ಉದ್ಯೋಗಸ್ಥ ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಸಿಹಿ ಸುದ್ದಿ; ಹೆರಿಗೆ ರಜೆಯ ವೇತನದ ಬಗ್ಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ..

0
809

ಮಹಿಳೆಯರಿಗೆ ಸಮಾನವಾದ ಅವಕಾಶ ನೀಡಿದ್ದರಿಂದ ಉದ್ಯೋಗಸ್ಥ ಮಹಿಳೆಯ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಕೆಲಸದಲ್ಲಿ ಅಷ್ಟೇ ಅಲ್ಲ ಖಾಸಗಿ ಕಂಪನಿಗಳಲ್ಲಿ ಕೂಡ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಐಎಎಸ್, ಕೆಎಎಸ್, ಪೋಲಿಸ್, ಆರ್ಮಿಯಲ್ಲಿ, ಡ್ರವಿಂಗ್ ಅಂತ ಸಾಹಸ ಕೆಲಸದಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಮದುವೆಯಾದ ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ಸರಿಯಾದ ಆರೈಕೆ ಬೇಕಾಗುತ್ತದೆ. ಈ ಸಮಯದಲ್ಲಿ ಕೆಲಸಕ್ಕೆ ಬಹಳಷ್ಟು ದಿನಗಳು ರಜೆ ಬೇಕಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ಖಾಸಗಿ ಕಂಪನಿಗಳು ಈ ಕಾರಣಕ್ಕಾಗಿ ಕೆಲಸದಿಂದ ತೆಗೆಯುತ್ತಿದರು ಇಲ್ಲ ರಜೆಯಲ್ಲಿ ಸಂಬಳವನ್ನು ನೀಡುತ್ತಿರಲಿಲ್ಲ. ಈ ವಿಷಯಕ್ಕೆ ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ವೇತನ ಸಹಿತ ರಜೆ ಕಡ್ಡಾಯಗೊಳಿಸಿತ್ತು. ಇದರಿಂದ ಮಹಿಳೆಯರಿಗೆ ಅನುಕೂಲವಾಗಿತ್ತು.

Also read: ಮಹಿಳೆಯರ ಸುರಕ್ಷತೆಗೆಂದು ಹೊಸ ನಿಯಮ ತಂದಿದೆ ರೈಲ್ವೆ, ಮಹಿಳೆಯರಿಗೆ ಸಿಹಿ ಸುದ್ದಿ. ಏನದು ನಿಯಮ ಗೊತ್ತೇ?

ಕಳೆದ ವರ್ಷವಷ್ಟೇ ಮಾಡಿದ ನಿಯಮದ ಪ್ರಕಾರ; ಉದ್ಯೋಗಸ್ಥ ಗರ್ಭಿಣಿ ಮಹಿಳೆಯರ ಹೆರಿಗೆ ರಜೆಯನ್ನು 26 ವಾರಗಳಿಗೆ ವಿಸ್ತರಿಸಲಾಗಿತ್ತು. ಹಾಗೆಯೇ ಸಾಮಾನ್ಯ ವೇತನವನ್ನು ನೀಡಲು ಸಿಪಾರಸ್ತು ಮಾಡಿತ್ತು. ಆದರೆ ಈ ಅವಧಿಯ ವೇತನವನ್ನು ನೀಡುವುದು ಕಂಪನಿಗಳಿಗೆ ಹೊರೆಯಾಗಿದ್ದರಿಂದ ಅನೇಕ ಮಹಿಳೆಯರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದು . 2017ರಲ್ಲಿ ಹೆರಿಗೆ ಲಾಭ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಎಲ್ಲ ಕಂಪನಿಗಳಲ್ಲೂ ಉದ್ಯೋಗ ಮಾಡುತ್ತಿರುವ ಗರ್ಭಿಣಿ ಮಹಿಳೆಯರಿಗೆ ಮಗು ಹುಟ್ಟಿದ ನಂತರ 26 ವಾರಗಳ ಹೆರಿಗೆ ರಜೆ ನೀಡಬೇಕೆಂದು ಕಾನೂನು ತರಲಾಗಿತ್ತು. ಈ 26 ವಾರಗಳಲ್ಲಿ 7 ವಾರಗಳ ರಜೆಯ ವೇತನವನ್ನು ಕೇಂದ್ರ ಸರ್ಕಾರವೇ ಕಂಪನಿಗೆ ನೀಡಲು ನಿರ್ಧರಿಸಿದೆ.

Also read: ನಿಮಗೆ ಗೊತ್ತಿರುವ ಗರ್ಭಿಣಿಯರಿಗೆ ತಪ್ಪದೆ ಇದನ್ನು ಓದಲು ಹೇಳಿ!!

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯ, ಈ ನಿಯಮ ಪ್ರತಿ ತಿಂಗಳು 15 ಸಾವಿರ ರೂ.ಗಳಿಗಿಂತ ಹೆಚ್ಚಿನ ವೇತನ ಪಡೆಯುತ್ತಿರುವ ಮಹಿಳೆಯರ ಹೆರಿಗೆ ರಜೆಗೆ ಮಾತ್ರ ಅನ್ವಯವಾಗುತ್ತದೆ. 12 ರಿಂದ 26 ವಾರಗಳ ಕಾಲ ಹೆರಿಗೆ ರಜೆ ವಿಸ್ತರಿಸಿದ ಬಳಿಕ ಮಹಿಳೆಯರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದೇ ವಜಾಗೊಳಿಸಲಾಗಿತ್ತು. ಈ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಇಲಾಖೆ ತಿಳಿಸಿದೆ.

ಈ ನಿಯಮದಿಂದ ಗರ್ಭಿಣಿಯರಿಗೆ ಲಾಭವೇನು:

Also read: ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಸಮಯದಲ್ಲಿ ನಿಮ್ಮ ಸಂಸ್ಥೆಯಿಂದ ಎಷ್ಟೆಲ್ಲಾ ಲಾಭಗಳು ಇವೆ ಅಂತ ತಿಳಿದುಕೊಳ್ಳ ಬೇಕಾಗುತ್ತೆ..!!

ಈ ದುಬಾರಿ ಕಾಲದಲ್ಲಿ ಗಂಡ ಹೆಂಡತಿ ಇಬ್ಬರು ಕೆಲಸ ಮಾಡಿದರೆ ನೆಮ್ಮದಿಯಿಂದ ಜೀವನ ನಡೆಸಬಹುದು. ಅದರಲ್ಲಿ ಒಬ್ಬರಿಗೆ ಕೆಲಸ ವಿಲ್ಲದಿದ್ದರೆ ಜೀವನ ಮಾಡುವುದು ಹೊರೆಯಾಗುತ್ತೆ. ಈ ಸಮಯದಲ್ಲಿ ಕೆಲಸ ವೇತನ ವಿಲ್ಲದ ಕಾರಣ ಮಹಿಳೆ ಬಾವನಾತ್ಮಕವಾಗಿ ಚಿಂತನೆಗೆ ಒಳಗಾಗಿ ಮಗುವಿನ ಆರೈಕೆ ಸರಿಯಾಗಿ ಆಗುವುದಿಲ್ಲ. ಹಾಗೆಯೇ ಬೇರೆ ಬೇರೆ ತರಹದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದರು. ಕೇಂದ್ರ ಸರ್ಕಾರ ತಂದ ಈ ನಿಯಮದಿಂದ ಮಹಿಳೆಯರು ಎಲ್ಲ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗಿದೆ.

ಈ ನಿಯಮ ಸರ್ಕಾರಿ, ಖಾಸಗಿ ಕಂಪನಿಗಳಿಗೂ ಅನ್ವಯ:

ಯಾವದೇ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರು ಹೆರಿಗೆ ರಜೆ ಸೌಲಭ್ಯ ಪಡೆದರೂ ಅದರಲ್ಲಿ 7 ವಾರಗಳ ವೇತನವನ್ನು ಸರ್ಕಾರ ಭರಿಸಲಿದೆ. ಇದರಿಂದಾಗಿ ಕಂಪನಿಗಳ ಆರ್ಥಿಕ ಹೊರೆಯನ್ನು ತಗ್ಗಿಸಿದಂತಾಗಿದೆ. ಇದು ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಿಗೂ ಈ ನಿಯಮ ಅನ್ವಯವಾಗಲಿದೆ.