Gratuity ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಅನೇಕ ಜನರಿಗೆ ನಷ್ಟವಾಗುತ್ತಿದೆ, Gratuity ಬಗ್ಗೆ ಸಂಪೂರ್ಣ ವಿವರ, ಹಾಗು ಅದನ್ನು ಹೇಗೆ ಪಡೆದುಕೊಳ್ಳಬೇಕು ಅಂತ ಓದಿ..

0
1487

Kannada News | kannada Useful Tips

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017 ಕ್ಕೆ ಅಂಗೀಕಾರ ಸಿಗುವ ಸಾಧ್ಯತೆ ಇದ್ದು ಇದರಿಂದಾಗಿ ಉದ್ಯೋಗಿಗಳಿಗೆ 20 ಲಕ್ಷ ರೂ.ವರೆಗೂ ತೆರಿಗೆ ಮುಕ್ತ ಗ್ರಾಚ್ಯುಟಿ ಪಡೆಯಲು ಅರ್ಹರಾಗಲಿದ್ದಾರೆ. ಇನ್ನು ಈ ಗ್ರಾಚ್ಯುಟಿ ಎಂದ್ರೇನು ಅಂತಾನಾ ಇಲ್ಲಿದೆ ನೋಡಿ ಅದರ ಬಗ್ಗೆ ವಿವರ.

ಗ್ರಾಚ್ಯುಟಿ ಬಗ್ಗೆ ವಿವರ:
ಗ್ರಾಚ್ಯುಟಿ ಎಂದರೆ, ಉದ್ಯೋಗದಾತ ಕಂಪನಿಯು ತನ್ನಲ್ಲಿನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನ. ಅಂದರೆ, ಉದ್ಯೋಗಿಯು ಕಂಪನಿಯಿಂದ ನಿವೃತ್ತನಾದಾಗ ಅಥವಾ ಸೇವೆಗೆ ರಾಜಿನಾಮೆ ಸಲ್ಲಿಸಿದಾಗ ನೀಡಲಾಗುವ ಮೊತ್ತವಿದು.

ಗ್ರಾಚ್ಯುಟಿ ಕಾಯ್ದೆ:
ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972 ರ ಅಡಿಯಲ್ಲಿ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ ಉದ್ಯೋಗಿಯ ಅನುಭವ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ.

ಗ್ರಾಚ್ಯುಟಿ ಲೆಕ್ಕಾಚಾರ ಮಾಡುವುದು ಹೇಗೆ :
ಗ್ರಾಚುಟಿ = ಕೊನೆ ಬಾರಿ ಪಡೆದ ಸಂಬಳ + 15/26 x ಔದ್ಯೋಗಿಕ ಅನುಭವ ವರ್ಷಗಳು (ಒಂದು ವೇಳೆ ಉದ್ಯೋಗಿಯ ಅನುಭವ 4.7 ವರ್ಷ ಆಗಿದ್ದರೆ ಅದನ್ನು ಪೂರ್ಣ 5 ವರ್ಷವಗಿಸುವುದು).

ಗ್ರಾಚ್ಯುಟಿ ಪಡೆಯಲು ಏನು ಮಾಡಬೇಕು:
1. ಒಂದೇ ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳನ್ನಾದರೂ ಸತತವಾಗಿ ಸೇವೆ ಸಲ್ಲಿಸಿರಬೇಕು.
2. ಕಂಪನಿಯಲ್ಲಿ ಸೇವೆಯಲ್ಲಿದ್ದಾಗಲೇ ಪಡೆಯಲು ಸಾದ್ಯವಿಲ್ಲ
3. 10 ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಿಗೆ ಮಾತ್ರ ಇದು ಕಡ್ಡಾಯವಾಗಿದೆ
4. ಉದ್ಯೋಗಿಯು ಮರಣ ಹೊಂದಿದ್ದಲ್ಲಿ ಅಥವಾ ಅಂಗವಿಕಲನಾದರೆ ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ ಮತ್ತು ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗಿಯ ನಾಮಿನಿಗೆ ನೀಡಲಾಗುವುದು
5. ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷಗಳ ನಿಯಮ ಸಡಿಲಿಕೆಗೆ ಅವಕಾಶವಿದೆ

ಗ್ರಾಚ್ಯುಟಿಗೆ ಯಾವಾಗ ಅನರ್ಹರಾಗುತ್ತೇವೆ:
1. ಸಂಸ್ಥೆಗೆ ಹಾನಿ ಮಾಡಿದ್ದರೆ ಗ್ರಾಚ್ಯುಟಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ
2. ಕನಿಷ್ಠ 5 ವರ್ಷಗಳ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡದಿದ್ದರೆ ಗ್ರಾಚ್ಯುಟಿಯನ್ನು ಪಡೆಯಲು ಸಾದ್ಯವಿಲ್ಲ
3. ಈಗೆ ಗ್ರಾಚ್ಯುಟಿಯು ತನ್ನದೇ ನಿಯಮ ಮತ್ತು ಷರತ್ತುಗಳನ್ನೂ ಹೊಂದಿದ್ದು ಇದು ಉದ್ಯೋಗಿ ಮತ್ತು ಕಂಪನಿ ಈ ಎರಡರ ಪ್ರಗತಿಯ ಪರವಾಗಿದೆ.
4. ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷಗಳ ನಿಯಮ ಸಡಿಲಿಕೆಗೆ ಅವಕಾಶವಿದೆ.

ಗ್ರಾಚ್ಯುಟಿಗೆ ತೆರಿಗೆ:
1. ಗ್ರಾಚುಟಿಗೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ.
2. ಸಾಮಾನ್ಯವಾಗಿ ಇದು ಟ್ಯಾಕ್ಸ್ ಫ್ರೀ ಬೆನಿಫಿಟ್.
3. ಗ್ರಾಚುಟಿಗಾಗಿ ನೀಡುವ ಮೊತ್ತವನ್ನು ಉದ್ಯೋಗಿಯು ಹೆಚ್ಚಿಸಿದಲ್ಲಿ ಆ ಹೆಚ್ಚಳವಾಗುವ ಹಣಕ್ಕೆ ಮಾತ್ರ ತೆರಿಗೆ ಇರುತ್ತದೆ.
4. ಉದ್ಯೋಗಿಯಿಂದ ಕಂಪನಿಗೆ ಯಾವುದಾದರೂ ಆರ್ಥಿಕ ನಷ್ಟವಾದರೆ ಆ ನಷ್ಟದ ಹಣವನ್ನು ಸಂಬಂಧಪಟ್ಟ ಉದ್ಯೋಗಿಯ ಗ್ರಾಚುಟಿ ಮೊತ್ತದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಕಂಪನಿಗೆ ಅಧಿಕಾರವಿರುತ್ತದೆ.

Also Read: ಮನಿ ಪ್ಲಾಂಟ್ ಮನೆಯಲ್ಲಿಟ್ಟರೆ ಏನಾಗುತ್ತದೆ.. ಇಟ್ಟರೂ ಕೂಡ ಅದನ್ನು ಯಾವ ದಿಕ್ಕಿನಲ್ಲಿಡಬೇಕು.. ಇದರಿಂದ ಆಗುವ ಒಳಿತು ಕೆಡಕುಗಳು ಇಲ್ಲಿವೆ ನೋಡಿ