ಕೇಂದ್ರ ಸರ್ಕಾರದಿಂದ ನೌಕರರ ವರ್ಗಕ್ಕೆ ಮತ್ತೊಂದು ಗಿಫ್ಟ್; ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿ ಹೆಚ್ಚಳ..

0
279

ಕೇಂದ್ರದ ಕೊನೆಯ ಬಜೆಟ್-ನಲ್ಲಿ ನೌಕರರ ವರ್ಗಕ್ಕೆ ಹಲವು ಬಂಪರ್ ನೀಡಿದ ನರೇಂದ್ರ ಮೋದಿ ಸರ್ಕಾರ, ಪಿಯೂಷ್ ಗೋಯಲ್ ಬಜೆಟ್ ನಲ್ಲಿ ಘೋಷಿಸಿದಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದ ನೌಕರರ ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ಕುರಿತು ಹೇಳಿತ್ತು. ಅದರಂತೆ ಸಾರ್ವಜನಿಕ ಮತ್ತು ಖಾಸಗಿ ವಲಯದ ನೌಕರರಿಗೆ ಅನುಕೂಲತೆ ನೀಡಿದ್ದು. ನೌಕರರ ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿಯನ್ನು ರೂ. 20 ಲಕ್ಷಗಳವರೆಗೆ ಏರಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ ಇದರಿಂದ ನೌಕರರಲ್ಲಿ ಮಂದಹಾಸ ಮೂಡಿದೆ.

Also read: Gratuity ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಅನೇಕ ಜನರಿಗೆ ನಷ್ಟವಾಗುತ್ತಿದೆ, Gratuity ಬಗ್ಗೆ ಸಂಪೂರ್ಣ ವಿವರ, ಹಾಗು ಅದನ್ನು ಹೇಗೆ ಪಡೆದುಕೊಳ್ಳಬೇಕು ಅಂತ ಓದಿ..

ಈ ಹಿಂದೆ ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿ ರೂ. 10 ಲಕ್ಷಗಳಿತ್ತು. ಇದೀಗ ಈ ಮಿತಿ ಅದರ ಎರಡರಷ್ಟು ಮಾಡಿದ್ದು ರೂ. 20 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಗ್ರಾಚ್ಯುಟಿ ಮೇಲಿನ ಆದಾಯ ತೆರಿಗೆ ಮಿತಿಯು 2018ರ ಮಾರ್ಚ್ 29 ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು ಕೇಂದ್ರ ಕಾರ್ಮಿಕ ಇಲಾಖೆ, ಮಾರ್ಚ್ 5 ರಂದು ಈ ಕುರಿತು ಆದೇಶ ಹೊರಡಿಸಿದ್ದು, ಪೇಮೆಂಟ್ ಆಫ್ ಗ್ರಾಚ್ಯುಟಿ ಕಾಯಿದೆ ವ್ಯಾಪ್ತಿಗೆ ಬಾರದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ನೌಕರರಿಗೆ ಇದರ ಲಾಭ ದೊರೆಯಲಿದೆ.

ಇದಕ್ಕೆ ಅರ್ಹರು ಯಾರು?

ಸೆಕ್ಷನ್ 10 (10) ಪ್ರಕಾರ, 0 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಲ್ಲಿ ಕನಿಷ್ಟ ಐದು ವರ್ಷಗಳ ನಿರಂತರ, ಸಂಪೂರ್ಣ-ಸಮಯದ ಉದ್ಯೋಗದ ಮಾಡಿದವರು ಅರ್ಹತೆ ಹೊಂದಿರುತ್ತಾರೆ. ಈ ಹಿಂದೆವೂ ಕೂಡ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ನೀಡಿತ್ತು. ಅದರಂತೆ ನೌಕರರ ಎಲ್ ಟಿಸಿ ಪ್ರಯೋಜನಗಳಲ್ಲಿ ಕೆಲವು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಇನ್ಮುಂದೆ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲೂ ಪ್ರಯಾಣಿಸುವ ಅನುವು ಮಾಡಿಕೊಟ್ಟಿತ್ತು.

Also read: ಎಲ್ಲಾ ನೌಕರರಿಗೆ ಸಿಹಿ ಸುದ್ದಿ, ಪ್ರತಿ ತಿಂಗಳು ನೀಮ್ಮ ಸಂಬಳದಲ್ಲಿ ಕಟ್ ಆಗೋ ಪಿ.ಎಫ್. ಗೆ ಇನ್ಮೇಲಿಂದ ಜಾಸ್ತಿ ಬಡ್ಡಿ ಬರುತ್ತೆ, ಇದು ಮೋದಿ ಗಿಫ್ಟ್!!!

ವಿಮಾನಯಾನದ ಬಂಪರ್;

ಅದರಂತೆ ಈ ಹಿಂದೆ ಈ ರಾಜ್ಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರು, ಕೇವಲ ಏರ್ ಇಂಡಿಯಾ ವಿಮಾನಗಳಲ್ಲಷ್ಟೇ ಪ್ರಯಾಣಿಸಲು ಅವಕಾಶ ಇತ್ತು. ಆದರೆ ಈ ನಿಯಮವನ್ನು ಸಡಿಸಿಲಿ ಯಾವುದೇ ಖಾಸಗಿ ವಿಮಾನಯಾನ ಸಮಸ್ಥೆಯಲ್ಲೂ ಪ್ರಯಾಣಿಸುವ ಅವಕಾಶ ಒದಗಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಡಾ. ಜೀತೆಂದ್ರ ಸಿಂಗ್, ಕೇಂದ್ರ ಸರ್ಕಾರಿ ನೌಕರರು ಶೀಘ್ರವಾಗಿ ತಮ್ಮ ಕುಟುಂಬವನ್ನು ಕೂಡಿಕೊಳ್ಳಲು ಅನುವು ಮಾಡಿಕೊಡಲು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಯೋಜನೆ ಜಾರಿಗೆ ತಂದಿರುವುದಾಗಿ ತಿಳಿಸಿದ್ದರು.

ತುಟ್ಟಿಭತ್ಯೆ ಹೆಚ್ಚಳ;

Also read: ಇ.ಪಿ.ಎಫ್.ನ ಈ ನಿಯಮಗಳನ್ನು ತಿಳಿದುಕೊಂಡಿರಿ, ಬೇಕಾದ ಸಮಯಕ್ಕೆ ತುಂಬಾ ಸಹಾಯಕ್ಕೆ ಬರುತ್ತದೆ..

ಎಲ್ಲ ಗಿಫ್ಟ್-ಗಳಂತೆ ಸ್ವಲ್ಪ ದಿನಗಳ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಶೇ. 3 ರಷ್ಟು ತುಟ್ಟಿಭತ್ಯೆಯನ್ನು ಶೇ. 9 ರಿಂದ ಶೇ. 12 ಕ್ಕೆ ಏರಿಯಾಗಿದ್ದು, ಜನವರಿ 1.2019 ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಇನ್ನೂ 1 ಕೋಟಿ ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರು ಈ ಪ್ರಯೋಜನ ಪಡೆಯಲಿದ್ದಾರೆ. ಹೆಚ್ಚಳದ ಪ್ರಯೋಜನವನ್ನು 48.1 ಲಕ್ಷ ಕೇಂದ್ರ ಸರ್ಕಾರದ ನೌಕರರು ಹಾಗೂ 62.03 ಲಕ್ಷ ಪಿಂಚಣಿದಾರರು ಈ ಪ್ರಯೋಜನ ಪಡೆಯಲಿದ್ದಾರೆ.