ಗೋವಿಂದರಾಜು ಡೈರಿಯಲ್ಲಿ ಏನಿದೆ?ಏಕೆ ಇಷ್ಟೊದು ಸುದ್ದಿ ಮಾಡುತ್ತಿದೆ??

0
522

ಡೈರಿ ಎನ್ನುವು ಪದ ಕೇಳಿದ್ರೆ ಸಾಕು ಎಲ್ಲರು ದಿನ ನಿತ್ಯದ ಆಗುಹೋಗುಗಳನ್ನು ಬರೆಯುವ ಪುಸ್ತಕ ಎಂದು ಕೊಂಡರೆ, ಅದು ಸುಳ್ಳುಡೈರಿ ಎಂದರೆ ಹಣ ಪಡೆದ ಹಾಗೂ ಹಣ ನೀಡಿದ ವಿವರ ಇರುತ್ತದೆಎಂಬ ಮಾಹಿತಿ ಈಗ ಲಭ್ಯವಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯದ ಜನರ ಕಿವಿಯ ಮೇಲೆ ಬೀಳುವಸಾಮಾನ್ಯ ಪದ ಡೈರಿ. ಬಿಜೆಪಿಯ ಬಿಎಸ್‌ವೈ ಈ ಬಗ್ಗೆ ಒಂದುಹೇಳಿಕೆಯನ್ನು ನೀಡಿದ್ದರು. ಅದರಲ್ಲಿ ಹೈಕಮಾಂಡ್‌ಗೆ ಕಾಂಗ್ರೆಸ್ಕಪ್ಪ ನೀಡುತ್ತಿದೆ ಎಂದು ತಿಳಿಸಿದ್ದುರ. ಇದಕ್ಕೆ ಸಂಬಂಧಿಸಿದಂತೆಗುರುವಾರ ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರಮಾಡಿತ್ತು. ಈ ಸುದ್ದಿ ದೇಶದಲ್ಲೆ ತಲ್ಲಣವನ್ನು ಉಂಟು ಮಾಡಿದೆ.

Image result for govindraj diary

ಎಸ್.. ಸಿಎಂ ಆಪ್ತ ಎಂಎಲ್‌ಸಿ ಗೋವಿಂದರಾಜು ಅವರ ಮನೆಯಲ್ಲಿಸಿಕ್ಕೆದೆ ಎಂದು ಶಂಕಿಸಲಾಗುತ್ತಿರುವ ಡೈರಿಯಲ್ಲಿ ಕಾಂಗ್ರೆಸ್ಮುಖಂಡರು, ಹೈಕಮಾಂಡ್‌ಗೆ ನೀಡಿರುವ ಹಣದ ವಿವರವನ್ನುಬರೆಯಲಾಗಿದೆ. ಅಲ್ಲದೆ ಯಾರಿಂದ ಸ್ವೀಕರಿಸಲಪಟ್ಟಿತು ಎಂಬುದರಬಗ್ಗೆ ಮಾಹಿತಿಯಾಗಿ ಇನ್‌ಶಿಯಲ್‌ಗಳನ್ನು ಬರೆಯಲಾಗಿದ್ದು,ಗುರುವಾರ ದೊಡ್ಡ ಸುದ್ದಿಯನ್ನೇ ಮಾಡಿವೆ. ಇದರಲ್ಲಿ ಸುಮಾರು೬೫ ಕೋಟಿಗೂ ಹೆಚ್ಚು ಹಣದ ಆಗು ಹೋಗುಗಳನ್ನು ಎಳೆಎಳೆಯಾಗಿ ಬರೆದಿಡಲಾಗಿದೆ ಎಂದು ರಾಷ್ಟ್ರೀಯ ವಾಹಿನಿಯೊಂದುವರದಿ ಮಾಡಿದೆ.

Image result for yeddyurappa and siddaramaiah

ಡೈರಿಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಬಿಬಿಎಂಪಿಗೆ ನೀಡಿರುವಹಣ ಹಾಗೂ ಪಡೆದ ಹಣದ ಸಂಪೂರ್ಣ ಮಾಹಿತಿ ಇದೆ. ಅಲ್ಲದೆಪಕ್ಷಕ್ಕೆ ಹಾಗೂ ನಾಯಕರಿಗೆ ನೀಡಿದರ ಬಗ್ಗೆನೂ ಉಲ್ಲೇಖಿಸಲಾಗಿದೆ.ಆದರೆ ವ್ಯಕ್ತಿಗಳ ಹೆಸರುಗಳನ್ನು ನಿಖರವಾಗಿ ಬರೆದಿಲ್ಲ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ಸಿಎಂ ರಾಜೀನಾಮೆಗೆಆಗ್ರಹಿಸಿದರೆ, ಗೋವಿಂದರಾಜು ತಮಗೂ ಈ ಡೈರಿಗೂ ಸಂಬಂಧನೇಇಲ್ಲ ಎಂದು ತಿಳಿಸಿದ್ದಾರೆ.

ಡೈರಿಯಲ್ಲಿರುವ ಪ್ರಮುಖ ಅಂಶಗಳು

ಕೆಜೆಜಿ: 15 ಕೋಟಿ
ಹೆಚ್’ಸಿಎಂ: 5 ಕೋಟಿ
ಹೆಚ್’ಸಿಎಂ: 3 ಕೋಟಿ
ಎಂಬಿಪಿ: 8 ಕೋಟಿ
ಕೆಜೆಜಿ: 20 ಕೋಟಿ
ಎಸ್’ಬಿ: 9 ಕೋಟಿ
ಎಸ್’ಬಿ: 10 ಕೋಟಿ