ಸರ್ಕಾರಿ ಶಾಲೆಯ ಮಕ್ಕಳನ್ನು ಅರಮನೆಗೆ ಆಹ್ವಾನಿಸಿ ಅತಿಥಿ ಸತ್ಕಾರ ಮಾಡಿದ ಮೈಸೂರಿನ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು..

0
727

ಸ್ವಲ್ಪ ಹಣ ಸಂಪಾದಿಸಿದರೆ ಸಾಕು ತಲೆಯಲ್ಲಿ ನಡೆಯುವ ಮಂದಿಯ ನಡುವೆ.. ತಮ್ಮ ಸರಳತೆಗೆ ಹೆಸರಾಗಿರುವ ಮೈಸೂರಿನ ಮಹಾರಾಜ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಮಾಡಿರುವ ಕಾರ್ಯ ಕೇಳಿದರೇ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚುವುದಂತೂ ಸತ್ಯ..

ಇತ್ತೀಚೆಗೆ ರಾಣಿ ತ್ರಿಶಿಕಾ ದೇವಿಯವರು ತುಂಬು ಗರ್ಭಿಣಿಯಾಗಿದ್ದಾಗ ಬೆಂಗಳಳೂರಿನಿಂದ ಮೈಸೂರಿಗೆ ಸಿಂಪಲ್ ಆಗಿ ಜನಸಾಮಾನ್ಯರಂತೆ ರೈಲಿನಲ್ಲಿ ಬಂದು ಜನರಲ್ಲಿ ಆಶ್ಚರ್ಯ ಮೂಡಿಸಿದ್ದರು..

ಇದೀಗ ಮಕ್ಕಳ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಶಾಲೆಯ ಮಕ್ಕಳನ್ನು ಅರಮನೆಗೆ ಆಹ್ವಾನಿಸಿ ಅತಿಥಿ ಸತ್ಕಾರ ಮಾಡಿದ್ದಾರೆ..

ಹೌದು ಮಕ್ಕಳ ದಿನಾಚರಣೆಯ ಸಂಧರ್ಭದಲ್ಲಿ ಮೈಸೂರಿನ ಕುವೆಂಪು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ಮಕ್ಕಳನ್ನು ಮೈಸೂರು ಅರಮನೆಗೆ ಆಹ್ವಾನಿಸಿದ್ದರು..

ಬಂದ ಮಕ್ಕಳು ಅರಮನೆಯ ಬಗ್ಗೆ ಯಧುವೀರ್ ರವರನ್ನು ಕೇಳಿದಾಗ, ಅರಮನೆಯ ಚರಿತ್ರೆ ಸೇರಿದಂತೆ ಮಕ್ಕಳಿಗೆ ಉಪಯೋಗವಾಗುವಂತಃ ಇನ್ನಷ್ಟು ವಿಷಯಗಳನ್ನು ಹೇಳಿಕೊಡುತ್ತಾ ಅರಮನೆಯ ಸುತ್ತಾ ಮಕ್ಕಳೊಂದಿಗೆ ತಿರುಗಾಡಿದರು.. ನಂತರ ಮಕ್ಕಳಿಗೆ ಟೀ ಹಾಗೂ ತಿನಿಸುಗಳನ್ನು ಕೊಟ್ಟು ಅತಿಥಿ ಸತ್ಕಾರ ಮಾಡಿ ಸಂತೋಷದಿಂದ ಕಾಲ ಕಳೆದು ಬೀಳ್ಕೊಟ್ಟರು..

ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಆಗಾಗ ಹೋಗಿ ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುವುದು ಉಂಟು..

ಏನೇ ಆಗಲಿ ಮಕ್ಕಳ ದಿನಾಚರಣೆಯಂದು ಒಂದಿಷ್ಟು ಮಕ್ಕಳ ಸಂತೋಷಕ್ಕೆ ಕಾರಣರಾದ ಮಹಾರಾಜರಿಗೆ ಧನ್ಯವದಗಳು..

 

ಇಷ್ಟವಾದರೇ ಶೇರ್ ಮಾಡಿ.. ಮಹಾರಾಜರ ಸರಳತೆ ಇತರರಿಗೂ ತಿಳಿಯಲಿ..