ತಂಬಾಕು ಗುಟ್ಕಾ ಪ್ರಿಯರಿಗೆ ಬಿಗ್ ಶಾಕ್; ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್.!

0
563

ಗುಟ್ಕಾ ಸಿಗರೆಟ್, ಮದ್ಯ ಸೇವನೆಯಿಂದ ಯುವ ಪೀಳಿಗೆ ಹಾಳಾಗಿ ಹೋಗುತ್ತಿದೆ. ತಿಂದವರಿಗೆ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಬಂದು 30-40 ವರ್ಷದಲ್ಲೇ ಮಸಣ ಏರುತ್ತಿದ್ದಾರೆ. ಈ ಕುರಿತು ಸರ್ಕಾರ ಹಲವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದರು ಕೂಡ ಜನರು ಇಂತಹ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ. ಅದಕ್ಕಾಗಿ ಹಲವು ರಾಜ್ಯಗಳಲ್ಲಿ ಈಗಾಗಲೇ ಗುಟ್ಕಾ ಸಿಗರೆಟ್, ಮದ್ಯ ಸೇರಿ ಹಲವು ವಸ್ತುಗಳನ್ನು ನಿಷೇಧಿಸಿವೆ. ಅದರಂತೆ ಮತ್ತೆ ಸಾವಿನ ಸಂಖ್ಯೆ ಏರುತ್ತಿದ್ದು, ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ 12 ಬಗೆಯ ಗುಟ್ಕಾ ಬ್ಯಾನ್ ಮಾಡಲಾಗಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿವೂ ಇವುಗಳ ಹಾವಳಿ ಹೆಚ್ಚಿದ್ದು ಗುಟ್ಕಾ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ.

Also read: ಮತ್ತೆ ಸರ್ಕಾರಿ ಸ್ವಾಮ್ಯದ 10 ಪ್ರಮುಖ ಬ್ಯಾಂಕುಗಳ ವಿಲೀನ ಮಾಡಿದ ಕೇಂದ್ರ ಸರ್ಕಾರ, ಗ್ರಾಹಕರ ಮೇಲಾಗುವ ಪರಿಣಾಮಗಳೇನು?

ಹೌದು ಗಾಂಜಾ, ಅಫೀಮು, ತಂಬಾಕು ಉತ್ಪನ್ನಗಳಿಗೆ ಮಾರು ಹೋಗುತ್ತಿದೆ. ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವ ತಂಬಾಕು ಪದಾರ್ಥಗಳಿಗೆ ಬಹುತೇಕರು ದಾಸರಾಗುತ್ತಿದ್ದಾರೆ. ತಂಬಾಕುವಿನ ಗುಟ್ಕಾಗಳಲ್ಲಿ ಕಟೇಜು ಮತ್ತು ಸುಪಾರಿ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಇದರಲ್ಲಿರುವ ವಿಷಕಾರಿ ರಾಸಾಯನಿಕ ಅಂಶಗಳು ಬಾಯಿಯ ಮೂಲಕ ದೇಹದ ಇತರೆ ಭಾಗಗಳಿಗೆ ಬಾಧಿಸಿ ಮಾರಣಾಂತಿಕ ರೋಗಕ್ಕೀಡಾಗುವಂತೆ ಮಾಡುತ್ತದೆ. ಈ ಎಲ್ಲ ಕಾರಣಗಳನ್ನು ಅರಿತು ಬಿಹಾರದಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಹೊಂದಿರುವ 12 ಬಗೆಯ ಪಾನ್ ಮಸಾಲ ಬ್ರಾಂಡ್‍ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.

Also read: ರೈಲ್ವೆಗಳಲ್ಲಿ ಪ್ರಯಾಣಿಸುವರಿಗೆ ಬಂಪರ್‌ ಆಫರ್; ಈ ರೈಲುಗಳ ಟಿಕೆಟ್ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಣೆ..

ಮೆಗ್ನೀಸಿಯಮ್ ಕಾರ್ಬೋನೇಟ್ ಹೊಂದಿರುವ ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಸಾಗಣಿಕೆ ಅಥವಾ ಮಾರಾಟವನ್ನು ನಿಷೇಧಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈಗಾಗಲೇ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಿದ ಸರ್ಕಾರ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಮ್ಯಾಗ್ನೇಷಿಯಂ ಕಾರ್ಬೊನೇಟ್‌ ಅಂಶ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯದ ಆಹಾರ ಮತ್ತು ಸುರಕ್ಷತಾ ಇಲಾಖೆ ಈ ಆದೇಶ ಹೊರಡಿಸಿದೆ. ಈ ಹಿಂದೆ ಆಹಾರ ಮತ್ತು ಸುರಕ್ಷತಾ ವಿಭಾಗವು ಪರೀಕ್ಷಿಸಿದಾಗ ಕೆಲ ಪಾನ್ ಮಸಾಲ ಬ್ರಾಂಡ್‍ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಇರುವ ಅಂಶ ಪತ್ತೆಯಾಗಿತ್ತು. ಈ ರಾಸಾಯನಿಕದ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು ಎಂದು ವರದಿ ನೀಡಿತ್ತು. ಅದರಂತೆ ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ಪರೀಕ್ಷಿಸಲ್ಪಟ್ಟ, ಹಿನ್ನೆಲೆಯಲ್ಲಿ ಬ್ಯಾನ್ ಮಾಡಲಾಗಿದೆ.

ಯಾವ ಯಾವ ಗುಟ್ಕಾ ಬ್ಯಾನ್?

Also read: ದ್ವಿಚಕ್ರ ಸವಾರರಿಗೆ ಮತ್ತೊಂದು ಬಿಗ್ ಶಾಕ್; ಇನ್ಮುಂದೆ ಅರ್ಧ ಹೆಲ್ಮೆಟ್‌ ಧರಿಸಿದರೂ ಬೀಳುತ್ತೆ ದಂಡ.!

ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಇರುವ ರಾಜ್ನಿಗಂಧ ಪಾನ್ ಮಸಾಲಾ, ರಾಜ್ ನಿವಾಸ್ ಪಾನ್ ಮಸಾಲ, ಸುಪ್ರೀಂ ಪಾನ್ ಪರಾಗ್ ಪಾನ್ ಮಸಾಲ, ಪಾನ್ ಪರಾಗ್ ಪಾನ್ ಮಸಾಲ, ಬಹಾರ್ ಪಾನ್ ಮಸಾಲ, ಬಾಹುಬಲಿ ಪಾನ್ ಮಸಾಲ, ರಾಜಶ್ರೀ ಪಾನ್ ಮಸಾಲ, ರೌನಕ್ ಪಾನ್ ಮಸಾಲ, ಸಿಗ್ನೇಚರ್ ಪಾನ್ ಮಸಾಲಾ, ಕಮಲಾ ಲೈಕ್ಸ್ ಪಾನ್ ಮಸಾಲಾ, ಮಧು ಪಾನ್ ಮಸಾಲ ಬ್ರಾಂಡ್‍ಗಳಲ್ಲಿ ಮೆಗ್ನೀಸಿಯಮ್ ಕಾರ್ಬೋನೇಟ್ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಿದೆ.