ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿ ಕೇಂದ್ರದಿಂದ ಭರ್ಜರಿ ಗಿಫ್ಟ್; ತುಟ್ಟಿ ಭತ್ಯೆ ಮೂರು ಪಟ್ಟು ಹೆಚ್ಚಳ.!

0
188

ದೀಪಾವಳಿ ಗಬ್ಬದ ಪ್ರಯಕ್ತ ಸರ್ಕಾರಿ ನೌಕರರಿಗೆ ಕೇಂದ್ರ ಬಂಪರ್​ ಕೊಡುಗೆ ನೀಡಿದೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯಲ್ಲಿ ಶೇ 5ರಷ್ಟು ಹೆಚ್ಚಳ ಮಾಡಲಾಗಿದೆ. ಈ ಏರಿಕೆಯು ಪ್ರಸಕ್ತ ವರ್ಷದ ಜುಲೈ ತಿಂಗಳಿನಿಂದಲೇ ಅನ್ವಯವಾಗಲಿದೆ. ಈ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ‘ಕೇಂದ್ರ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ 12ರಿಂದ ಶೇ 17ಕ್ಕೆ ಹೆಚ್ಚಿಸಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಇಂದು ನವದೆಹಲಿಯಲ್ಲಿ ಪ್ರಕಟಿಸಿದ್ದು ಒಟ್ಟೂ 50 ಲಕ್ಷ ಸರ್ಕಾರಿ ನೌಕರರಿಗೆ ಮತ್ತು 62 ಲಕ್ಷ ಪಿಂಚಣಿ ಫಲಾನುಭವಿಗಳಾಗಲಿದ್ದಾರೆ. ಈ ಹಿಂದೆ ತುಟ್ಟಿ ಭತ್ಯೆ (ಡಿಎ) 5% ನೀಡಲಾಗುತ್ತಿತ್ತು. ಆದರೀಗ 12% ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತುಟ್ಟಿ ಭತ್ಯೆ 17% ಆಗಲಿದೆ. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್​ ಜಾವ್ಡೇಕರ್​ ಸರ್ಕಾರದ ನಿರ್ಧಾರವನ್ನು “ದೀಪಾವಳಿ ಉಡುಗೊರೆ” ಎಂದು ಕರೆದಿದ್ದಾರೆ. ಜತೆಗೆ ಡಿ.ಎ. ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 16,000 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ ಎಂದೂ ಮಾಹಿತಿ ನೀಡಿದರು.

ತುಟ್ಟಿ ಭತ್ಯೆ ಅಥವಾ ಡಿಯರ್​ನೆಸ್​ ಅಲೋಯನ್ಸ್​ (ಡಿಎ) ಎಂದರೆ ಸರ್ಕಾರಿ ನೌಕರರಿಗೆ, ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ಭತ್ಯೆ. ಆರ್ಥಿಕ ಕುಸಿತದ ತೀವ್ರತೆಯನ್ನು ತಡೆಯಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಭತ್ಯೆಯನ್ನು ಸರ್ಕಾರಿ ನೌಕರರಿಗೆ ನೀಡುತ್ತದೆ. ಮೂಲ ಸಂಬಳದಲ್ಲಿನ 5% ಈ ಹಿಂದೆ ಡಿ.ಎ. ಆಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿಯ ಜಾಗತಿಕ ಆರ್ಥಿಕ ಕುಸಿತದ ಹೊಡೆತ ಭಾರತಕ್ಕೂ ಜೋರಾಗಿಯೇ ತಗುಲಿದೆ. ಈ ಹಿನ್ನೆಲೆಯಲ್ಲಿ ಭತ್ಯೆಯನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ನಿರ್ಧಾರ ಸಂತಸ ತಂದಿದೆ.

ಮೊದಲ ಬಾರಿಗೆ ಅಧಿಕ ಏರಿಕೆ

ಈ ಘೋಷಣೆಯು ದುಡಿಯುವ ವರ್ಗಕ್ಕೆ ಉತ್ಸಾಹ ತುಂಬುವ ಪ್ರಯತ್ನವಾಗಿದೆ. ಇದಕ್ಕೂ ಹಿಂದೆ ಡಿಎ ಹೆಚ್ಚಳವನ್ನು ಶೇ 2-3ರಷ್ಟು ಮಾತ್ರ ಮಾಡಲಾಗಿತ್ತು. ಆದರೆ ಈ ಬಾರಿ ಶೇ 5ರಷ್ಟು ಹೆಚ್ಚಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿಯೇ ಇದು ಅತಿ ಹೆಚ್ಚಿನ ಏರಿಕೆಯಾಗಿದೆ’ ಎಂದು ಜಾವಡೇಕರ್ ಹೇಳಿದರು.

ಕಿಸಾನ್ ಸಮ್ಮಾನ್ ಗಡುವು ವಿಸ್ತರಣೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ ಆಗಸ್ಟ್ 1ರ ಬಳಿಕ ಪ್ರಯೋಜನ ಪಡೆಯಲು ಅಗತ್ಯವಾದ ಆಧಾರ್ ಕಡ್ಡಾಯವಾಗಿ ನೀಡುವ ಗಡುವನ್ನು ನವೆಂಬರ್ 30ರವರೆಗೂ ವಿಸ್ತರಿಸಲು ಕೂಡ ಸಚಿವ ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೂ ಸಿಹಿ

ಇದರ ಜತೆಗೆ ಆಶಾ ಕಾರ್ಯಕರ್ತೆಯರಿಗೂ ಕೇಂದ್ರ ಸರ್ಕಾರ ಹಬ್ಬದ ಉಡುಗೊರೆ ನೀಡಿದೆ. ಆಶಾ ಕಾರ್ಯಕರ್ತರ ಸಂಭಾವನೆಯನ್ನು 1,000 ರೂ.ನಿಂದ 2,000 ರೂಪಾಯಿಗೆ ಹೆಚ್ಚಿಸಲು ಕೂಡ ಸರ್ಕಾರ ನಿರ್ಧರಿಸಿದೆ ಎಂದು ಜಾವೇಡಕರ್ ಮಾಹಿತಿ ನೀಡಿದರು. ಸರ್ಕಾರಿ ನೌಕರರಿಗೆ ಕೇಂದ್ರದ ದೀಪಾವಳಿ ಉಡುಗೊರೆ ಎಂದು ಅವರು ಹೇಳಿದರು.