ಬಡ ಮಕ್ಕಳಿಗೆ ಪಾಠ ಕಲಿಸುತ್ತಿರುವವರಿಗೆ ಘನ ಸರ್ಕಾರದಿಂದ ನೋಟಿಸ್!! ಸಮಾಜಕ್ಕೆ ಒಳ್ಳೆಯದು ಮಾಡುವುದೇ ತಪ್ಪೇ..?

0
468

ಮಕ್ಕಳಿಗೆ ಶಿಕ್ಷಣ ಕಲಿಸಿ… ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡ ಬೇಕೆಂಬ ಕನಸನ್ನು ಹೊತ್ತ ಓರ್ವ ಶಿಕ್ಷಕನ ಕಥೆಯನ್ನು ಹೇಳ್ತೀವಿ. ಎಸ್.. ಹುಬ್ಬಳ್ಳಿಯ ಎಪಿಎಂಸಿಯನ್ನು ಏಷ್ಯಾದ ಬಹು ದೊಡ್ಡ ಎಪಿಎಂಸಿ ಎಂದು ಕರೆಯುತ್ತಾರೆ. ಈ ಎಪಿಎಂಸಿ ಹಮಾಲರ ಸಂಖ್ಯೆಯೂ ಕಡಿಮೆ ಇಲ್ಲ. ಎಲ್ಲರೂ ತಮ್ಮ ಕುಟುಂಬದೊಂದಿಗೆ ತುತ್ತು ಅನ್ನದ ಹುಡುಕಾಟಕ್ಕಾಗಿ ಇಲ್ಲಿ ಬಂದವರೆ. ಇಂತಹ ಮಕ್ಕಳಿಗೆ ವಿದ್ಯಾಭ್ಯಾಸ ಬೇಕು, ಅವರು ಶಿಕ್ಷಿತರಾಗಬೇಕು. ಅವರ ತಂದೆ ತಾಯಿಯಂತೆ ಮಕ್ಕಳು ಕೂಲಿಕಾರರಾಗ ಬಾರದು ಎಂಬ ಉದ್ದೇಶದಿಂದ ಹುಬ್ಬಳ್ಳಿಯ ಎ.ಪಿ.ಎಂ.ಸಿಯಲ್ಲಿ ನಿರ್ಮಾಣವಾಗಿದ್ದೆ ಸರ್ಕಾರಿ ಪ್ರಾಥಮಿಕ ಶಾಲೆ.

ಈ ಶಾಲೆಯನ್ನು ಇಷ್ಟು ಎತ್ತರಕ್ಕೆ ಬೆಳಗಿಸಿದ ಕೀರ್ತಿ ಈ ಶಾಲೆಯ ಮುಖ್ಯ ಶಿಕ್ಷಕರಿಗೆ ಸಲ್ಲುತ್ತದೆ ಎಂದ್ರೆ ಅದು ತಪ್ಪಲ್ಲ. ಎಲ್ಲರ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ, ಎಂದು ಅಂಗಲಾಚಿ ಬೇಡಿಕೊಂಡು ಕಟ್ಟಿದ ಶಾಲೆ ಇದು. ತಮ್ಮ ಜ್ಞಾನದ ಹರಿವಿನಿಂದ ಅಂಧಕಾರವನ್ನು ಓಡಿಸುವ ಪಣದೊಂದಿಗೆ, ಅಕ್ಷರದ ಕಂಪನ್ನು ಹರಡುತ್ತಿರುವ ಮೆಷ್ಟ್ರೂ ರಾಮು ಮೂಲಗಿ.

ಅಂದಹಾಗೆ ಈ ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದ್ರೆ ಮೂಲಗಿ ಅವರು ಅಂದಿನ ಬಿಇಓ ಅವರನ್ನು ಸಂಪರ್ಕಿಸಿ ಹಾಗೂ ಸ್ಥಳೀಯರ ಸಹಾಯದಿಂದ ಮನವಿಯನ್ನು ನೀಡ್ತಾರೆ. ಅದರಂತೆ ಇಲ್ಲಿನ ಮಕ್ಕಳು ರೋಡ್ ಕ್ರಾಸ್ ಮಾಡಿ ಬೇರೆ ಶಾಲೆಗೆ ಹೋಗೋದು ಬೇಡ, ಇಲ್ಲಿಯೇ ಒಂದು 8ನೇ ತರಗತಿಗೆ ಅವಕಾಶ ಕಲ್ಪಿಸುವಂತೆ ಕೇಳಿಕೊಳ್ಳುತ್ತಾರೆ. ಅದರಂತೆ ಬಿಇಓ ಶಾಲೆಗೆ ಬಂದು ಅಲ್ಲಿನ ವಸ್ತು ಸ್ಥಿತಿಯನ್ನು ಅರಿತು ಕೊಂಡು, ನೀವು 8ನೇ ಕ್ಲಾಸ್ ಆರಂಭಿಸಿ ಇದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಆಗ ಆಶಾಲೆಯಲ್ಲಿ ಬಾಲಕ ಹಾಗೂ ಬಾಲಕಿಯರು ಸೇರಿ 44 ವಿದ್ಯಾರ್ಥಿಗಳು ಇರುತ್ತಾರೆ. ಇದನ್ನು ಕಂಡ ಬಿಇಓ ಅನುಮತಿ ನೀಡಿಸುವ ಭರವಸೆಯನ್ನು ನೀಡುತ್ತಾರೆ.

ಆದ್ರೆ ಈಗಾ ಆಗಿದ್ದೇ ಬೇರೆ. ಇಲ್ಲಿನ ವಸತಿನಿಲಯವನ್ನು ಮೇಲ್ದರ್ಜೆಗೆ ಏರಿಸಿದಾಗ 1 ರಿಂದ 4ನೇ ತರಗತಿಯ ಮಕ್ಕಳಿಗೆ ಪ್ರವೇಶವಿಲ್ಲ ಎಂದು ಹೇಳುತ್ತದೆ. ಆ ಮಕ್ಕಳಿಗೆ ತೊಂದರೆ ಆಗಬಾರದೆಂದು ಎಸ್ಡಿಎಂಸಿ ಹಾಗೂ ಎಪಿಎಂಸಿ ವರ್ತಕರು ಸೇರಿ ಸುಮಾರು 78 ಮಕ್ಕಳಿಗೆ ಶಾಲೆಯಲ್ಲಿ ಉಳಿಸಿಕೊಂಡು ಊಟ ಕಲ್ಪಿಸಿದ್ದಾರೆ. ಊಟಕ್ಕೆ ಮಕ್ಕಳಿಗೆ ಕೊರತೆಯಾದಾಗ ರಾಮೂ ಮೂಲಗಿ ತಮ್ಮ ಜೇಬಿನಿಂದ ಹಾಕಿದ್ದು ಇದೆ. ಆದ್ರೆ ಈಗ ಹಳೆಯ ಬಿಇಓ ವರ್ಗಾವಣೆ ಆಗಿದೆ. ಹೊಸ ಬಿಇಓ ಕುರ್ಚಿ ಏರಿದ್ದಾಗಿದೆ. ನೂತನ ಬಿಇಓ ಸರ್ಕಾರದ ಪರವಾನಿಗೆ ಇಲ್ಲದೆ 8ನೇ ತರಗತಿ ನಡೆಸಿದ್ದೀರಿ. ಶಾಲಾ ಕಟ್ಟಡದಲ್ಲಿ ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿದ್ದೀರಿ. ಇದು ಕರ್ತವ್ಯ ಲೋಪ ಹಾಗೂ ಕಾನೂನು ಕ್ರಮ ಏಕೆ ಕೈಗೊಳ್ಳಬಾರದೆಂದು ಪ್ರಶ್ನಿಸಿ ಮೂಲಗಿ ಅವರಿಗೆ ನೋಟಿಸ್ ನೀಡಿದ್ದಾರೆ.