ಸ್ವಂತ ಉದ್ಯಮ ಸ್ಥಾಪಿಸಲು ಹಣದ ತೊಂದರೆಯಿದ್ರೆ, ಇದನ್ನು ಓದಿ.. ಈ ಸರ್ಕಾರಿ ಯೋಜನೆಗಳು ನಿಮ್ಮ ನೆರವಿಗೆ ಬರುತ್ತೆ!!

0
2587

ನೀವು ಸಣ್ಣ ಉದ್ಯಮವನ್ನು ಹೊಂದಿದ್ದೀರಾ. ಹಣದ ತೊಂದರೆ ನಿಮನ್ನು ಬಹುವಾಗಿ ಕಾಡ್ತಾ ಇದೆಯಾ.. ಸಾಲ ನೀಡಲು ಯಾರು ಮುಂದೆ ಆಗ್ತಾ ಇಲ್ಲವೋ.. ಹಾಗಿದ್ರೆ ನೀವು ಇಲ್ಲಿ ಒಮ್ಮೆ ಸರಿಯಾಗಿ ಓದಿ ನಂತರ ಎಲ್ಲಿ ಎಲ್ಲಿ ಸಾಲ ನೀಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಆಸ್ತಿ ಆಗಲಿ ಅಥವಾ ಯಂತ್ರೋಪಕರಣಗಳನ್ನು ಕೊಳ್ಳಲು, ಅಥವಾ ಆರಂಭಿಕ ದೊಡ್ಡ ಮೊತ್ತದ ಸಮಸ್ಯೆ ಇದ್ರೆ, ವಹಿವಾಟು ಬಂಡವಾಳ ಧನದ ಮೂಲಕ ಸಾಲಪತ್ರ ಅಥವಾ ಲಿಖಿತವಾಗಿ ನೀಡಿ ಪಡೆದುಕೊಳ್ಳಬಹುದು.

ಹೊಸ ಉದ್ಯಮ ಆರಂಭಿಸಲು, ಉದ್ಯಮ ವಿಸ್ತರಣೆಗಾಗಿ ಪಡೆಯುವ ಸಾಲ ಕಾರ್ಪೋರೇಟ್ ಅವಧಿ ಸಾಲ.

ಇನ್ನು ಅವಧಿ ಸಾಲದ ಮುಖೇನ ಉದ್ಯಮಕ್ಕೆ ಬೇಕಾದ ಕಟ್ಟಡ, ಯಂತ್ರ, ಪಡೆಯಲು ನೀಡಲಾಗುತ್ತದೆ. ಈ ಸಾಲ ಮರುಪಾವತಿಗೆ ೧೦ ವರ್ಷ ಕಾಲಾವಕಾಶ ಇರುತ್ತದೆ. ಅಲ್ಲದೆ ವಾರ್ಷಿಕ ಬಡ್ಡಿಯಲ್ಲೂ ಏರು ಪೇರಾಗುತ್ತದೆ.

ಎಲ್ಲ ಉದ್ಯಮಿಗಳ ಹಾಗೂ ಕೃಷಿಕರಿಗೆ ನೆರವೂ ಯಾರು ನೀಡದೆ ಇದ್ರೆ, ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊರೆ ಹೋಗ್ತಾರೆ. ಇಲ್ಲಿ ಉದ್ಯಮಿಯ ಉದ್ಯೋಗದ ಚೌಕಟ್ಟನ್ನು ನೋಡಿಕೊಂಡು ವಿಶೇಷ ಸಾಲ ಸೌಲಭ್ಯ ನೀಡಲಾಗುತ್ತದೆ. ವಿಶೇಷವಾಗಿ ಗ್ರಾಮೀಣ ಹಾಗೂ ನಗರದಲ್ಲಿ ಉದ್ಯಮ ಆರಂಭಿಸಲು ಇದು ಸಹಾಯಕ

ತೋಟಗಾರಿಕೆ, ಯಂತ್ರಗಳು, ಭೂ ಅಭಿವೃದ್ಧಿ, ಸಣ್ಣ ನೀರಾವರಿ, ಕೃಷಿ ಅವಧಿ ಸಾಲಗಳು ಲಭ್ಯ.

ಬ್ಯಾಂಕ್ ಆಫ್ ಬರೋಡಾದಲ್ಲಿ ಕಾರ್ಯರೂಪಿ ಮೂಲ ಬಂಡವಾಳ, ಅವಧಿ ಸಾಲ, ಸಣ್ಣ ಉದ್ಯಮಿಗಳಿಗೆ ಸಾಲ, ವ್ಯಾಪಾರಿಗಳಿಗೆ ಸಾಲ ಲಭ್ಯ.

ಆಂಧ್ರ ಬ್ಯಾಂಕ್‌ನಲ್ಲೂ ಕಾರ‍್ಯರೂಪಿ ಮೂಲ ಬಂಡವಾಳ, ಅವಧಿ ಸಾಲ, ಸಣ್ಣ ಉದ್ಯಮಿಗಳಿಗೆ ಸಾಲ, ಸಂಸ್ಥೆಗಳ ಸಾಲ, ಶೇರುಗಳನ್ನು ಅಡವಿರಿಸಿ ಮುಂಗಡ ಹಣ, ಕಿಸಾನ ವಿಕಾಸ್ ಹಾಗೂ ಸಂಪತ್ತಿ ಕಾರ‍್ಡ್ ನೀಡುತ್ತದೆ.

ಸಣ್ಣ ಉದ್ಯಮವನ್ನು ಪ್ರಚೋದನೆಗೆ ಸರ‍್ಕಾರ ಸಹ ಹಲವು ಯೋಜನೆಗಳನ್ನು ಹಾಕಿಕೊಂಡಿದೆ.

ಸಣ್ಣ ಉದ್ಯಮಿ ಅಭಿವೃದ್ಧಿ ಸಂಸ್ಥೆ

ಸಿಡೋ ಯೋಜನೆ

ರಾಷ್ಟ್ರೀಯ ಸಣ್ಣ ಉದ್ಯಮ ನಿಗಮ ನಿಯಮಿತ

ಭಾರತೀಯ ಸಣ್ಣ ಉದ್ಯಮ ಅಭಿವೃದ್ಧಿ ಬ್ಯಾಂಕ್

ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ನೇವರು ನೀಡುವ ವಿಶ್ವ ಸಂಘ

ನಬಾರ್ಡ್‍