GR ವಿಶ್ವನಾಥ್ ಜಗತ್ತು ಕಂಡ ಅತ್ಯಂತ ವಿಶಿಷ್ಟ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರು…!

0
894

Kannada News | Karnataka Achiecers

ಹೌದು ಜಗತ್ತು ಕಂಡ ಅತ್ಯಂತ ವಿಶಿಷ್ಟ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರು ಅಂದರೆ ತಪ್ಪಿಲ್ಲ ಇವರಿಗೆ ಕ್ರಿಕೆಟ್ ಅಂದ್ರೆ ಪ್ರಾಣ. ಭಾರತೀಯ ಕ್ರಿಕೆಟ್ ಕಂಡ ಅಪರೂಪದ ಪ್ರತಿಭೆ ಇವರು . ಬಲಗೈ ಬ್ಯಾಟ್ಸಮನ್ ಆಗಿ ಹೆಚ್ಚು ಜನಪ್ರಿಯತೆ ಪಡೆದಿದ್ದ , ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯಧೈವ. 1970 ರಿಂದ 1983 ರ ತನಕ ಭಾರತೀಯ ಕ್ರಿಕೆಡ್ ತಂಡದಲ್ಲಿ ವಿಶ್ವನಾಥ್ ತಮ್ಮದೆ ಆಚ ಚಾಪು ಮೂಡಿಸಿದ್ದರು.

Image result for gr vishwanath

ವಿಶ್ವನಾಥ್ ರವರು 1949, ಫೆ. 12 ರಂದು ಭದ್ರಾವತಿಯಲ್ಲಿ ಜನಿಸಿದರು. ವಿಶ್ವನಾಥ್ ಸಾಮಾನ್ಯ ಹುಡುಗನಾಗಿದ್ದಾಗ ಇವರಿಗೆ ಬೆಂಬಲಿಸಿ ಇವರ ಯಶಸ್ವಿಗೆ ಕಾರಣವಾಗಿದ್ದು ಉದ್ಯಮಿ ಶೆಟ್ಟಿ ಚಂದ್ರ ಇವರು ವಿಶ್ವನಾಥ್ ಗೆ ಬೆಂಬಲವಾಗಿ ನಿಂತು ಬೆಳೆಸಿದ್ದರು. ಹೀಗೆ ವಿಶ್ವನಾಥ್ ಬೆಳೆದು ಒಂದು ದಿನ ವಿದೇಶದಿಂದ ಭಾರತಕ್ಕೆ ಮರಳುವಾಗ. ಏರ್ಪೋರ್ಟ್ ಗೆ ಅನೇಕ ಗಣ್ಯ ವ್ಯಕ್ತಿಗಳು ಹೋಗಿರುತ್ತಾರೆ. ಆಗ ಶೆಟ್ಟಿ ಚಂದ್ರ ತನ್ನ ಗೆಳೆಯರಿಗೆ ಹೇಳ್ತಾನೆ ಬನ್ರೋ ನಾವು ಹೋಗಣ ಅಂತ ಆದರೆ ಅವರ ಹತ್ತಿರ ಅದೇ ಮಾಮೂಲಿ ಬಟ್ಟೆ ಹಾಕಿಕೊಂಡು ಹೋಗ್ತಾರೆ. ಆಗ ಶೆಟ್ಟಿ ಗೆಳೆಯ ಒಬ್ಬ ಹೇಳ್ತಾನೆ ಬೇಡ ಮಗ ನಾವು ಹೋಗೋದು ನಮ್ಮನ ನೋಡಲ್ಲ ಕಣೋ ಅಂತಾನೆ. ಶೆಟ್ಟಿ ಚಂದ್ರರವರು ಹೇಳ್ತಾರೆ ನೋಡಣ ಬಾರೋ ಏನ್ ನೋಡಣ ಅವ್ನು ಬಲಾಗಿಲ್ಲ ಅನ್ಸುತ್ತೆ ಅಂತ ಕಾದು ನಿಂತಿರುತ್ತಾರೆ.

Image result for gr vishwanath

ಅಲ್ಲಿ ಗಣ್ಯ ವ್ಯಕ್ತಿಗಳು ಹಾರ ಮತ್ತು ಅದ್ಬುತ ಸ್ವಾಗತಕ್ಕೆ ಸಜ್ಜಾಗಿರುತ್ತಾರೆ. ಅಲ್ಲಿಗೆ ತೆರಳುವಾಗ ಹಾಗೆ ವಿಶ್ವನಾಥ್ ಗಣ್ಯ ವ್ಯಕ್ತಿಗಳ ಬಿಟ್ಟು ಪಕ್ಕದಲ್ಲಿ ನೋಡುತ್ತಾನೆ ಅಲ್ಲಿ ಶೆಟ್ಟಿ ಚಂದ್ರ ಮತ್ತು ಅವ್ನ ಗೆಳೆಯರನ್ನು ಕಂಡು ತನ್ನ ಗೆಳೆಯರ ಬಳಿ ಹೋಗುತ್ತಾರೆ. ತನ್ನ ಗೆಳೆಯರನ್ನು ವಿಚಾರಿಸಿಕೊಳ್ಳುತ್ತಾರೆ. ವಾವ್ ಎಂಥ ಅದ್ಬುತ ಸ್ವಭಾವ.

Image result for gr vishwanath

ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ ಬಳಿಕವೂ ಕ್ರಿಕೆಟ್ ನಲ್ಲಿ ಸಕ್ರೀಯವಾಗಿಯೇ ತೊಡಗಿಸಿಕೊಂಡಿದ್ದ ಜಿ.ಆರ್.ವಿ, ಇತ್ತೀಚೆಗೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ನಲ್ಲೂ ಕರ್ನಾಟಕ ಬೂಲ್ಡೋರಜ್ಸ್ ತಂಡದ ಕೋಚ್ ಆಗಿ ಕೆಲಸ ನಿರ್ವಹಿಸಿದ್ದರು.

ಇವರು ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ಮಧ್ಯಮ ಕ್ರಮಾಂಕದ ಕಲಾತ್ಮಕ ಬಲಗೈ ಬ್ಯಾಟ್ಸಮನ್ನರಾಗಿದ್ದರು. ಇವರು ಭಾರತೀಯ ಕ್ರಿಕೆಟ್ ಮಂಡಳಿಯ ಭಾರತದ ಕ್ರಿಕೆಟ್ ತಂಡವನ್ನು ಆಯ್ಕೇ ಮಾಡುವ ತಂಡದ ಮುಖ್ಯಸ್ಥರಾಗಿದ್ದರು. ಇವರು ೧೯೮೩ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದರು.

Also Read: ಆಸ್ಟ್ರೇಲಿಯಾ ನ್ಯೂಜಿಲೆಂಡ್‌ ಗಳಿಗೇನು ಕಡಿಮೆ ಇಲ್ಲದಂತೆ ಇದೆ ನಮ್ಮ ನಾಡಿನ ಈ ಜಾಗಗಳು..