ಈ ಯುವತಿ ಅತ್ಯಾಚಾರ ತಡೆಗೆ ವಿಷೇಶ ಒಳ ಉಡುಪು ತಯಾರಿಸಿದ್ದಾಳೆ, ಇದರ ವಿಶೇಷತೆ ಗೊತ್ತ?

0
1454

ಭೋಪಾಲ್‌: ಇತ್ತೀಚೆಗೆ ಕಂದಮ್ಮಗಳ ಮೇಲೂ ಕಾಮಾಂಧರ ಅತ್ಯಾಚಾರ ಎಸಗುತ್ತಿದ್ದಾರೆ… ಹಾಗಾಗಿ ಮಕ್ಕಳು, ವೃದ್ಧೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಯುವತಿಯೊಬ್ಬರು ಹೊಸ ಒಳ ಉಡುಪನ್ನು ತಯಾರಿಸಿದ್ದಾರೆ.

ಜಿಪಿಎಸ್‌ ಅಳವಡಿಸಿರುವ ಒಳ ಉಡುಪನ್ನು ಮಧ್ಯಪ್ರದೇಶದ ಫಾರೂಕ್‌ಬಾದ್‌ನ ಸೀನು ಕುಮಾರಿ ಎಂಬ ಯುವತಿ ಸಂಶೋಧಿಸಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಈ ಜಿಪಿಎಸ್‌ ಒಳ ಉಡುಪನ್ನು ಸಿದ್ಧಪಡಿಸಲಾಗಿದೆ ಎಂದು ಸೀನು ಹೇಳಿದ್ದಾರೆ. ಅತ್ಯಾಚಾರ ವಿರೋಧಿ ಜಿಪಿಎಸ್‌ ಒಳ ಉಡುಪನ್ನು ಹೊಸ ವಿದ್ಯುನ್ಮಾನ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಇದಕ್ಕೆ ಸ್ಮಾರ್ಟ್‌ ಲಾಕ್‌ ಇದೆ. ಪಾಸ್‌ವರ್ಡ್‌ ಇಲ್ಲದೇ ಈ ಒಳ ಉಡುಪನ್ನು ಬಿಚ್ಚಲು ಆಗುವುದಿಲ್ಲ.

ಒಳ ಉಡುಪು ಈ ಜಿಪಿ‌ಎಸ್‌ ವ್ಯವಸ್ಥೆಯಿಂದ ಕೂಡಿದ್ದು ಸ್ಥಳದ ಮಾಹಿತಿ ಹಾಗೂ ಮಾತನ್ನು ರೆಕಾರ್ಡ್‌ ಮಾಡುವ ಸಾಧನವೂ ಇದರಲ್ಲಿ ಅವಳವಡಿಸಲಾಗಿದೆ. ಈ ಒಳ ಉಡುಪನ್ನು ಬ್ಲೇಡ್ ಪ್ರೂಫ್ ಬಟ್ಟೆಯಿಂದ ತಯಾರಿಸಲಾಗಿದೆ. ಇದನ್ನು ಯಾವುದೇ ಚೂಪಾದ ಆಯುಧದಿಂದಲೂ ಕತ್ತರಿಸಲು ಕೂಡಾ ಆಗಲ್ಲ. ಇದರಲ್ಲಿರುವ ಬಟನ್‌ ಇಂದ ಆಟೋಮ್ಯಾಟಿಕ್‌ ಆಗಿ 100 ಅಥವಾ 1009 ನಂಬರ್‌ಗೆ ಕರೆ ಹೋಗುತ್ತದೆ. ಇದರಿಂದ ಅಪಾಯದಲ್ಲಿರುವ ಬಾಲಕಿಯ ಸ್ಥಳವನ್ನು ಜಿಪಿಎಸ್‌ ಸಹಾಯದಿಂದ ಪೊಲೀಸರು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಈಗಾಗಲೇ ಸೀನು ಕುಮಾರಿ ಸಿದ್ಧಪಡಿಸಿರುವ ಜಿಪಿಎಸ್‌ ಒಳ ಉಡುಪು ವಿಷಯ ಕೇಂದ್ರ ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಗಮನಕ್ಕೂ ಬಂದಿದೆ. ಸೀನು ಕುಮಾರಿ ಕಾರ್ಯವನ್ನು ಶ್ಲಾಘಿಸಿರುವ ಮನೇಕಾ ಗಾಂಧಿ, ಈ ಜಿಪಿಎಸ್‌ ಒಳ ಉಡುಪು ಮಹಿಳೆಯರಿಗೆ ಸಹಾಯವಾಗಲಿದೆ ಎಂದಿದ್ದಾರೆ ಎನ್ನಲಾಗಿದೆ.

ಜಿಪಿಎಸ್‌ ಒಳ ಉಡುಪನ್ನು ಸಿದ್ಧಪಡಿಸಲು 5 ಸಾವಿರ ರೂಪಾಯಿ ವೆಚ್ಚವಾಗಿದೆ. ಬೇರೆ ಒಳ ಉಡುಪುಗಳಿಗೆ ಹೋಲಿಕೆ ಮಾಡಿದರೆ, ಇದರ ಬೆಲೆ ಜಾಸ್ತಿನೇ. ಆದರೆ, ಮಹಿಳೆಯರ ಸುರಕ್ಷತೆ ವಿಷಯವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸುತ್ತದೆ ಎಂದು ನಾನು ನಂಬಿದ್ದೇನೆ. ಎಲ್ಲಾ ಬಡ ಮಹಿಳೆಯರಿಗೂ ಕೈಗೆಟಕುವ ಬೆಲೆಯಲ್ಲಿ ಸರ್ಕಾರ ಇದನ್ನು ಪೂರೈಸಲಿ ಎಂದು ಸೀನು ಕುಮಾರಿ ಮನವಿ ಮಾಡಿದ್ದಾರೆ.