ವಾಹನ ಸವಾರರೆ ಎಚ್ಚರ; ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಬಿಳ್ಳಲಿದೆ ಲಕ್ಷ ಲಕ್ಷ ದಂಡ!..

0
369

ದೇಶದಲ್ಲಿ ದಿನದಿಂದ ದಿನಕ್ಕೆ ಅಪಾರ ಪ್ರಮಾಣದಲ್ಲಿ ಹೆಚ್ಚುತ್ತಿರುವ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿವೆ, ಇಂತಹ ಅಪಘಾತಗಳನ್ನು ತಡೆಗಟ್ಟಲು ಮಾಡಿದ ನಿಯಮವನ್ನು ಲೆಕ್ಕಿಸದೆ ಪ್ರಯಾಣ ಮಾಡುವವರಿಗೆ ದಂಡವನ್ನು ವಿಧಿಸುತ್ತಿತ್ತು, ಆದರು ಬುದ್ದಿಕಲಿಯದ ಸವಾಸರು ಮತ್ತೆ ತಮ್ಮ ಚಾಳಿಯನ್ನು ಮುಂದುವರಿಸಿ ಅಪಘಾತಕ್ಕೆ ಕಾರಣರಾಗುತ್ತಿದ್ದಾರೆ. ಇದಕ್ಕಾಗಿ ಹೊಸ ನಿಯಮವನ್ನು ವಿಧಿಸಲು ಕೇಂದ್ರ ಸರ್ಕಾರ ಮತ್ತೆ ತಯಾರಿ ನಡೆಸಿದ್ದು, ದಂಡದ ಮೊತ್ತ ಲಕ್ಷ ರೂ ಆಗಲಿದೆ.

Also read: ಗ್ರಾಮ ವಾಸ್ತವ್ಯ ನಡೆಸಿರುವ ಸಿಎಂ ಅವರ ಒಂದು ದಿನದ ವಾಸ್ತವ್ಯಕ್ಕೆ ಖರ್ಚಾದ ಹಣ ಕೋಟಿ ರೂ ಅಂತೆ, ಇದೇನಾ ದುಂದು ವೆಚ್ಚವಿಲ್ಲದೆ ಗ್ರಾಮ ವಾಸ್ತವ್ಯ??

ಹೌದು ಮನೆಯಿಂದ ವಾಹನ ಹೊರ ತೆಗೆಯುವಾಗ ಸ್ವಲ್ಪ ಎಚ್ಚರದಿಂದ ಯೋಚನೆ ಮಾಡಿ ಸವಾರಿ ಮಾಡಿ ಇಲ್ಲದಿದ್ದರೆ ಲಕ್ಷದ ವರೆಗೆ ದಂಡ ಕಟ್ಟಿ ಪಜೀತಿಗೆ ಸಿಲುಕ ಬೇಕಾಗುತ್ತೆ. ಏಕೆಂದರೆ ಹೇಗೋ ನೂರು ರೂ ಕೊಟ್ಟು ತಪ್ಪಿಸಿಕೊಂಡು ಹೋಗುವ ಪದ್ಧತಿ ಇನ್ಮುಂದೆ ಇರೋದಿಲ್ಲ, ಬರೋಬರಿ ಒಂದು ಲಕ್ಷದವರೆಗೆ ದಂಡ ಕಟ್ಟುವ ನಿಯಮ ಜಾರಿಯಾಗುತ್ತಿದ್ದೆ, ಇದೆಲ್ಲ ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚುತ್ತಿರುವ ಅಪಘಾತಕ್ಕೆ ಪ್ರಮುಖ ಕಾರಣ. ಹೀಗಾಗಿ ಸಂಚಾರ ನಿಯಮವನ್ನು ಗಾಳಿಗೆ ತೂರುವವರಿಗೆ ಹೆಚ್ಚಿನ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಮೋಟಾರು ವಾಹನ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯಲ್ಲಿ ಮರುಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಏನಿದು ಹೊಸ ನಿಯಮ?

Also read: ಬೆಂಗಳೂರಿನ ವಂಡರ್ಲಾದಲ್ಲಿ ಅವಘಡ; ಮಕ್ಕಳ ಜೊತೆಯಲ್ಲಿ ಅಮ್ಯೂಸ್‍ಮೆಂಟ್ ಪಾರ್ಕಿಗೆ ಹೋಗುವ ಮುನ್ನ ಈ ವಿಡಿಯೋ ನೋಡಿ;

ಈ ಹಿಂದೆ ಈ ವಿಧೇಯಕಕ್ಕೆ ಲೋಕಸಭೆಯಲ್ಲಿ ಅನುಮತಿ ಸಿಕ್ಕಿತ್ತಾದರೂ ರಾಜ್ಯ ಸಭೆಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಈ ವಿಧೇಯಕಕ್ಕೆ ಇಂದು ಅನುಮತಿ ಸಿಗುವ ಸಾಧ್ಯತೆ ಇದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ವೀಧೆಯಕಕ್ಕೆ ಅನುಮೋದನೆ ದೊರೆತರೆ ಕನಿಷ್ಠ ದಂಡದ ಮೊತ್ತ 1 ಸಾವಿರ ರೂ. ಆಗಿರಲಿದೆ. ಅಲ್ಲದೆ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶ ಇರಲಿದೆ. ಒಂದೊಮ್ಮೆ ಈ ನಿಯಮ ಜಾರಿಗೆ ಬಂದರೆ ವಾಹನ ಸವಾರರಿಗೆ ಭಾರೀ ಹೊರೆ ಆಗಲಿದೆ. ಅದಕ್ಕಾಗಿ ಸವಾರರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತೆ.

ಯಾವುದಕ್ಕೆ ಎಷ್ಟ ದಂಡ?

ಈ ಹೊಸ ನಿಯಮದ ಪ್ರಕಾರ ಲೈಸೆನ್ಸ್​ ಇಲ್ಲದೆ ವಾಹನ ಚಾಲನೆ ಮಾಡಿದರೆ 5,000 ರೂ. ದಂಡ. ವೇಗದ ಮಿತಿ ದಾಟಿದರೆ 1000 ರೂ. ದಂಡ. ಅಡ್ಡಾದಿಡ್ಡಿ ಹಾಗೂ ಮೊಬೈಲ್​ ಬಳಕೆ ಮಾಡುತ್ತಾ ಬೈಕ್​ ಸವಾರಿ ಮಾಡಿದರೆ 1000 ರೂ. ದಂಡ, ಕುಡಿದು ವಾಹನ ಚಲಾಯಿಸಿದರೆ 10,000 ರೂ ದಂಡ ಬೀಳಲಿದೆ. ಹಿಟ್​ ಆ್ಯಂಡ್​ ರನ್​ ಪ್ರಕರಣದಲ್ಲಿ ಸಂತ್ರಸ್ತರಿಗೆ 25 ಸಾವಿರ ರೂ. ಬದಲು 2 ಲಕ್ಷ ರೂ.ವರೆಗೆ ಪರಿಹಾರ ನೀಡಲು ಆದೇಶ. ಈ ವಿಧೇಯಕ ಮಂಡನೆಗೆ ಈ ಮೊದಲು ಎಲ್ಲ ಕಡೆಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಈಗ ಮತ್ತೆ ಈ ವಿಧೆಯಕ ಮರು ಮಂಡನೆಗೆ ಸರ್ಕಾರ ಮುಂದಾಗಿರುವುದರಿಂದ ಮತ್ತೆ ಪ್ರತಿಭಟನೆಗಳು ನಡೆಯುವ ಲಕ್ಷಣ ಗೋಚರವಾಗಿದೆ.

Also read: ಬಿಹಾರದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಲಿಚಿ ಹಣ್ಣು ಕಾರಣವಂತೆ; ಚೀನಾ ಮೂಲದ ಲಿಚಿ ಹಣ್ಣಲ್ಲಿ ಇರುವ ವಿಷಕಾರಿ ವೈರಸ್ ಯಾವುದು ಗೊತ್ತಾ??

ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ, ಸಿಗ್ನಲ್‌ ಉಲ್ಲಂಘನೆಗಾಗಿ 2016-17ನೇ ಸಾಲಿನಲ್ಲಿ ಒಟ್ಟು 97 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದ್ದು. 61 ಕೋಟಿ ದಂಡ ವಸೂಲು ಮಾಡಲಾಗಿದೆ. ಇದು ಬರಿ ಹಿಂದಿನ ವರ್ಷದ ದಂಡವಾದರೆ ಈ ವರ್ಷ ವಾಹನಗಳ ಸಂಖ್ಯೆಯಲ್ಲಿ ದುಪ್ಪಟ್ಟು ಆಗಿದ್ದು, ರೂ. 100 ಕೋಟಿ ದಂಡ ವಸೂಲಿ ಆಗುವ ನಿರೀಕ್ಷೆಯಿದೆ. ಅದರಂತೆ ನಿಯಮ ಪಾಲಿಸದೆ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಯಾವುದಕ್ಕೂ ವಾಹನ ರಸ್ತೆಗಿಳಿಸುವ ಮುನ್ನ ಎಚ್ಚದಿಂದ ಇರುವುದು ಒಳ್ಳೆಯದು.