ಎಚ್ಚರ ಈ 42 ಚೀನಿ ಆಪ್-ಗಳು ನಿಮ್ಮ ಗೌಪ್ಯ ಮಾಹಿತಿಯನ್ನು ಕದ್ದು ದೇಶದ ಭದ್ರತೆಗೆ ಧಕ್ಕೆ ತರಲು ಯತ್ನಿಸಬಹುದು. ಇದರಿಂದ ದೂರವಿರಲು ಹೇಳುತ್ತಿದೆ ಭಾರತ ಸರ್ಕಾರ.

0
668

ಭಾರತ ಸರ್ಕಾರ ದೇಶದ ಭಧ್ರತೆಗೆ ಧಕ್ಕೆ ತರುವ ಈ 42 ಕಿರು ತಂತ್ರಾಂಶಗಳನ್ನು ನಿಷೇಧಿಸಲು ಮುಂದಾಗಿದೆ.

“ಚೀನಾ” ತನ್ನ ಅಗ್ಗದ ಬೆಲೆಯ ಮತ್ತು ಕಡಿಮೆ ಗುಣಮಟ್ಟದ ವಸ್ತುಗಳಿಂದಲೇ ಜಗತ್ತಿನಾದ್ಯಂತ ದೊಡ್ಡ-ದೊಡ್ಡ ಬ್ರಾಂಡ್-ಗಳಿಗೆ ತಲೆನೋವಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಈಗ ಇದೆ ದೇಶದ ಕೆಲ ಅಪ್ಲಿಕೇಶನ್ ಡೆವೆಲಪ್ಪರ್ಸ್ ಅಭಿವೃದ್ಧಿ ಪಡಿಸಿದ ಅಪ್ಲಿಕೇಶನ್-ಗಳು ಸೈಬರ್ ದಾಳಿಯ ಮೂಲಕ ದೇಶದ ಭಧ್ರತೆಗೆ ಧಕ್ಕೆ ತರಬಹುದೆಂಬ ಆತಂಕಕಾರಿ ವಿಷಯವನ್ನು ಕೇಂದ್ರ ಸರ್ಕಾರ ಹೇಳಿದೆ.

ಈ ಅಪ್ಲಿಕೇಶನ್-ಗಳನ್ನು ಗ್ರಾಹಕರ ಮಾಹಿತಿ ಕದ್ದು, ಅದನ್ನು ಚೀನಾಗೆ ಕಳುಹಿಸುವ ಹಾಗೆ ಅಭಿವೃದ್ಧಿಪಡಿಸಲಾಗಿದೆಯೆಂತೆ, ಅದಕ್ಕಾಗಿ ಈ ಅಪ್ಲಿಕೇಶನ್-ಗಳನ್ನು ತಮ್ಮ ಮೊಬೈಲ್-ನಿಂದ ಅನ್ಇನ್-ಸ್ಟಾಲ್ ಮಾಡಿ ತಮ್ಮ ಮೊಬೈಲ್ ಅನ್ನು ರಿ ಸೆಟ್ ಮಾಡುವಂತೆ ಸರ್ಕಾರ ಸೇನಾ ಸಿಬ್ಬಂದಿಗೆ ಸೂಚಿಸಿದೆ.

ಮಾಲ್ವೇರ್ ಅಥವಾ ಸ್ಪಾಮ್ ಅಪ್ಲಿಕೇಶನ್-ಗಳು ಈ ಕೆಲಗಿನಂತಿವೆ:


Weibo, WeChat, SHAREit, Truecaller, UC News, UC Browser, BeautyPlus, NewsDog, VivaVideo- QU Video Inc, Parallel Space, APUS Browser, Perfect Corp, Virus Cleaner (Hi Security Lab), CM Browser, Mi Community, DU recorder, Vault-Hide, YouCam Makeup, Mi Store, CacheClear DU apps studio, DU Battery Saver, DU Cleaner, DU Privacy, 360 Security, DU Browser, Clean Master – Cheetah Mobile, Baidu Translate, Baidu Map, Wonder Camera, ES File Explorer, Photo Wonder, QQ International, QQ Music, QQ Mail, QQ Player, QQ NewsFeed, WeSync, QQ Security Centre, SelfieCity, Mail Master, Mi Video call-Xiaomi, and QQ Launcher.

ಇದನ್ನುವಿಷಯವನ್ನು ಗಂಭೀರವಾಗಿ ತೆಗೆದುಕೊಂಡ Xiaomi ಕಂಪನಿಯವರು, ಭದ್ರತೆ ಮತ್ತು ಗೌಪ್ಯತೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಎಲ್ಲಾ ಅಂತರರಾಷ್ಟ್ರೀಯ ಬಳಕೆದಾರರಿಗಾಗಿ ನಮ್ಮ ಜಾಗತಿಕ ಇ-ವಾಣಿಜ್ಯ ವೇದಿಕೆಗಳು ಮತ್ತು ಬಳಕೆದಾರ ಡೇಟಾ ಕ್ಯಾಲಿಫೋರ್ನಿಯಾದ ಮತ್ತು ಸಿಂಗಾಪುರ್ನಲ್ಲಿನ ಅಮೆಜಾನ್ AWS ಡೇಟಾ ಕೇಂದ್ರಗಳಲ್ಲಿದೆ ಎಂದಿದೆ. ನಾವು ಪ್ರಸ್ತುತ ಸಲಹೆಯನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಎಲ್ಲಾ ಸಮಯದಲ್ಲೂ ನಮ್ಮ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ವರ್ಗಾಯಿಸಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ ಎಂದು ಎಂಐ ಅಭಿಮಾನಿಗಳಿಗೆ ಭರವಸೆ ನೀಡಿದೆ.

ಸರ್ಕಾರದ ಈ ಪಟ್ಟಿಯಲ್ಲಿ ತನ್ನ ಹೆಸರಿರುವುದನ್ನು ಕಂಡ “Truecaller” ಕಂಪನಿಯವರು, ನಮ್ಮದು ಚೀನಾ ಅಪ್ಲಿಕೇಶನ್ ಅಲ್ಲ, ನಮ್ಮ ಕಂಪನಿ ಮತ್ತು ಅಪ್ಲಿಕೇಶನ್ ಸ್ವೀಡನ್ ಮೂಲದ್ದಾಗಿದೆ ಎಂದು ಸ್ಪಷ್ಟಪಡಿಸಿದೆ.

ಒಟ್ಟಿನಲ್ಲಿ ಅಗ್ಗದ ಬೆಲೆ ಅಂತ ಇಂತಹ ಅಪಾಯಕಾರಿ ಚೀನಾ ವಸ್ತುಗಳು ಮತ್ತು ಅಪ್ಲಿಕೇಶನ್-ಗಳನ್ನು ಬಳಸುವುದು ಎಷ್ಟು ಸರಿ ನೀವೇ ಯೋಚಿಸಿ…!

ಒಟ್ಟಿನಲ್ಲಿ ಅಗ್ಗದ ಬೆಲೆ ಅಂತ ಇಂತಹ ಅಪಾಯಕಾರಿ ಚೀನಾ ವಸ್ತುಗಳು ಮತ್ತು ಅಪ್ಲಿಕೇಶನ್-ಗಳನ್ನು ಬಳಸುವುದು ಎಷ್ಟು ಸರಿ ನೀವೇ ಯೋಚಿಸಿ…!