ರೇಷನ್‌ ಕಾರ್ಡ್ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ; ಶೀಘ್ರದಲ್ಲೇ ರೇಷನ್‌ ಕಾರ್ಡ್ ಪೋರ್ಟೆಬಿಲಿಟಿ ಜಾರಿಗೆ..

0
897

ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಶೀಘ್ರದಲ್ಲೇ ರೇಷನ್‌ ಕಾರ್ಡ್ ಪೋರ್ಟೆಬಿಲಿಟಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಇದರಿಂದ ವಲಸೆ ಹೋಗುವರಿಗೆ ತಾವು ಎಲ್ಲಿ ನೆಲೆಸಿರುತ್ತಾರೆ ಅಲ್ಲೇ ರೇಷನ್ ಪಡೆಯುವ ಅವಕಾಶವನ್ನು ಒದಗಿಸುವ ಬಗ್ಗೆ ಮಾಹಿತಿ ನೀಡಿತ್ತು, ಈ ಯೋಜನೆಯನ್ನು ಶೀಘ್ರದಲ್ಲೇ ಅಂದರೆ ಮುಂದಿನ ತಿಂಗಳಿಂದಲೇ ಜಾರಿಗೆ ತರುತ್ತಿದೆ ಎಂದು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಸಚಿವ ರಾಮವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಅದರಂತೆ 2020ರ ಜೂನ್ 30ರೊಳಗೆ ರೇಷನ್ ಕಾರ್ಡ್‌ಗಳನ್ನು ಪೂರ್ಣಪ್ರಮಾಣದ ವರ್ಗಾವಣೆ ವ್ಯವಸ್ಥೆಯಡಿ ತರಲಾಗುವುದು. ಇದರಿಂದ ರಾಜ್ಯದ ಯಾವುದೇ ಊರಿನಲ್ಲಿ ಪಡಿತರ ವಸ್ತುಗಳನ್ನು ಪಡೆಯಬಹುದು ಎಂದು ಹೇಳಿದ್ದಾರೆ.

Also read: ಪ್ಲಾಸ್ಟಿಕ್ ಉತ್ಪಾದಕರ ವಿರುದ್ದ ಕ್ರಮ ಕೈಗೊಳಲ್ಲು ಸೋತ BBMP, ಈಗ ನಾಗರೀಕರ ಕೈಯಲ್ಲಿ ಪ್ಲಾಸ್ಟಿಕ್‌ ಬ್ಯಾಗ್ ಕಂಡರೆ ದಂಡ ಹಾಕ್ತಾರಂತೆ!! ನಾಗರೀಕರ ಮೇಲೆ ಈ ಗದಾ ಪ್ರಹಾರ ಸರಿಯೇ??

ಹೌದು ಉದ್ಯೋಗ ಅರಸಿ ತಮ್ಮ ಹುಟ್ಟೂರು ಅಥವಾ ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ರೇಷನ್ ಕಾರ್ಡನ್ನು ಉದ್ಯೋಗ ನಿರ್ವಹಿಸುವ ಪಟ್ಟಣಕ್ಕೆ ವರ್ಗಾಯಿಸಬಹುದಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ. ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ನಿಗದಿತ ಪ್ರಮಾಣದಲ್ಲಿ ಕಡಿಮೆ ವೆಚ್ಚದಲ್ಲಿ ಆಹಾರ ವಸ್ತುಗಳನ್ನು ಪಡೆಯಲು ಸಾಧ್ಯವಾಗಿದೆ. ತಿಂಗಳಿಗೆ ತಲಾ 5 ಕಿ.ಗ್ರಾಂ ಆಹಾರಧಾನ್ಯವನ್ನು ಸಬ್ಸಿಡಿ ದರದಲ್ಲಿ ಕಿ.ಗ್ರಾಂಗೆ 2ರಿಂದ 3 ರೂ. ಪಾವತಿಸಿ ಪಡೆಯಬಹುದಾಗಿದೆ. ಮುಂದಿನ ಸೆಪ್ಟೆಂಬರ್‌ನಿಂದ ಉದ್ಯೋಗಕ್ಕಾಗಿ ಬೃಹತ್ ನಗರಗಳಿಗೆ ವಲಸೆ ಹೋಗುವ ಬಡವರು ತಮ್ಮ ರೇಷನ್‌ಕಾರ್ಡ್ ಬಳಸಿ ತಾವು ಉದ್ಯೋಗ ಮಾಡುವ ನಗರಗಳಲ್ಲೇ ತಮ್ಮ ಪಾಲಿನ ಪಡಿತರ ವಸ್ತುಗಳನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಈಗಲೇ ಸೂಚನೆ ನೀಡಲಾಗಿದೆ.

ರಾಜ್ಯ ಸರಕಾರಗಳಿಗೆ ಸೂಚನೆ?

ದೇಶದಾದ್ಯಂತ ರೇಷನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ಎಲ್ಲಾ ರಾಜ್ಯಗಳೂ ಪಡಿತರ ವಿತರಣೆ ವ್ಯವಸ್ಥೆಯನ್ನು ಮಾರಾಟದ ಹಂತದ ವ್ಯವಸ್ಥೆಯ ಮೂಲಕವೇ ನಡೆಸಲು ಸೂಚಿಸಲಾಗಿದೆ. ಒಂದು ದೇಶ-ಒಂದು ರೇಷನ್ ಕಾರ್ಡ್ ವ್ಯವಸ್ಥೆ ಜಾರಿಗೊಳಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ . ಇದರಂತೆ ಒಂದೇ ಸರ್ವರ್‌ಗೆ ಎಲ್ಲಾ ರೇಷನ್ ಕಾರ್ಡ್‌ಗಳ ಮಾಹಿತಿ ಒದಗಿಸಲಾಗುವುದು. ಈ ಮೂಲಕ ದೇಶದಾದ್ಯಂತ ಫಲಾನುಭವಿಗಳು ರೇಷನ್ ಕಾರ್ಡ್ ಬಳಸಿ ತಮ್ಮ ಪಾಲಿ ಆಹಾರಧಾನ್ಯ ಪಡೆಯಬಹುದು ಎಂದು ಸಚಿವ ಪಾಸ್ವಾನ್ ಹೇಳಿದ್ದಾರೆ.

Also read: ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಮುನ್ನ ಎಚ್ಚರ; ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 24 ಜನರ ಪೈಕಿ ಕಣ್ಣುಕಳೆದುಕೊಂಡ 19 ಜನರು..

ಡಿಪೋ ಆನ್‌ಲೈನ್ ವ್ಯವಸ್ಥೆ(ಡಿಒಎಸ್)ಯನ್ನು ಪಿಡಿಎಸ್‌ನೊಂದಿಗೆ ಸಂಯೋಜಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಇದರಂತೆ ಭಾರತೀಯ ಆಹಾರ ನಿಗಮವು ಎಲ್ಲಾ ರಾಜ್ಯಗಳಿಗೂ 4 ತಿಂಗಳಾವಧಿಗೆ ಇಂಟರ್‌ನೆಟ್ ಮಾಹಿತಿ ವ್ಯವಸ್ಥೆ ಒದಗಿಸುತ್ತದೆ. ಆ ಬಳಿಕ ಎರಡು ತಿಂಗಳೊಳಗೆ ರಾಜ್ಯ ಸರಕಾರಗಳು ತಮ್ಮ ಗೋದಾಮಿನ ನಿರ್ವಹಣಾ ವ್ಯವಸ್ಥೆಯನ್ನು ಡಿಒಎಸ್‌ನೊಂದಿಗೆ ಸಂಯೋಜಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಪಡಿತರರಿಗೆ ಏನು ಲಾಭ?

Also read: ದೇಶದ ಜನತೆ ಹೇಗೆ ಸಮಯ ಹಾಳುಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಯಲು ಸಮೀಕ್ಷೆ ನಡೆಸುತ್ತಿರುವ ಕೇಂದ್ರ ಸರಕಾರ..

ಈ ವ್ಯವಸ್ಥೆಯಡಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಹರಿಯಾಣ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ತೆಲಂಗಾಣ ಮತ್ತು ತ್ರಿಪುರಾ ಸೇರಿ ಒಟ್ಟು ಹತ್ತು ರಾಜ್ಯಗಳು ಈಗಾಗಲೇ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಒದಗಿಸುತ್ತಿವೆ ಎಂದು ಕೇಂದ್ರ ಆಹಾರ ಸಚಿವ ರಾಮ್‌ ವಿಲಾಸ್ ಪಾಸ್ವಾನ್ ಅವರು ಹೇಳಿದ್ದಾರೆ.