ಗೋಪಾಲಪುರದ ಮಾರಮ್ಮನ ಶಕ್ತಿಯ ಬಗ್ಗೆ ಕೇಳಿದರೆ ಖಂಡಿತ ಆಶ್ಚರ್ಯವಾಗುವುದು.. ನಂಬಿದವರಿಗೆ ಎಂದೂ ಕೈಬಿಡದ ಅತ್ಯಂತ ಶಕ್ತಿಯುತ ದೇವರು..

0
2182

ಗೋಪಾಲಪುರದ ಮಾರಮ್ಮ ಎಂದರೆ ಒಂದು ಕ್ಷಣ ಅಲ್ಲಿನ ಜನರ ಮೈ ಜುಮ್ಮೆನ್ನುತ್ತದೆ.. ಏಕೆಂದರೆ ಆ ತಾಯಿಯ ಶಕ್ತಿ ಅಂತದ್ದು.. ಆ ದೇವರನ್ನು ನಂಬಿದವರಿಗೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ.. ಜೊತೆಗೆ ನಂಬಿದವರು ಕೂಡ ಯಾರಿಗೂ ಮೋಸ ಮಾಡುವುದಿಲ್ಲ.. ಇದಕ್ಕೆ ಕಾರಣ ದೇವಿಯ ಮೇಲಿನ ಭಯವೂ ಹೌದು.. ಇದು ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಗೋಪಾಲಪುರ ಎಂಬ ಗ್ರಾಮದ ದೇವತೆ..

ಆದರೆ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಇಡೀ ಕರ್ನಾಟಕದಿಂದ ಜನರು ಬರುತ್ತಾರೆ.. ಸರ್ಕಾರ ದಿಂದ ಹೆಚ್ಚಿನ ಬಸ್ ಸೌಲಭ್ಯವನ್ನು ಕೂಡ ಜಾತ್ರೆಯ ಸಂದರ್ಭದಲ್ಲಿ ಮಾಡಲಾಗುತ್ತದೆ. ಇನ್ನು ದೇವಿಯ ಬಗ್ಗೆ ಹೇಳಬೇಕೆಂದರೆ.. ಅತ್ಯಂತ ಶಕ್ತಿಶಾಲಿ ದೇವರು.. ಆ ತಾಯಿಯ ಶಕ್ತಿಯ ಅನುಭವ ಆದವರಿಗೆ ಮಾತ್ರ ತಿಳಿಯುತ್ತದೆ ಅದು.. ಈ ತಾಯಿಗೆ ನಿಷ್ಠೆಯಾಗಿದ್ದರೆ ಇಲ್ಲಿ ಹರಸಿಕೊಂಡವರ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ..

ದೇವಸ್ಥಾನಕ್ಕೆ ಬಂದು ಹರಕೆ ಕಟ್ಟಿಕೊಳ್ಳಬೇಕೆಂದೇನಿಲ್ಲ.. ತಾಯಿಯ ದೇವಸ್ಥಾನ ಇರುವ ದಿಕ್ಕು ಅಂದರೆ ಮೈಸೂರು ಇರುವ ದಿಕ್ಕಿನ ಕಡೆ ಮುಖ ಮಾಡಿ ಭಕ್ತಿಯಿಂದ ಕೈ ಮುಗಿದು ಎಲ್ಲಿಂದ ಬೇಕಾದರೂ ಹರಕೆ ಕಟ್ಟಿಕೊಳ್ಳಬಹುದು.. ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆಯಲ್ಲಿ ಬಂದು ಹರಕೆ ತೀರಿಸುವವರು ಸಾವಿರಾರು ಮಂದಿ. ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಬೀಳುವ ಈ ಜಾತ್ರಾ ಮಹೋತ್ಸವ ಮಂಗಳವಾರ ಮತ್ತು ಬುಧವಾರದಂದೇ ಇರುತ್ತದೆ.. ಮಂಗಳವಾರ ರಾತ್ರಿ ಮೆರವಣಿಗೆ ಕುಣಿತ ಬಾಯಿ ಬೀಗ ರಾತ್ರೀ ಪೂರ್ತಿ ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಇನ್ನು ಬುಧವಾರ ಬೆಳಗ್ಗಿನ ಜಾವ 4 ಘಂಟೆ ಸುಮಾರಿಗೆ ಎಲ್ಲರೂ ಹರಕೆ ರೂಪದಲ್ಲಿ ಇಲ್ಲಿ ಕುರಿ ಕೋಳಿಯನ್ನು ನೀಡುತ್ತಾರೆ.. ದೂರವಿರುವವರು ಇಲ್ಲಿನ ತೀರ್ಥವನ್ನು ತೆಗೆದುಕೊಂಡು ಹೋಗಿ ಮನೆಯಲ್ಲೆ ಹರಕೆ ಒಪ್ಪಿಸುತ್ತಾರೆ. ಮಂಗಳವಾರ ರಾತ್ರಿ ನಡೆಯುವ ತಾಯಿಯ ಪೂಜೆಯಲ್ಲಿ ದೇವರ ಮೇಲೆ ಬೀಳುವ ಹಣ ಲಕ್ಷಗಳಿಗೂ ಮೀರಿದ್ದು.. ಹೀಗೆ ಒಮ್ಮೆ ಈ ದೇವಸ್ಥಾನದ ಹುಂಡಿಯಲ್ಲಿ ಹಣವನ್ನು ಕಳ್ಳತನ ಮಾಡಲು ಹೋಗಿ ಗ್ರಾಮಸ್ಥರ ಕೈಗೆ ಕೆಲವರು ಸಿಕ್ಕಿಹಾಕಿಕೊಂಡ ಉದಾಹರಣೆಗಳು ಇವೆ.. ತಪ್ಪು ಮಾಡಲು ಇಲ್ಲಿನ ಜನ ಹೆದರುತ್ತಾರೆ.. ನಿಮಗೂ ಏನಾದರು ಕೆಲಸಗಳು ನೆರವೇರಬೇಕಾದರೆ ತಾಯಿಯಲ್ಲಿ ಬೇಡಿಕೊಳ್ಳಿ.. ಒಳ್ಳೆಯದಾಗುತ್ತದೆ..

ಇನ್ನು ಈ ದೇವಸ್ಥಾನಕ್ಕೆ ಹೋಗುವ ಮಾರ್ಗ..

ಇದು ಮೈಸೂರಿನಿಂದ ಸುಮಾರು 16 ಕಿ.ಮೀ ದೂರದಲ್ಲಿದೆ..ಮೈಸೂರಿನಿಂದ ಮಾನಂದವಾಡಿಗೆ ಹೋಗುವ ಮಾರ್ಗದಲ್ಲಿ ಸಾಲುಂಡಿ ಎಂಬ ಗ್ರಾಮದ ಬಳಿ ಬಲಕ್ಕೆ 7 ಕಿ.ಮೀ ಹೋದರೆ ಗೋಪಾಲಪುರ ಗ್ರಾಮ ಸಿಗುವುದು.. ನಗರ ಬಸ್ ನಿಲ್ದಾಣದಿಂದ ಗೋಪಾಲಪುರಕ್ಕೆ ಬಸ್ ಸೌಲಭ್ಯ ಚೆನ್ನಾಗಿದೆ… ಯಾರೂ ಬೇಕಿದ್ದರೂ ನಿರಾಯಾಸವಾಗಿ ತಲುಪಬಹುದು..

ಶುಭವಾಗಲಿ ಶೇರ್ ಮಾಡಿ ಮಾಹಿತಿಯನ್ನು ಹಂಚಿ..