ವಪತ್ರೆ ಹಾಗೂ ಗರಿಕೆ ಹುಲ್ಲಿನ ರಸವನ್ನು ಪ್ರತಿನಿತ್ಯ ಬೆಳಗ್ಗೆ ಒಂದು ಚಿಕ್ಕ ಲೋಟ ಸೇವಿಸಿ
• ಬೇವಿ ಮರದ ತೊಗಟೆಯನ್ನು ಕುಟ್ಟಿ ಪುಡಿ, ಮೈಗೆ ಹಚ್ಚಿಕೊಂಡು 20 ನಿಮಿಷಗಳ ನಂತರ ಸ್ನಾನ ಮಾಡಿ. ಇದರಿಂದ ದೇಹದಲ್ಲಿ ಕಾಣಿಸಿಕೊಳ್ಳುವ ನವೆ ಹಾಗೂ ಊತಗಳು ನಿವಾರಣೆಯಾಗುತ್ತದೆ.
• ಮೆಂತ್ಯ ಸೊಪ್ಪು ಅಥವಾ ಕಾಳನ್ನು ದಿನ ಬಿಟ್ಟು ದಿನ ಅಡುಗೆಯಲ್ಲಿ ಬಳಕೆ ಮಾಡಿದರೆ ದೇಹದ ಉಷ್ಣತೆಯು ಕಡಿಮೆಯಾಗಿ ತಂಪಾಗಿರುತ್ತದೆ.
• ಪಪ್ಪಾಯಿ ಹಣ್ಣನ್ನು ಸತತವಾಗಿ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಂಡರೆ ದೇಹದಲ್ಲಿ ಕಾಣಿಸಿಕೊಳ್ಳುವ ಬಲಹೀನತೆಯು ದೂರವಾಗುತ್ತದೆ.
• ಜೀರಿಗೆ ಹುರಿದು ಪುಡಿ ಮಾಡಿಟ್ಟುಕೊಂಡು ಅದನ್ನು ಬಾಳೆಹಣ್ಣಿನೊಂದಿಗೆ ಸೇವಿಸಿದರೆ ಸುಖಕರವಾದ ನಿದ್ರೆ ಬರುತ್ತದೆ.

ಎಲ್ಲ ಚರ್ಮ ವ್ಯಾಧಿಗೆ ಲಿಂಬೆ

ಪ್ರತಿದಿನ ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ಒಂದು ದೊಡ್ಡ ನಿಂಬೆಯಣ್ಣಿನ ರಸವನ್ನು ಪೂರ್ತಿ ಹಿಂಡಿ ಬರಿ ಹೊಟ್ಟೆಗೆ ಕುಡಿಯಬೇಕು. ಇದಕ್ಕೆ ಸಕ್ಕರೆ ಉಪ್ಪು ಏನನ್ನೂ ಹಾಕಬಾರದು. ಇದರಿಂದ ಚರ್ಮ ವ್ಯಾಧಿಗಳು ನಿವಾರಣೆಯಾಗುವುದಲ್ಲದೆ ದೇಹಕಾಂತಿಯು ಹೆಚ್ಚುತ್ತದೆ.
ಆರೋಗ್ಯಕ್ಕೆ ಕೆಂಪು ಮೂಲಂಗಿ
• ಕೆಂಪು ಮೂಲಂಗಿಯ ಜ್ಯೂಸ್ ತೆಗೆದು ಅದಕ್ಕೆ ನಿಂಬೆರಸ, ಸಕ್ಕರೆ ಹಾಕಿ ಸೇವುಸತ್ತಾ ಬಂದರೆ ಕೆಮ್ಮು, ದಮ್ಮು, ಸಂಧಿವಾತ ರೋಗಗಳು ಗುಣವಾಗುತ್ತದೆ.
• ಹಸಿ ಕೆಂಪು ಮೂಲಂಗಿಯನ್ನು ಆಗಿದು ತಿನ್ನುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ. ಹಾಗೂ ವಸಡುಗಳಿಂದ ಉಂಟಾಗುವ ರಕ್ತಸ್ರಾವ ನಿಂತು ಹೋಗುತ್ತದೆ.

ಜೇನು ದಿವ್ಯೌಷಧಿ

ಅರ್ಧ ಚಮಚ ನೆಲ್ಲಿಕಾಯಿ ಪುಡಿಗೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿಕೊಂಡು ಪ್ರತಿದಿನ ಮುಂಜಾನೆ ಸೇವಿಸಿದರೆ ರಕ್ತಶುದ್ಧಿಯಾಗುತ್ತದೆ.
ದಾಲ್ಚಿನಿ ಚಕ್ಕೆಯಪುಡಿಯನ್ನು ಜೇನುತುಪ್ಪದಲ್ಲಿ ಕಲಸಿಕೊಂಡು ಪ್ರತಿದಿನ ಎರಡು ಸಲ ಸೇವಿಸುತ್ತಿದ್ದರೆ ಸಂಧಿವಾತವನ್ನು ಹತೋಟಿಯಲ್ಲಿಡಬಹುದು.

Also Read: ಬೆನ್ನಿನ ಮೇಲೆ ಗುಳ್ಳೆಗಳು ಬಂದಿದ್ರೆ, ತಲೆ ಕೆಡಿಸ್ಕೊಬೇಡಿ!! ಈ ಸುಲಭ ಉಪಾಯಗಳನ್ನ ಪಾಲಿಸಿ..

Watch: