ಮುಖ್ಯಮಂತ್ರಿಅಧಿಕೃತ ನಿವಾಸ ‘ಅನುಗ್ರಹ’ದಲ್ಲಿ ದೆವ್ವ!

0
1385

ಬೆಂಗಳೂರು: ಮುಖ್ಯ ಮಂತ್ರಿ ಅಧಿಕೃತ ನಿವಾಸ ‘ಅನುಗ್ರಹ’ದಲ್ಲಿ ಅಗೋಚರ ಶಕ್ತಿಯಿಂದ ಕಂಟಕ ಎದುರಾಗುತ್ತಿದೆಯಂತೆ.

ಮುಖ್ಯ ಮಂತ್ರಿ ಅಧಿಕೃತ ನಿವಾಸ ‘ಅನುಗ್ರಹ’ದಲ್ಲಿ ಮುಖ್ಯಮಂತ್ರಿ, ಮಂತ್ರಿಯಾದವರು ಒಂದು ಅಧಿಕಾರ ಕಳೆದುಕೊಳ್ಳುತ್ತಾರೆ ಇಲ್ಲವೆ ಮತ್ತೆರಡು ಅಧಿಕೃತ ನಿವಾಸಗಳಾದ ‘ಕಾವೇರಿ’ ಅಥವಾ ‘ಕೃಷ್ಣ’ದಲ್ಲಿ ಇರಲು ಬಯಸುತ್ತಾರೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಭೂತಪ್ರೇತಗಳನ್ನು ಅಧ್ಯಯನ ಮಾಡುವ ಪ್ಯಾರಾನಾರ್ಮಲ್ ಪರಿಣಿತರ ಪ್ರಕಾರ  ‘ಅನುಗ್ರಹ’ದಲ್ಲಿ ಬೇರೊಂದು ಅಗೋಚರ ಶಕ್ತಿಯಿಂದ ಅಲ್ಲಿ ಇರಬಯಸುವ ಮುಖ್ಯ ಮಂತ್ರಿ, ಮಂತ್ರಿ ಮಹೋದಯರಿಗೆ ಕಂಟಕ ಎದುರಾಗುತ್ತಿದೆ ಎಂದು. ಇದಕ್ಕೆ ತಮ್ಮದೆ ಸಾಕ್ಷ್ಯಗಳನ್ನು ಸಹ ನೀಡುತ್ತಾರೆ ಇವರು.

cm-hous

ಭೂತಪ್ರೇತಗಳನ್ನು ಹೆಚ್ಚು ಅಭ್ಯಾಸಿಸುವ ಪ್ಯಾರ ನಾರ್ಮಲ್ ಪರಿಣಿತರಾದ ಅರ್ಚಾನ ಇದಕ್ಕೆ ತಮ್ಮದೆ ಅಭಿಪ್ರಾಯ ಮಂಡಿಸಿದ್ದಾರೆ. ‘ತಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್’ಗಳ ಮೂಲಕ ಮುಖ್ಯಮಂತ್ರಿ, ಮಂತ್ರಿಗಳ ಅಧಿಕೃಯ ನಿವಾಸ ‘ಅನುಗ್ರಹ’ದ ಸುತ್ತಮುತ್ತ ಪರೀಕ್ಷೆಗೊಳಪಡಿಸಿದಾಗ ಅಗೋಚರ ಶಕ್ತಿ ಓಡಾಡುವ ಚಲನೆ ಕಂಡುಬಂದಿದೆ ಎಂದಿದ್ದಾರೆ.

 

 

ಇತತ್ತೀಚಿಗೆ ಕಾಮಲೀಲೆ ಹಗರಣದಿಂದ ಅಧಿಕಾರ ಕಳೆದುಕೊಂಡ ಹೆಚ್. ವೈ. ಮೇಟಿಯಿಂದ ಹಿಡಿದು ಹೆಚ್.ಡಿ.ದೇವೆಗೌಡ, ಡಿ.ವಿ. ಸದಾನಂದ ಗೌಡ, ಎಸ್.ಆರ್.ಪಾಟೀಲ್ ಅವರು ಅನುಗ್ರಹದಲ್ಲಿ ವಾಸವಿದ್ದ ಕಾರಣ ಬೇಗನೆ ತಮ್ಮ ಅಧಿಕಾರ ಕಳೆಕೊಂಡಿದ್ದಾರೆ. ದೇವೆಗವಡರು ಪ್ರಧಾನಿ ಯಾದರೂ ಬೆಂಗಳೂರಿಗೆ ಬಂದಾಗ ಅನುಗ್ರಹದಲ್ಲೇ ಉಳಿಯುತ್ತಿದ್ದರು. ಅಲ್ಲಿ ಉಳಿಯುತ್ತಿರುವಾಗಲೇ ಅವರು 11 ತಿಂಗಳಿಗೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

 

ಎಸ್.ಎಂ.ಕೃಷ್ಣ, ಬಿಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹೆಚ್.ಡಿ.ಕುಮಾರಸ್ವಾಮಿ ಅನುಗ್ರಹದಲ್ಲಿ ವಾಸಿಸದೆ ಅಲ್ಲಿಂದ 500 ಮೀಟರ್ ದೂರದಲ್ಲಿರುವ ಕಾವೇರಿ ಅಥಾವ ಕೃಷ್ಣವನ್ನು ತಮ್ಮ ಅಧಿಕೃತ ನಿವಾಸ ಮಾಡಿಕೊಂಡರು.