ಭಾರತಕ್ಕೆ ಮೋಸ ಮಾಡುತ್ತಿದ್ದ ಶೆಲ್ ಕಂಪನಿ ಒಡೆಯರಿಗೆ ಮೋದಿ ಸರ್ಕಾರದಿಂದ ಸರ್ಜಿಕಲ್ ಸ್ಟ್ರೈಕ್ ಇದರಿಂದ ಭಾರತಕ್ಕೆ ಏನೆಲ್ಲಾ ಲಾಭ ಆಗುತ್ತೆ ಅಂತ ಹೇಳ್ತಿವಿ ನೋಡಿ..

0
801

ನವದೆಹಲಿ: ಪ್ರತಿಷ್ಠಿತ ಶೆಲ್ ಸಂಸ್ಥೆ ಅಧಃಪತನದತ್ತ ಸಾಗುತ್ತಿದೆ. ವಾರ್ಷಿಕ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳೆದ ಎರಡು ಆರ್ಥಿಕ ವರ್ಷಗಳಿಂದ ಭರ್ತಿ ಮಾಡದ ಕಾರಣ ಶೆಲ್ ಸಂಸ್ಥೆಯ 2ಲಕ್ಷಕ್ಕೂ ಹೆಚ್ಚು ನಿರ್ದೇಶಕರುಗಳನ್ನು ಕೇಂದ್ರ ಕಾರ್ಪೋರೇಟ್ ಸಚಿವಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ. ಕೇವಲ 15ದಿನಗಳಲ್ಲೇ ಈ ಆದೇಶ ಜಾರಿಯಾಗಲಿದ್ದು 2013ರ ಕಂಪೆನಿ ಆ್ಯಕ್ಟ್ ಅನ್ವಯ ಈ ಆದೇಶ ಜಾರಿಗೊಳಿಸಲಾಗಿದೆ. ಇದರೊಂದಿಗೆ ಕೇಂದ್ರ ಈವರೆಗೆ ವಜಾಗೊಳಿಸಿದ ನಿರ್ದೇಶಕರ ಸಂಖ್ಯೆ 3ಲಕ್ಷ ತಲುಪಿದೆ.

ಸಚಿವಾಲಯದ ಮೂಲಗಳ ಪ್ರಕಾರ ಆದಾಯ ಘೋಷಿಸಿಕೊಳ್ಳದ 3,19,637 ನಿರ್ದೇಶಕರುಗಳನ್ನು ವಜಾಗೊಳಿಸಲಾಗಿದೆ ಹಾಗೂ 2,17,239 ಸಂಸ್ಥೆಗಳ ನೋಂದಣಿ ರದ್ದುಗೊಳಿಸಲಾಗಿದೆ. ಇದು ಕೇವಲ 5 ಬ್ಯಾಂಕ್ ಗಳಿಂದ ಪಡೆದ ಮಾಹಿತಿಯನ್ವಯ ವಜಾಗೊಂಡಿರುವವರ ಸಂಖ್ಯೆ ಅಷ್ಟೇ ಆಗಿದ್ದು, ಇನ್ನುಳಿದ 30 ಬ್ಯಾಂಕ್ ಗಳಿಂದ ಮಾಹಿತಿ ಪಡೆದ ನಂತರ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.


ಅಧಿಕೃತ ಮಾಹಿತಿಯ ಪ್ರಕಾರ ಶೆಲ್ ಕಂಪೆನಿಯೊಂದೇ 2100 ಬ್ಯಾಂಕ್ ಅಕೌಂಟ್ ಹೊಂದಿದೆ. ಇದೊಂದೇ ಸಂಸ್ಥೆಯಲ್ಲದೇ ಇನ್ನೂ 50ಕ್ಕೂ ಹೆಚ್ಚು ಸಂಸ್ಥೆಗಳು 450, 600, 900, 2100 ಬ್ಯಾಂಕ್ ಅಕೌಂಟ್ ಗಳನ್ನು ಹೊಂದಿವೆ. ಇದು ಆಶ್ಚರ್ಯಕರವಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂತಹ ಕಂಪನಿಗಳ ಮೇಲೆ ಎಂಸಿಎನ ದೃಷ್ಟಿ ಬಿದ್ದಿದ್ದು, ತನಿಖೆ ನಡೆಯುತ್ತಿದೆ.


ಈ ಕುರಿತಾಗಿ ಸಚಿವಾಲಯವು ಭಾರತೀಯ ಬ್ಯಾಂಕ್ ಗಳ ಒಕ್ಕೂಟಕ್ಕೆ ಸೆಪ್ಟೆಂಬರ್ 8ರಂದು ಪತ್ರ ಬರೆದಿದ್ದು, ಒಂದು ತಿಂಗಳೊಳಗಾಗಿ ಸ್ಪಷ್ಟನೆ ನೀಡುವಂತೆ ಆದೇಶಿಸಿದೆ.
ಬ್ಯಾಂಕ್ ಗಳಿಗೆ ಸಚಿವಾಲಯವು ಮಾಹಿತಿ ನೀಡಬೇಕಾದ ಮಾದರಿಯೊಂದನ್ನು ನೀಡಿದ್ದು ನೋಟು ಅಮಾನ್ಯೀಕರಣಕ್ಕೂ ಮುಂಚೆ ಮತ್ತು ನಂತರದ ಠೇವಣಿ ಮತ್ತು ಹಣಹಿಂಪಡೆಯುವಿಕೆಯ ಕುರಿತಾದ ಮಾಹಿತಿ ನೀಡುವಂತೆ ತಿಳಿಸಿದೆ. ಸೆಪ್ಟೆಂಬರ್ 12ರಂದು ಕೇಂದ್ರ ಕಾರ್ಪೊರೇಟ್ ಸಚಿವಾಲಯವು ಒಂದು ಲಕ್ಷಕ್ಕೂ ಹೆಚ್ಚು ನಿರ್ದೇಶಕರುಗಳನ್ನು ವಜಾಗೊಳಿಸಿತ್ತು.