ಜನರಲ್ ಪ್ರಾವಿಡಂಟ್ ಫಂಡ (GPF) ಪಡೆಯಲು ಇದ್ದ ನಿಯಮಗಳನ್ನು ಸಡಿಲ ಗೊಳಿಸಲಾಗಿದೆ!!

0
1030

ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ಜನರಲ್ ಪ್ರಾವಿಡಂಟ್ ಫಂಡ (GPF) ಪಡೆಯಲು ಇದ್ದ ನಿಯಮಗಳನ್ನು ಸಡಿಲ ಗೊಳಿಸಲಾಗಿದ್ದು, ನೌಕರರ ಹಿತದ ದೃಷ್ಟಿಯಿಂದ ಕೇಂದ್ರ ಮಹತ್ತರ ತೀರ್ಮಾನವನ್ನು ತೆಗೆದುಕೊಂಡಿದೆ. ನೂತನ ನಿಯಮಂದತೆ ಅರ್ಜಿ ನೀಡಿದ 15 ದಿನಗಳಲ್ಲಿ ಉದ್ಯೋಗಿಗಳಿಗೆ ಹಣ ನೀಡಲು ತೀರ್ಮಾನಿಸಲಾಗಿದೆ.

ಯಾವ ಯಾವ ನಿಯಮ ಸಡಲಿಕೆ

10 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳು ಪಿಎಫ್‍ ಪಡೆಯಲು ಅರ್ಹರು. ಈ ಮೊದಲು ಇದರ ಅವಧಿ 15 ವರ್ಷ ಆಗಿತ್ತು.

ಇನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇನ್ನು ಪ್ರಾಥಮಿಕ ಶಿಕ್ಷಣದಿಂದಲೇ ಇದರ ಸಂಪೂರ್ಣ ಲಾಭ ಪಡೆಯಬಹುದು. ಈ ತಿದ್ದು ಪಡಿಗೂ ಮುನ್ನ ಹೈಸ್ಕೂಲ್ ದಾಟಿದರೆ ಮಾತ್ರ ಈ ಹಣವನ್ನು ಪಡೆಯಲು ಅರ್ಹರಾಗಿ ಇರುತ್ತಿದ್ದರು.

Image result for PF

ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ ಉದ್ಯೋಗಿಯ ಕುಟುಂಬದಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಅಂತ್ಯಕ್ರಿಯೆಗೂ ಹಣ ಪಡೆಯಬಹುದು. ಉದ್ಯೋಗಿ ಅವಲಂಬಿತ ಕುಟುಂಬದಲ್ಲಿ ವಿವಾಹ, ನಿಶ್ಚಿತಾ‍ರ್ಥಕ್ಕೂ ಪಿಎಫ್ ಹಣದ ಲಾಭ ಪಡೆಯಬಹುದು.

ಇನ್ನು ವೈದ್ಯಕೀಯ ಚಿಕಿತ್ಸೆಗೆ, ಒಂದು ವಾರದಲ್ಲಿ ಶೇ.90 ರಷ್ಟ ಹಣ ಬಿಡುಗಡೆ ಮಾಡಬಹುದು.

Image result for PF

ಮೊದಲು ಹಣ ಪಡೆಯಲು ದಾಖಲೆ ನೀಡಬೇಕಿತ್ತು. ಆದರೆ ಈಗ ಹಣಕ್ಕಾಗಿ ದಾಖಲೆ ನೀಡುವ ಅವಶ್ಯಕತೆ ಏನು ಇರುವುದಿಲ್ಲ. ಉದ್ಯೋಗಿಗಳು ನಿಯಮಿತವಾಗಿ ಪಿಎಫ್ ಬ್ಯಾಲೆನ್ಸ್ ಕಾಪಾಡಿಕೊಂಡರೆ ನಿವೃತ್ತಿ ನಂತರಉತ್ತಮವಾದ ಯೋಜನೆಯನ್ನು ಮಾಡಬಹುದಾಗಿದೆ.

ಮುಂಗಡ ಹಣ ಪಡೆದು ಉದ್ಯೋಗಿಯು ಅದನ್ನು ದುರ್ಬಳಕೆ ಮಾಡಿಕೊಂಡ ಅಂಶ ಬೆಳಕಿಗೆ ಬಂದಲ್ಲಿ, ಉದ್ಯೋಗಿ ಪಡೆದ ಎಲ್ಲ ಹಣವನ್ನು ವಾಪಸ್ ಪಡೆಯಬಹುದು. ಜತೆಗೆ ಬಡ್ದಿಯನ್ನು ಹೇರಬಹುದು. ಪೆಡೆದಿರುವ ಹಣದಲ್ಲಿ ಖರ್ಚಾಗಿದಲ್ಲಿ ಮಿಕ್ಕ ಹಣವನ್ನು ಖಾತೆಗೆ ಕಟ್ಟಬಹುದು.