ಗ್ರಾಮೀಣ ಕ್ರೀಡೆ ಹೋರಿ ಹಬ್ಬ

0
1512

ಶಿವಮೊಗ್ಗ, ಹಾವೇರಿ,ಜಿಲ್ಲೆಗಳಲ್ಲಿ ನಡೆಯುವ ಹಟ್ಟಿಹಬ್ಬ ರೋಮಾಂಚನಕಾರಿಯಾದ ಪ್ರತಿಷ್ಠೆಯ ಹಬ್ಬ.ದೀಪಾವಳಿ ಹಬ್ಬದಿಂದ ರೈತರು ಬಿಡುವಿನ ಈ ಅವಧಿಯಲ್ಲಿ ಈ ಹಬ್ಬವನ್ನು ಆಯೋಜಿಸಲಾಗುತ್ತದೆ.ರೈತರು ತಾವು ಮೇಯಿಸಿದ ಅಥವಾ ಹಬ್ಬಕ್ಕಾಗಿಯೇ ಸಿದ್ಧಪಡಿಸಿದ ಹೋರಿಗಳಿಗೆ ಕೊಬ್ಬರಿ ಕಟ್ಟಿ ನಮ್ಮ ಹೋರಿಯನ್ನು ಹಿಡಿಯಿರಿ ಎಂದು ಬಿಡುತ್ತಾರೆ.ಊರಿನ ಯುವಕರು ತಮ್ಮ ಪ್ರಾಣದ ಹಂಗುತೊರೆದು ಹೋರಿಗಳನ್ನು ಹಿಡಿದು ನಿಲ್ಲಿಸಲು ಪೈಪೋಟಿಗೆ ಬೀಳುತ್ತಾರೆ.ಹೆಚ್ಚು ಹೋರಿ ಹಿಡಿದ ಪೈಲ್ವಾನನಿಗೆ ಹಾಗು ಉತ್ತಮವಾಗಿ ಬೆದರಿದ ಹೋರಿಗಳಿಗೆ ಬಂಗಾರದ ಉಂಗುರ,ಬಳೆ,ಬೈಕ್, ಸೈಕಲ್,ಟೈಯರ್ ಗಾಡಿ ಫ್ರಿಜ್ ಗಳನ್ನು ಕೊಡುತ್ತಾರೆ.

ಈ ಹಬ್ಬದ ಆರಂಭದ ಕಾಲ ಯಾರಿಗೂ ತಿಳಿಯದು.ಇತಿಹಾಸದಿಂದಲೂ ನಡೆದುಕೊಂಡು ಬಂದಿದೆ.ಇಡೀ ವಿಶ್ವದಲ್ಲೇ ಸಾವನ್ನು ,ಸಂತಸದಿಂದ ಕಾಣುವ,ರಕ್ತಸಿಕ್ತ ದೇಹವನ್ನೂ ಲೆಕ್ಕಿಸದೆ ಮತ್ತೆ ಪೌರುಷವನ್ನು ಮೆರೆಯುವ, ಹಬ್ಬಕ್ಕೆ ಬಂದ ಬೇರೆ ಊರಿನ ಎಲ್ಲ ಜನರಿಗೂ ಊಟ ಹಾಕುವ, ಒಂದು ಹೋರಿಯನ್ನು ತನ್ನ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ,ತಮ್ಮ ಪ್ರತಿಷ್ಟೆಯನ್ನೇ ಪಣಕ್ಕೆ ಇಡುವ ಇಂಥ ಹಬ್ಬವಾಗಿದೆ.ಇಲ್ಲಿ ವಿಶೇಷವೆಂದರೆ ಹಿಂದೂ ಮುಸ್ಲಿಂ ಕ್ರೈಸ್ತ ಬಾಂದವ್ಯ ಇದು ಹೋರಿ ಹಬ್ಬದ ವೈಶಿಷ್ಟ್ಯ ಹಾಗೂ ವಿಶೇಷ.ಇದು ರೈತ ಬಾಂಧವರ ಅದರಲ್ಲೂ ಹೆಚ್ಚಾಗಿ ಹೋರಿಗಳನ್ನು ಸಾಕುವವರು ಹಿಂದುಗಳು. ಇದು ಹಿಂದುಗಳ ಹಬ್ಬವಾಗಿದೆ ಇಲ್ಲಿ ಹಿಂದೂಗಳ ಹೋರಿಗಳು ಮಾತ್ರ ಬಾಗಿಯಾಗದೇ ಮುಸ್ಲಿಂರ ಹೋರಿಗಳು ಬಾಗಿಯಾಗುವುದು ವಿಶೇಷದ ವಿಷಯ..

ಲಕ್ಷಾಂತರ ಸಂಖ್ಯೆಯಲ್ಲಿ ಸೇರುವುದನ್ನು ಕಂಡು ಈ ಹಬ್ಬಗಳಿಗೆ ರಾಜಕೀಯ ಬೆರೆತು,ಇಂದು ಈ ಜನಪದ ಹಬ್ಬಗಳನ್ನು ಅಯೋಜಿಸುವುದೂ ಕಷ್ಟವಾಗುತ್ತಿದೆ.ಲಕ್ಷಾಂತರ ರೂಪಾಯಿಗಳ ಬಹುಮಾನವನ್ನು ಹೊಂದಿಸಿ ಕಷ್ಟಪಟ್ಟು ಮಾಡುವ ಹಬ್ಬದಲ್ಲಿ ನಡೆಯುವ ಅಚಾತುರ್ಯಗಳನ್ನೇ ವೈಭವೀಕರಿಸಿ ರಾಜಕೀಯದ ಉದ್ಧೇಶದಿಂದ ಆಯೋಜಕರನ್ನು ಕೋರ್ಟಿಗೆ ಎಳೆಯಲಾಗುತ್ತಿದೆ.ಇಂದು ಊರಿನ ಹಿರಿಯರು ಹಟ್ಟಿ ಹಬ್ಬವನ್ನು ಆಯೂಜಿಸಲು ಜಿಲ್ಲಾಧಿಕಾರಿಯಿಂದ ಅನುಮತಿ ತರುವುದು ಕಡ್ಡಾಯವಾಗಿದೆ.ಹಿಂದೆ ಎಂದೂ ಹಾಕದ ಕೇಸ್ಗಳನ್ನು ಇತ್ತೀಚೆಗೆ ರಾಜಕೀಯ ದುರುದ್ದೇಧಿಂದ ಹಶಕಲಾಗುತ್ತಿದೆ.ಹಬ್ಬ ನೋಡಲು ಹೋಗಿ ಅಥವಾ ಹಿಡಿಯಲಿ ಹೋಗಿ ಮರಣಹೊಂದಿದರೆ ಅಥವಾ ಗಾಯಗೊಂಡೆ ಅವರೇ ಜವಾಬ್ದಾರರಾಗಿದ್ದರು.

ಇಂದು ಆಯೋಜಕರನ್ನೇ ಹೊಣೆಮಾಡಲಾಗುತ್ತಿದೆ.ಇದರಿಂದ ಈ ಹಬ್ಬ ಆಯೋಜಿಸಲು ಕಷ್ಟವಾಗುತ್ತಿರುವುದರಿಂದ ಎಲ್ಲ ಊರುಗಳಲ್ಲಿ ಹಬ್ಬ ಆಯೂಜಿಸುತ್ತಿಲ್ಲ.ಇದರಿಂದ ಆಯೋಜಿಸುವ ಕೆಲವೇ ಹಳ್ಳಿಗಳಲ್ಲಿ ನೋಡಲು ಜನರು ಲಕ್ಷಾಂತರ ಸಂಕೆಯಲ್ಲಿ ಸೇರುತ್ತಾರೆ.ಇದರಿಂದ ಅವಗಡಗಳೂ ಹೆಚ್ಚಾಗುತ್ತಿವೆ.ಇಂದು ಪ್ರಾಣಿ ಹಿಂಸೆಯ ಹೆಸರಿನಲ್ಲಿ, ಪ್ರಾಣಕ್ಕೆ ಅಪಾಯ ಎಂದು ನಿಷೇದಿಸುವ ಒಂದು ಧರ್ಮದ ತುಟಿಯನ್ನು ಕಾನೂನಿನ ಅಡಿಯಲ್ಲಿ ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ.

ಹಾಗಾದರೆ
೧.ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೋದಾಗಜನ ಮರಣ ಹೊಂದಿಲ್ಲವೇ?
೨.ಸಿಗರೇಟ್,ಹೆಂಡದಿಂದ ಜನ ಸಾಯುತ್ತಿಲ್ಲವೇ?
೩.ಧಾರ್ಮಿಕ ಮೆರವಣಿಗೆಗಳಲ್ಲಿ ಸಾವು ಸಂಭವಿಸಿಲ್ಲವೇ?
೪.ಕುದುರೆ ಜೂಜಿನಲ್ಲಿ ಜನ ಸತ್ತಿಲ್ಲವೇ? ಬಡವರಾಗಿಲ್ಲವೇ.

ಹಟ್ಟಿಹಬ್ಬಕ್ಕಿಂತ ಹೆಚ್ಚಾಗಿ ಮರಣ ಹೊಂದುತ್ತಿರುವ ೪ ಅಂಶಗಳ್ಲಿ ಸರ್ಕಾರಕ್ಕೆ ಆದಾಯ ವಿದೆ.ಹಟ್ಟಿ ಹಬ್ಬದಲ್ಲಿಲ್ಲ.ಇದು ಪಕ್ಷದ ಅಯೋಜಿತ ಕಾರ್ಯಕ್ರಮವಲ್ಲ.ರೈತರ ಒಗ್ಗಟ್ಟಿನ ಕಾರ್ಯಕ್ರಮ.ಅವರು ಒಗ್ಗಟ್ಟಾಗುವ ಏಕೈಕ ಹಬ್ಬ ನಿಷೆಧವಾದರೆ ಸಮಸ್ತ ರೈತ ಸಮುದಾಯವನ್ನು ಬಹುಸಂಖ್ಯಾತ ಹಿಂದುಗಳನ್ನು ನಿಯಂತ್ರಿಸಬಹುದು.ಎಂಬ ದೂರಾಲೋಚನೆಯ ಎಳೆಯೊಂದನ್ನು ಊಹಿಸಬಹುದಾಗಿದೆ.

ಈ ಹಬ್ಬವನ್ನು ಆಯೋಜಿಸುವ ಗ್ರಾಮದ ಮುಖಂಡರುಗಳಿಗೆ ಸರ್ಕಾರವೇ ಅನುದಾನವನ್ನು ನೀಡಿ.ಆಬಾಗದ ರೈತರೆಲ್ಲರಿಂದ ಜೀವ ವಿಮೆ ಮಾಡಿಸಿ,ಹಿರಿಯ ಬೆದರಿಸುವ ಸ್ಥಳದಲ್ಲಿ ಬೃಹತ್ ಬ್ಯಾರಿಕೇಡ್ ನಿರ್ಮಿಸಿ,ಪ್ರಾಣಾಪಾಯ ಆಗದಂತೆ ಮುಂಜಾಗ್ರತೆ ವಹಿಸಿ,ಇದನ್ನು ಕರ್ನಾಟದ ಹೆಮ್ಮೆಯ ಕ್ರೀಡೆಯನ್ನಾಗಿ ಏಕೆ ಮಾಡಬಾರದು.?
ಯೋಚಿಸಿ.
ಹೋರಿಬಂತೋರಿ.ಪೀಪೀ…….
ಹಾಕೋ ಕೈಯ್ಯಾ……
ಮುಟ್ಟಿದ್ರೆ ಬಲಿ …..
ರೈತರ ಸಂತೋಷ ಶಾಶ್ವತವಾಗಿರಲಿ
ಮಾನ್ಯ ಶಿವಮೊಗ್ಗ DC sir and SP sir… ರೈತರು ಎಲ್ಲ ಧರ್ಮಿಯರು ಸೇರಿ ಮಾಡುವ ಒಂದೇ ಒಂದು ಹಬ್ಬ ಅಂದ್ರೆ ಅದುವೇ “ಜಾನಪದ ಕ್ರೀಡೆ ಹೋರಿ ಹಬ್ಬ “..
ನೀವು ಹೋರಿ ಹಬ್ಬ ನಿಷೇದ ಮಾಡೋದಾರೆ ಈ ಕೆಳಗಿನವುಗನ್ನು ನಿಷೇದ ಮಾಡಿ..
ಗೋ ಹತ್ಯೆ
ಮದ್ಯಪಾನ
ದೂಮಪಾನ
ಕುರಿ
ಕೋಳಿ
ಕುದುರೆ ಓಟ ಇತ್ಯಾದಿಗಳನ್ನು ನಿಷೇಧ ಮಾಡಿ.