ಗೂಗಲ್ ಬಳಕೆಯಿಂದ ಎಷ್ಟೊಂದು ಪ್ರಯೋಜನ ಅಂದ್ರೆ, ಅಕ್ರಮ ಸಂಬಂಧವನ್ನು ಕೂಡ ಪತ್ತೆಹಚ್ಚುತ್ತೆ ಅದು ಹೇಗೆ ಅಂತೀರ, ಮುಂದೆ ಓದಿ!!

0
2184

ಇಂಟರ್ನೆಟ್ ಬಂದಾಗಿನಿದ ಒಳ್ಳೆಯದು ಎಷ್ಟಾಗಿದೆ ಅಷ್ಟೇ ಕೆಟ್ಟದು ಹೆಚ್ಚಾಗಿದೆ ಅದರಲ್ಲಿ facebook, whatsapp ನಿಂದ ಯುವಕ-ಯುವತಿಯರ ಮೇಲೆ ಹೆಚ್ಚಿನ ಕೆಟ್ಟ ಪರಿಣಾಮಗಳು ಬಿರುತ್ತಿರುವುದು ಎಲ್ಲರಿಗೂ ತಿಳಿದಿರುವುದೇ ಅದು ಅಷ್ಟೇ ಅಲ್ಲ ಅಕ್ರಮ ಸಂಬಂಧಗಳು ಕೂಡ ಹೆಚ್ಚಾಗುತ್ತಿವೆ. ಇಂತಹ ಅನ್ಯೆತಿಕ ಸಂಬಂಧಗಳಿಂದ ಅದು ಎಷ್ಟೋ ಕುಟುಂಬಗಳು ಒಡೆದುಹೋಗಿವೆ, ಎಷ್ಟೋ ಮಕ್ಕಳು ತಂದೆ ತಾಯಿಯ ಪ್ರೀತಿಯನ್ನು ಕಳೆದುಕೊಂಡಿದ್ದಾರೆ , ಹಾಗೆಯೇ ಒಂದು ವರ್ಷದಲ್ಲಿ ನೂರಾರು ಜನರ ಪ್ರಾಣವನ್ನೇ ಬಲಿ ತೆಗೆದುಕೊಳ್ಳುತ್ತಿದೆ ಈ ಅಕ್ರಮ ಸಂಬಂಧ. ಈ ಕಳ್ಳರ ಆಟದಿಂದ ಗಂಡ ಹೆಂಡತಿಗೆ ಮೋಸ ಮಾಡಬಹುದು ಇಲ್ಲ ಹೆಂಡತಿ ಗಂಡನಿಗೆ ಮೋಸ ಮಾಡಬಹುದು ಒಟ್ಟಿನಲ್ಲಿ ಹಾಳಾಗುವುದು ಅವರದೇ ಸಂಸಾರ.

ಪ್ರತಿದಿನ ಬೆಳಗಾದ್ರೆ ಸಾಕು ಪೇಪರ್, ಮಾಧ್ಯಮಗಳಲ್ಲಿ ಅದರದೇ ಸುದ್ದಿ ಇದರಿಂದ ಸಂಸಾರದಲ್ಲಿ ನಂಬಿಕೆ ವಿಶ್ವಾಸವೇ ಕಳೆದುಹೋಗಿದೆ ಇದೆಲ್ಲ ಆಗುತ್ತಿರುವುದು ಬಹುತೇಕವಾಗಿ ಈ ಇಂಟರ್ನೆಟ್ ಇಂದ ಅನಿಸಿದ್ರೂ ಇದೆ ‘ಗೂಗಲ್’ನಿಂದ ಅಕ್ರಮ ಸಂಬಂಧ ಒಂದು ಹೊರ ಬಿದ್ದು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ನಡುಗು ಹುಟ್ಟಿಸಿದೆ ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ. ಗುಜರಾತಿನಲ್ಲಿ ಐದು ವರ್ಷದ ಹಿಂದೆ ಮದುವೆ ನಡೆದಿತ್ತು ಆ ಸಂಸಾರ ಬಹಳ ಸುಖಸಾಗರದಲ್ಲಿ ಮುಳುಗಿತ್ತು ಹಾಗೆ ಒಂದು ಗಂಡು ಮಗು ಜನಿಸಿತು ಇದ್ದಾದ 6 ತಿಂಗಳ ನಂತರ ಗಂಡನಿಗೆ ದುಬೈಯಲ್ಲಿ ಹೆಚ್ಚು ಸಂಬಳ ಬರುವ ಒಂದು ಕೆಲಸ ಸಿಕ್ಕಿತು. ಗಂಡ ಸಂತೋಷದಿಂದ ವಿದ್ದೇಶಕ್ಕೆ ಹೊರಟುಹೋದ.

ಮಗು ಇನ್ನೂ ಚಿಕ್ಕದಾಗಿದ್ದರಿಂದ ಹೆಂಡತಿಯನ್ನು ಭಾರತದಲ್ಲಿ ಬಿಟ್ಟು ಹೋದ ಮಗು ಸ್ವಲ್ಪ ದೊಡ್ಡದಾದ ಮೇಲೆ ಕರೆದುಕೊಂಡು ಹೋಗುವ ವಿಚಾರದಲ್ಲಿ ಹೆಂಡತಿಗೆ ಸಮಾಧಾನ ಮಾಡಿದ್ದ. ಹಾಗೆಯೇ ಹೆಂಡತಿಗೆ ಒಂದು ಸ್ಮಾರ್ಟ್ ಫೋನ್ ಕೂಡ ಕೊಡಿಸಿಹೊಗಿದ್ದ ಪ್ರತಿದಿನವೂ ಆ mobile ನಲ್ಲಿ ವೀಡಿಯೊ ಕಾಲ್ ಮಾಡಿ ಪ್ರೀತಿಯನ್ನು ಹಂಚಿಕೊಳುತ್ತಿದ. ಆದ್ರೆ ವೀಡಿಯೊ ಕಾಲ್ ಮಾಡಲು ಪ್ರತಿಯೊಂದು ಫೋನ್ ಗೂಗಲ್ ಅಕೌಂಟ್ ಹೊಂದಿರಲೇಬೇಕು ಆದಕಾರಣ ಅವನು ತನ್ನದೇ ಅಕೌಂಟ್ ಲಾಗಿನ್ ಮಾಡಿದ ಹಾಗೆ ಬ್ಯಾಕಪ್ ಕೂಡ ಆನ್ ಮಾಡಿದ ಇದರಿಂದ ಹೆಂಡತಿ ಮೊಬೈಲ್ ನಲ್ಲಿ ಕ್ಲಿಕ್ ಮಾಡಿದ ಎಲ್ಲ ಫೋಟೋಸ್ ಅವನ ಗೂಗಲ್’ನಲ್ಲಿ ಸೇವ್ ಆಗುತ್ತಿತು ಒಂದು ವೇಳೆ ಫೋಟೋಸ್ ಡಿಲೀಟ್ ಮಾಡಿದರು ಬ್ಯಾಕಪ್ ಮಾಡಿದ್ರೆ ಎಲ್ಲ ಫೋಟೋಸ್ ಓಪನ್ ಆಗುತ್ತೆ ಈ ವಿಷಯವನ್ನು ಹೆಂಡತಿಗೆ ತಿಳಿಸಿರಲಿಲ್ಲ ಅವಳಿಗೆ ಹೇಳುವ ಟೈಮ್ ಕೂಡ ಬಂದಿರಲಿಲ್ಲ.

ಹಾಗೆ ಒಂದು ದಿನ ದುಬೈನಲ್ಲಿರುವ ಗಂಡ ಗೂಗಲ್ ಬ್ಯಾಕಪ್ ಮಾಡಿದಾಗೆ ಅವನಿಗೆ ದೊಡ್ಡದೊಂದು ಶಾಕ್ ಕಾದಿತ್ತು ಅದು ಏನ್ ಅಂದ್ರೆ ತನ್ನ ಹೆಂಡತಿ ಬೇರೊಂದು ಪುರುಷನ ಜತೆ ಸಲಿಗೆಯಿಂದ ಇರುವ ಫೋಟೋಸ್ ಬಂದವು ಆ ಫೋಟೋಸ್ ಅಲ್ಲಿ ಇರುವಷ್ಟು ಹತ್ತಿರವಾಗಿ ಸ್ವಂತಗಂಡನು ಕೂಡ ಇರ್ಲಿಲ್ಲವಂತೆ ಅಷ್ಟೊಂದು ಕೆಟ್ಟ ಇಮೇಜ್ ನೋಡಿದ ಗಂಡನಿಗೆ ಸಿಡಿಲು ಹೊಡೆದಂತೆ ಆಯಿತು. ಇದನೆಲ್ಲ ಸಹಿಸಿಕೊಳ್ಳಲು ಆಗದ ಆ ವ್ಯಕ್ತಿ ಭಾರತಕ್ಕೆ ಬಂದು ತನ್ನ ಹೆಂಡತಿಯ ರಾಸಲಿಲೆಯನ್ನು ಮನೆಯ ಹಿರಿಯರಿಗೆ ತಿಳಿಸಿದ ಈ ವಿಷಯದ ವಿರುದ್ದ ಹೆಂಡತಿಯನ್ನು ವಿಚಾರಿಸಿದಾಗ ಅವಳು ತನ್ನ ತಪ್ಪನ್ನು ಒಪ್ಪಿಕೊಂಡಳು ಈಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ ಡೈವರ್ಸ್ ನಡೆಯುತ್ತಿದೆ. ಇದೆಲ್ಲ ಪತ್ತೆಯಾಗಿರುವುದು ಗೂಗಲ್ ನಿಂದ. ಇಂತಹ ಪ್ರಕರಣವನ್ನು ಬಯಲಿಗೆ ಎಳೆದಿದ್ದು ಸರಿನೋ ತಪ್ಪೋ ಗೊತ್ತಿಲ್ಲ ಆದ್ರೆ ಇದರಿಂದ ಯಾರಿಗೆ ಒಳ್ಳೇದು ಆಗುತ್ತೆ ಅನ್ನೋದು ಓದುಗರಿಗೆ ಗೊತ್ತು.