ಲಾಕ್ ಡೌನ್ ವೇಳೆ ಸಾವನಪ್ಪಿದ ವಲಸೆ ಕಾರ್ಮಿಕ ಕುಟುಂಬದವರಿಗೆ ಪರಿಹಾರ ಕೊಡಲು ನಿರಾಕರಿಸಿದ ಅಮಾನವೀಯ ಕೇಂದ್ರ ಸರ್ಕಾರ!!

0
132

ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆನೇಕ ಜನ ವಲಸೆ ಕಾರ್ಮಿಕರು ತಮ್ಮ ತವರಿಗೆ ತೆರಳುವ ಮಾರ್ಗದಲ್ಲೇ ಅಸುನಿಗಿದ್ದಾರೆ. ಆದರೆ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರು ತಮ್ಮ ಮನೆಗೆಳಿಗೆ ಹೋಗುವ ಸಮಯದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ಇಲ್ಲ ಎಂದು ಹೇಳಿದೆ.

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಹಾಗೂ ಪ್ರಾಣ ಕಳೆದುಕೊಂಡಿರುವ ವಲಸೆ ಕಾರ್ಮಿಕರ ಅಂಕಿಅಂಶಗಳು ನಮ್ಮ ಬಳಿ ಇಲ್ಲ ಎಂದು ಕೇಂದ್ರ ಸರ್ಕಾರವು ಸಂಸತ್ಗೆ ತಿಳಿಸಿದೆ. ವಲಸೆ ಕಾರ್ಮಿಕರ ಸಾವು ಹಾಗೂ ಉದ್ಯೋಗದ ಕುರಿತು ಕೇಳಿರುವ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದ್ದು, ಯಾವುದೇ ಅಂಕಿ ಅಂಶಗಳು ನಮ್ಮ ಬಳಿ ಇಲ್ಲ ಎಂದು ಹೇಳಿದೆ.

ಸಂಸದರು ಕೇಳಿರುವ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ? ಎಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ? ಸಂತ್ರಸ್ತರ ಕುಟುಂಬಳಿಕೆ ಪರಿಹಾರ ಎಷ್ಟು ನೀಡಲಾಗಿದೆ ? ಎಂಬ ಪ್ರಶ್ನೆಗಳಿಗೆ ಲಿಖಿತ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, ಲಾಕ್ ಡೌನ್ ಸಮಯದಲ್ಲಿ ಎಷ್ಟು ಜನ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ, ಎಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಬಳಿ ಮಾಹಿತಿ ಇಲ್ಲ. ಹಾಗಾಗಿ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಉತ್ತರಿಸಿದ್ದಾರೆ.

ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಲಿಖಿತ ಉತ್ತರದಲ್ಲಿ ಕಾರ್ಮಿಕರಿಗೆ ಉಚಿತ ಪಡಿತರ ವಿತರಣೆಯನ್ನು ರಾಜ್ಯವಾರು ಸರ್ಕಾರ ನಿರ್ವಹಿಸಿಲ್ಲ ಎಂದು ಮಾಹಿತಿ ನೀಡಿದೆ. ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ, ಸರ್ಕಾರು ಅಂತಹ ಯಾವುದೇ ಅಂಕಿ-ಅಂಶಗಳು ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದೆ.

ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯಗಳನ್ನು ನಿರ್ಣಯಿಸಲು ಸರ್ಕಾರ ವಿಫಲವಾಗಿದೆಯೇ ಎಂದು ಕೇಳಿದಾಗ ಭಾರತವು ಒಂದು ದೇಶವಾಗಿ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ಕಲ್ಯಾಣ ಸಂಘಗಳು ಸೇರಿ ಕಾರ್ಮಿಕರ ಸಮಸ್ಯೆಗೆ ಸ್ಪಂಧಿಸಿವೆ. ರಾಜ್ಯವಾರು ಪರಿತರ ನೀಡಿರುವ ಅಂಕಿ ಅಂಶಗಳು ಕೂಡ ಇಲ್ಲ ಎಂದು ಸರ್ಕಾರ ಹೇಳಿದೆ. 80 ಕೋಟಿ ಜನರಿಗೆ ಹೆಚ್ಚುವರಿಯಾಗಿ 5 ಕೆಜಿ ಗೋಧಿ ಅಥವಾ ಅಕ್ಕಿ, ಒಂದು ಕೆಜಿ ಬೇಳೆಯನ್ನು ನೀಡಲಾಗಿದೆ. ನವೆಂಬರ್ವರೆಗೆ ಉಚಿತವಾಗಿ ನೀಡಲಾಗುತ್ತದೆ. ಸರ್ಕಾರವು ಒಂದು ದೇಶ ಒಂದೇ ಪಡಿತರ ಚೀಟಿಯನ್ನು ನೀಡಲು ಮುಂದಾಗಿದೆ. ಇಡೀ ದೇಶದಲ್ಲಿರುವ ಯಾವುದೇ ಪಡಿತರ ಅಂಗಡಿಗಳ ಮೂಲಕವೂ ಪಡಿತರ ಪಡೆಯಬಹುದು.

Also read: ಹಿಂದಿ ಹೇರಿಕೆಯ ವಿರುದ್ಧ ಕೂಗನ್ನು ನಿರ್ಲಕ್ಷಿಸಿ, ಇನ್ನೂ ಹೆಚ್ಚು ಹಿಂದಿ ಬಳಕೆ ಮಾಡುವಂತೆ ಸರ್ಕಾರಿ ಹಾಗೂ ಬ್ಯಾಂಕ್ ನೌಕರರಿಗೆ ಕರೆ ನೀಡಿದ ಅಮಿತ್ ಶಾ!!