ದ್ವಿದಳ ಧಾನ್ಯಗಳಲ್ಲಿ ಒಂದಾದ ಹೆಸರುಕಾಳಿನ ಪಲ್ಯೆ ಬರಿ ರುಚಿ ಅಷ್ಟೇ ಅಲ್ಲ, ಇದು ಪ್ರೋಟಿನ್‍ಗಳ ಸಮೃದ್ಧ ಕಣಜವಾಗಿರುತ್ತದೆ…!!

0
890

ಬೇಕಾದ ಪದಾರ್ಥಗಳು:

 • ಹೆಸರು ಕಾಳು 1 ಕಪ್,
 • ಟೊಮೇಟೊ 1 (ಕತ್ತರಿಸಿದಂತಹುದು),
 • ಈರುಳ್ಳಿ 2 (ಕತ್ತರಿಸಿದಂತಹುದು),
 • ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಟೀ. ಚಮಚ,
 • ಹಸಿಮೆಣಸಿನ ಕಾಯಿ 3-4 (ಕತ್ತರಿಸಿದಂತಹುದು),
 • ಅರಿಶಿಣ ಪುಡಿ 1 ಟೀ.ಚಮಚ ,
 • ಎಣ್ಣೆ 3-4 ಟೀ. ಚಮಚ
 • ಸಾಂಬಾರ ಪೌಡರ್ 1 ಟೀ.ಚಮಚ
 • ಹುಣಸೆ ಹಣ್ಣಿನ ರಸ 2 ಟೀ. ಚಮಚ,
 • ಸಾಸಿವೆ 1 ಟೀ.ಚಮಚ
 • ಜೀರಿಗೆ 1 ಟೀ.ಚಮಚ
 • ಸ್ವಲ್ಪ ಬೆಲ್ಲ,
 • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

 1. ಹೆಸರು ಕಾಳುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ ಮತ್ತು 2-3 ವಿಷಲ್ ಬರುವವರೆಗು ಕುಕ್ಕರಿನಲ್ಲಿ ಬೇಯಿಸಿ.
 2. ನಂತರ ತವಾ ತೆಗೆದುಕೊಳ್ಳಿ, ಮತ್ತು ಅದರಲ್ಲಿ ಎಣ್ಣೆಯನ್ನು ಹಾಕಿ. ಇದಕ್ಕೆ ಸಾಸಿವೆ ಮತ್ತು ಜೀರಿಗೆ 1 ಟೀ.ಚಮಚ ಹಾಕಿ ನಂತರ
  ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಟೀ. ಚಮಚ, ಹಾಕಿ, ಉರಿಯಿರಿ.
 3. ಈಗ ಇದಕ್ಕೆ ಈರುಳ್ಳಿ, ಟೊಮೇಟೊ, ಮತ್ತು ಹಸಿ ಮೆಣಸಿನ ಕಾಯಿಗಳನ್ನು ಹಾಕಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗು ಇದನ್ನು ಚೆನ್ನಾಗಿ ಕಲೆಸಿಕೊಡಿ.
 4. ನಂತರ, ಇದಕ್ಕೆ ಬೇಯಿಸಿದ ಹೆಸರು ಕಾಳುಗಳನ್ನು ಹಾಕಿ. ಅದಕ್ಕೆ ಅರಿಶಿಣ ಪುಡಿ ಮತ್ತು ಸಾಂಬಾರ ಪೌಡರ್ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಹೆಸರು ಕಾಳು ಚೆನ್ನಾಗಿ ಮಿಕ್ಸ್ ಆಗಲು ಇದಕ್ಕೆ ಸ್ವಲ್ಪ ನೀವು ನೀರನ್ನು ಹಾಕಬೇಕಾಗುತ್ತದೆ. 5 ನಿಮಿಷಗಳ ಕಾಲ ಬೇಯಿಸಿ.

 1. ನಿಮಿಷಗಳ ಕಾಲ ಬೇಯಿಸಿದ ನಂತರ ಸ್ವಲ್ಪ ಬೆಲ್ಲ ಮತ್ತು ಹುಣಸೆ ಹಣ್ಣಿನ ರಸವನ್ನು ಹಾಕಿ 5 ನಿಮಿಷಗಳ ಕಾಲ ಬೇಯಿಸಿ.
 2. ಈಗ ನಿಮ್ಮ ಮುಂದೆ ಹೆಸರು ಕಾಳು ಪಲ್ಯೆ ತಯಾರಾಗಿದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಅಲಂಕಾರಕ್ಕೆಂದು ಹಾಕಿ.

ಸೂಚನೆ:
ಈರುಳ್ಳಿಗಳನ್ನು ಬೇಗ ಹೊಂಬಣ್ಣಕ್ಕೆ ತಿರುಗಿಸಲು ಅದಕ್ಕೆ ಉಪ್ಪನ್ನು ಹಾಕಿ. ಇದರಿಂದ ಈರುಳ್ಳಿ ಚೆನ್ನಾಗಿ ಬೇಯುತ್ತದೆ.

ಒಂದು ವೇಳೆ ನೀವು ಮಸಾಲೆ ಪ್ರಿಯರಾಗಿದ್ದಲ್ಲಿ, ನೀವು ಈ ಹೆಸರು ಕಾಳು ಪಲ್ಯೆಗೆ ಚಕ್ಕೆ ಮತ್ತು ಶುಂಠಿಗಳನ್ನು ಸಹ ಹಾಕಬಹುದು.

ಹೆಸರುಕಾಳಿನಲ್ಲಿ ಅಡಗಿರುವ ಪೋಷಕಾಂಶಗಳ ಪ್ರಮಾಣ

 1. ಹೆಸರು ಕಾಳುಗಳು ರಕ್ತದೊತ್ತಡ ಕಡಿಮೆ ಮಾಡಲು ಒಳ್ಳೆಯದು.
 2. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡವಿದ್ದಲ್ಲಿ, ಹೆಸರು ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ.
 3. ಹೆಸರು ಕಾಳುಗಳು ನಿಮ್ಮ ಡಯಟ್‍ನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.