ಕೊಡಗಿನ ಸಂತ್ರಸ್ತರಿಗೆ ಸಿಂಗಲ್​​ ಬೆಡ್​​​ರೂಮ್​​​ ಮನೆ ಬದಲಾಗಿ ಡಬ್ಬಲ್ ಬೆಡ್​​​ರೂಮ್ ಮನೆ ಕಟ್ಟಿಕೊಡಲು ಸರ್ಕಾರ ನಿರ್ಧಾರ..

0
494

ಕೊಡಗಿನಲ್ಲಿ ಸುರಿದ ಮಹಾಮಳೆಗೆ ಇಡಿ ಮಡಿಕೇರಿ ಜಿಲ್ಲೆಯೇ ತತ್ತರಿಸಿಹೊಗಿದೆ. ಆ ಕರಾಳ ನೆನಪು ಮಾಡಿಕೊಂಡರೆ ಎಂದು ಕಾಣದಂತ ಹಾನಿ ರಾಜ್ಯದಲ್ಲಿ ಆಗಿದು ಆ ಸಮಯದಲ್ಲಿ ಕೋಟ್ಯಾಧಿಪತಿಗಳು ಒಂದು ಹೊತ್ತಿನ ಊಟ ಬಟ್ಟೆಗಾಗಿ ಕೈಯೋಡಿ ಪರದಾಡಿದರು. ಈ ಘಟನೆಯಿಂದ ಇಡಿ ದೇಶವೆ ಬೇರಗಾಗಿ ಹೋಗಿದೆ. ಎಷ್ಟೋ ಮನೆಗಳು ಬುಡ ಸಮೇತವಾಗಿ ಉರುಳಿ ಅಪಾರವಾದ ಹಾನಿ ಸಂಭವಿಸಿ, ಎಷೋ ಜನರು ಪ್ರಾಣವನ್ನೇ ಕಳೆದುಕೊಂಡು ಇನ್ನೂ ಎಷ್ಟೋ ಕುಟುಂಬಗಳು ಬೀದಿಗೆ ಬಂದು ಸಹಾಯಕ್ಕಾಗಿ ಕೈಮುಗಿದು ನಿಂತ ಸಂಧರ್ಭವನ್ನು ನೆನಪಿಸಲು ಭಯವಾಗುತ್ತೆ. ಇಂತಹ ಪ್ರಕೃತಿ ವಿಕೋಪದಲ್ಲಿ ತುತ್ತಾದ ಜನರಿಗೆ ಸಾಹಾಯ ಮಾಡಲು ಸರ್ಕಾರ, ಸಂಘ ಸಂಸ್ಥೆಗಳು ಸಾಮಾನ್ಯ ಜನರು ಸಹಾಯ ಮಾಡಿ ಕೊಡಗನ್ನು ಮರು ನಿರ್ಮಾಣ ಮಾಡಲು ಕೈ ಜೋಡಿಸಿದರು.

Also read: ಮೈಸೂರು ಬೆಂಗಳೂರು ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ; ಇನ್ಮುಂದೆ ಮೈಸೂರಿಗೆ ಹೋಗಲು ಬರಿ 1. 20 ಗಂಟೆ ಸಾಕು..

ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿ ಕೊಡಲು ಹಾಗು ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸಲು ಸಮತ್ತು ನಿರೀಕ್ಷೆಗಿಂತ ಉತ್ತಮವಾಗಿ ಕೊಡಗನ್ನು ಮರು ನಿರ್ಮಾಣ ಮಾಡ್ತೇವೆ ಅಂತ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯುಟಿ ಖಾದರ್​​​ ಹೇಳಿದರು. ಇದೆ ವಿಷಯವಾಗಿ ಇಂದು ವಿಕಾಸಸೌಧದಲ್ಲಿ ಮಾತಾಡಿದ ಖಾದರ್ ಅವರು ಈಗಿರುವ ಸಿಂಗಲ್​​ ಬೆಡ್​​​ರೂಮ್​​​ ಮನೆಗಳನ್ನು ಡಬಲ್​​ ಬೆಡ್​ರೂಮ್​​ಗಳನ್ನಾಗಿಸಲು ಸರ್ಕಾರ ನಿರ್ಧರಿಸಲಾಗಿದೆ. ಕೊಡಗಿನಲ್ಲಿ ಭಾರೀ ಪ್ರವಾಹದಿಂದಾಗಿ ಜನ ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾರೆ. ನೆರೆ ಸಂತ್ರಸ್ತರಿಗೆ ಮಾದರಿ ಮನೆಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 101 ಕೋಟಿ ರೂ.ಗಳು ಅಗತ್ಯವಿದೆ. ಒಂದು ಒಳ್ಳೆಯ ಡಬಲ್​​ ಬೆಡ್​​ರೂಮ್​​ ಮನೆಗೆ ಕನಿಷ್ಠ 9.45 ಲಕ್ಷ ರೂಪಾಯಿಗಳು ವೆಚ್ಚವಾಗಲಿದೆ. ಈ ಯೋಜನೆಗೆ ಮುಖ್ಯಮಂತ್ರಿ ಅವರು ಒಪ್ಪಿಗೆ ನೀಡಿದ್ದು, ಹೆಚ್ಚುವರಿ ಅನುದಾನ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

Also read: 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್​ ರಮಫೊಸಾ ಒಪ್ಪಿಗೆ..

ವೈಜ್ಞಾನಿಕ ಮನೆ ನಿರ್ಮಾಣದ ಅವ್ಯಕತೆ ಇದೆ:

ನೂತನ ತಂತ್ರಜ್ಞಾನದ ಮೂಲಕ ಮನೆ ಕಟ್ಟಲಾಗುವುದು. ಕುಶಾಲನಗರ ಭಾಗದಲ್ಲಿ ಗುರುತಿಸಿದ ಜಾಗದಲ್ಲಿ ಮನೆ ಕಟ್ಟಲು ತಯಾರಿ ನಡೆಸಿದೆ. ಮನೆ ಕಳೆದುಕೊಂಡವರ ಸಮೀಕ್ಷೆಯ ಪ್ರಕಾರ ಕುಶಾಲನಗರದಲ್ಲಿ ಬಂದ ಮನೆ 836 ಅರ್ಜಿಗಳ ಪ್ರಕಾರ ಸುಭದ್ರವಾದ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಮುಂದೆ ಇಂತಹ ವಿಕೋಪಗಳು ಸಂಭವಿಸಿದರೂ ಮನೆಗಳು ಹಾನಿಯಾಗದ ಹಾಗೆ ಮನೆ ನಿರ್ಮಾಣ ಮಾಡಲಾಗುವುದು ಎಂದರು.

Also read: ವಿಟಮಿನ್ ಎ ಮಾತ್ರೆಗಳನ್ನು ಸೇವಿಸುವರು ಎಚ್ಚರ; ಅತಿಯಾದ ವಿಟಮಿನ್​ ಎ ಮಾತ್ರೆಗಳನ್ನು ಸೇವಿಸುವರ ಎಲುಬುಗಳ ಮೇಲೆ ದುಷ್ಟಪರಿಣಾಮ ಬೀರಲಿದೆ..

ಶಾಲೆ ಮನೆಗಳ ಮೇಲಿರುವ ಟವರ್​​ಗಳ ಸಮಸ್ಯೆಗೆ ಪರಿಹಾರ?

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಾಲೆ ಮತ್ತು ಮನೆಗಳ ಮೇಲೆ ಅಳವಡಿಸಿರುವ ಟವರ್​​ಗಳಿಂದ ಬಹುತೇಕವಾಗಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಸಾಕಷ್ಟು ದೂರುಗಳು ಬಂದಿರುವ ಕಾರಣದಿಂದಾಗಿ ಸರ್ಕಾರ ನೂತನ ಟವರ್​​ ನೀತಿಯನ್ನು ರೂಪಿಸಲು ಮುಂದಾಗಿದೆ. ಇದರ ಪ್ರಕ್ರಿಯೆ ಶೀಘ್ರದಲ್ಲಿಯೇ ಶುರುವಾಗಲಿದ್ದು ಶಾಲೆ ಮತ್ತು ವಸತಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮದಿಂದ ಮೊಬೈಲ್​​ ಟವರ್​​ ಸ್ಥಾಪಿಸಬೇಕಾಗುತ್ತದೆ. ಈ ಕುರಿತು ಡಿಸಿಎಂ ಡಾ.ಜಿ ಪರಮೇಶ್ವರ್​​ ಅವರ ಜತೆಗೆ ಸಮಾಲೋಚನೆ ಸಭೆಯನ್ನು ನಡೆಸಲಾಗುವುದು. ಬಳಿಕ ಒಂದು ಶಾಲೆ,ಮನೆ ಹತ್ತಿರದಲ್ಲಿ ಎಷ್ಟು ಅಂತರದಲ್ಲಿ ಟವರ್​​ ಸ್ಥಾಪಿಸಬೇಕು ಎಂದು ಚರ್ಚಿಸಲಿದ್ದೇವೆ. ಜನರು ಭಯಬಿಳ್ಳುವ ಅವಶ್ಯಕತೆ ಇಲ್ಲ ನೂತನ ಟವರ್​​​ ನೀತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.