ಇನ್ಮುಂದೆ ಬೇಕಾಬಿಟ್ಟಿ ವಾಹನ ಚಲಾಯಿಸುವ ಮುನ್ನ ಎಚ್ಚರ; ಆಕ್ಸಿಡೆಂಟ್ ಮಾಡಿದ್ರೆ ಮೃತರಿಗೆ, ಗಾಯಾಳುಗಳಿಗೆ ನೀವೆ ಪರಿಹಾರ ಕೊಡಬೇಕು..

0
408

ಕೇಂದ್ರ ಸರ್ಕಾರವು ದೇಶದಲ್ಲಿ ನಡೆಯುತ್ತಿರುವ ವಾಹನ ಅಪಘಾತಗಳ ಬಗ್ಗೆ ಹೆಚ್ಚಿನ ಸುರಕ್ಷತೆವಹಿಸಲು ಮುಂದಾಗಿದ್ದು, ಅಪಘಾತದಲ್ಲಿ ಸಾವನ್ನಪ್ಪಿದ, ಗಾಯಗೊಂಡ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಹೊಸ ತಿದ್ದುಪಡಿಯನ್ನು ಜಾರಿಗೆ ತಂದಿದ್ದು, ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ರ ಪ್ರಕಾರ ಇನ್ಮುಂದೆ ಅಪಘಾತ ಎಸೆಗಿದವರೇ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂಬ ನಿಯಮದ ಬಗ್ಗೆ ಲೋಕಸಭೆಯಲ್ಲಿ ಸೋಮವಾರದಂದು ಮಂಡಿಸಿದೆ. ಇದರ ಪ್ರಕಾರ ಆಕ್ಸಿಡೆಂಟ್ ಮಾಡಿದ ವಾಹನ ಮಾಲೀಕರೆ ಅಪಘಾತಕ್ಕೆ ಒಳಗಾದವರಿಗೆ ಪರಿಹಾರವನ್ನು ಕೊಡಬೇಕು.

Also read: ರೆಸಾರ್ಟ್ ರಾಜಕೀಯ ಮಾಡುತ್ತಿರುವ ನಾಯಕರ ವಿರುದ್ಧ ರೈತರಿಂದ ಬುಗಿಲೆದ್ದ ‘ಕ್ಯಾಕರಿಸಿ ಉಗಿಯುವ’ ಛೀ.. ಥೂ..ಚಳುವಳಿ..

ಏನಿದು ಹೊಸ ನಿಯಮ?

ಹೌದು ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ಮೋಟಾರು ವಾಹನ ತಿದ್ದುಪಡಿ ಮಾಡಿದ್ದು, ಅದರಂತೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತರಿಗೆ ವಾಹನ ಮಾಲೀಕರು/ವಿಮೆದಾರರಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡವರಿಗೆ ಅಪಘಾತ ಮಾಡಿದವರೇ 2.5 ಲಕ್ಷ ರೂ. ಕನಿಷ್ಠ ಆರ್ಥಿಕ ನೆರವನ್ನು ನೀಡಬೇಕು. ಹಾಗೆಯೇ ವಾಹನ ಪರವಾನಗಿ ನವೀಕರಣದ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ. ಜೊತೆಗೆ ವಿಶೇಷ ಚೇತನರಿಗೆ ಲೈಸೆನ್ಸ್ ನೀಡಲು ಸಾರಿಗೆ ಇಲಾಖೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುವ ಬಗ್ಗೆ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

Also read: ಕರ್ನಾಟಕದ ಕುಳ್ಳ ದ್ವಾರಕೀಶ್ ಇನ್ನಿಲ್ಲ, ಎನ್ನುವ ಸುಳ್ಳು ಸುದ್ದಿಗೆ ಖುದ್ದು ದ್ವಾರಕೀಶ್ ಅವರೇ ವಿಡಿಯೋ ಒಂದನ್ನು ಹರಿ ಬಿಟ್ಟು ಹೇಳಿದ್ದು ಏನು ಗೊತ್ತಾ??

ಸಾರ್ವಜನಿಕರಿಗೆ ಪೊಲೀಸ್ ವಿಚಾರಣೆ ಇಲ್ಲ?

ಅಷ್ಟೇ ಅಲ್ಲದೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡುವುದು, ಮಾನವೀಯ ದೃಷ್ಟಿಯಲ್ಲಿ ಗಾಯಾಳುಗಳ ಸಹಾಯಕ್ಕೆ ಬರುವ ಸಾರ್ವಜನಿಕರಿಗೆ ಪೊಲೀಸ್ ವಿಚಾರಣೆಯ ಕಿರಿಕಿರಿಯಿಂದ ವಿನಾಯಿತಿ ನೀಡುವುದು, ಹೀಗೆ ಹಲವು ಸುಧಾರಣಾ ಕ್ರಮಗಳ ಬಗ್ಗೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತು 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗುತ್ತೆ.

ಯಾವುದಕ್ಕೆ ಎಷ್ಟು ದಂಡ?

1.ಚಾಲನಾ ಪರವಾನಗಿ (ಡಿಎಲ್) ಇಲ್ಲದೆ ವಾಹನ ಚಲಾಯಿಸುವವರಿಗೆ 5,000 ರೂ. ದಂಡ
2. ರಸ್ತೆಯಲ್ಲಿ ಸಾಗುವಾಗ ಆಂಬ್ಯುಲೆನ್ಸ್‍ಗೆ ದಾರಿ ಬಿಡದ ವಾಹನ ಸವಾರರಿಗೆ 10,000 ರೂ. ದಂಡ.
3. ಅತಿ ವೇಗದ ಚಾಲನೆಗೆ 2,000 ರೂ. ದಂಡ,
4. ಹೆಲ್ಮೆಟ್ ಹಾಕದೆ ದ್ವಿಚಕ್ರ ಚಲಾಯಿಸಿದರೆ 1,000 ರೂ. ದಂಡದ ಜೊತೆಗೆ 3 ತಿಂಗಳು ಡಿಎಲ್ ರದ್ದುಗೊಳಿಸಲಾಗುತ್ತದೆ.
5. ವಿಮೆ ಇಲ್ಲದೆ ವಾಹನ ಓಡಿಸಿದರೆ 2,000 ರೂ. ದಂಡ
6. ಹಾಗೂ ಕುಡಿದು ವಾಹನ ಚಲಾವಣೆ( ಡ್ರಿಂಕ್ ಆ್ಯಂಡ್ ಡ್ರೈವ್) ಮಾಡಿದರೆ 10,000 ರೂ. ದಂಡ ಕಟ್ಟಬೇಕು ಎಂದು ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ದಲ್ಲಿ ತಿಳಿಸಲಾಗಿದೆ.

Also read: ರೇಷನ್‌ ಕಾರ್ಡ್ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ; ಶೀಘ್ರದಲ್ಲೇ ರೇಷನ್‌ ಕಾರ್ಡ್ ಪೋರ್ಟೆಬಿಲಿಟಿ ಜಾರಿಗೆ..

ಈ ನಿಯಮಕ್ಕೆ ಕೇಳಿ ಬಂದ ವಿರೋಧ;

ಈ ವಿಧೇಯಕದಲ್ಲಿರುವ ಕೆಲವು ಅಂಶಗಳ ಬಗ್ಗೆ ಪತ್ರಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಸರ್ಕಾರ ತಿದ್ದುಪಡಿ ವಿಧೇಯಕದ ಕರಡು ಸಿದ್ಧಪಡಿಸುವ ಮುಂಚೆಯೇ 18 ರಾಜ್ಯಗಳ ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಅಲ್ಲದೆ ಈ ಬಿಲ್ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ. ಕಾಯ್ದೆಯನ್ನು ಜಾರಿಗೊಳಿಸುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಸ್ಪಷ್ಟನೆ ನೀಡಿದ ಬಳಿಕ ಮಾತನಾಡಿ, ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು 1.5 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. 5 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಹಾಗೆಯೇ ದೇಶದಲ್ಲಿ ಶೇ. 30ರಷ್ಟು ಡ್ರೈವಿಂಗ್ ಲೈಸನ್ಸ್ ಬೋಗಸ್ ಆಗಿದೆ ಎಂದು ಹೇಳಿದರು. ಅದಕ್ಕಾಗಿ ಈ ನಿಯಮವನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ.