ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ..

0
1205

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕಲಬುರಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರೇಡ್-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 2, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: 12ನೇ ಆವೃತ್ತಿ IPL ವೇಳಾಪಟ್ಟಿ ಪ್ರಕಟ; 2019 ರ ಐಪಿಎಲ್ ಹಬ್ಬಕೆ ತಿಂಗಳಷ್ಟೇ ಬಾಕಿ, ನಿಮ್ಮ ನೆಚ್ಚಿನ ಪದ್ಯ ಯಾವದಿನ ಇದೆ ನೋಡಿ..

ಹುದ್ದೆಗಳಿಗೆ ಸಂಬಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಗ್ರಾಮ ಪಂಚಾಯತ್ ಕಾರ್ಯದರ್ಶಿ & ದ್ವಿತೀಯ ದರ್ಜೆ ಸಹಾಯಕರು

ಸಂಸ್ಥೆ (Organisation): ಜಿಲ್ಲಾ ಪಂಚಾಯತ್

ಉದ್ಯೋಗ ಸ್ಥಳ (Job Location): ಕಲಬುರ್ಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): March 2, 2019

ವಿದ್ಯಾರ್ಹತೆ (Educational Qualification): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಟ PUC (SSLC ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಮಾನ್ಯ ನ್ಯಾಯಾಲಯ
ಹೊರಡಿಸಿರುವ ಆದೇಶಕ್ಕೆ ಒಳಪಟ್ಟು ಒಪ್ಪಿ ಅರ್ಜಿ ಸಲ್ಲಿಸುವುದು) ವಿದ್ಯಾರ್ಹತೆಯನ್ನು ಹೊಂದಿರಬೇಕು.

ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಅರ್ಜಿಯ ಶುಲ್ಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ 250/- ಹಾಗೂ ಸಾಮಾನ್ಯ ಇತರೆ ಪ್ರವರ್ಗದ ಅಭ್ಯರ್ಥಿಗಳಿಗೆ ರೂ.500/- ಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಹೆಸರಿನಲ್ಲಿ ಪಡೆದ ಪೋಸ್ಟಲ್ ಆರ್ಡರ್ ಸಲ್ಲಿಸಿ, ಜಿಲ್ಲಾ ಪಂಚಾಯತ್ ಕಛೇರಿಯ ಆಡಳಿತ ಶಾಖೆಯಲ್ಲಿ ಕಛೇರಿಯ ಸಮಯದಲ್ಲಿ ಪಾವತಿಸಿ ಅರ್ಜಿ ಪಡೆಯುವುದು.

ಈ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಅಧಿಕೃತ ವೆಬ್ ಸೈಟ್ https://kalaburagi.nic.in/ ಗೆ ಹೋಗಿ.

ಹೆಚ್ಚಿನ ಮಾಹಿತಿಗಾಗಿ: https://cdn.s3waas.gov.in/s306997f04a7db92466a2baa6ebc8b872d/uploads/2019/02/2019021674.pdf ಕ್ಲಿಕ್ ಮಾಡಿ.