ನೊಬೆಲ್‌ ಶಾಂತಿ ಪುರಸ್ಕಾರಕ್ಕೆ 16 ವರ್ಷದ ಬಾಲಕಿ ‘ಗ್ರೇಟಾ ಥನ್ಬರ್ಗ್‌’ ಹೆಸರು ಶಿಫಾರಸು..

0
259

ಸ್ವೀಡನ್‌ನ 16 ವರ್ಷದ ಗ್ರೇಟಾ ಥನ್ಬರ್ಗ್‌ ಅವರನ್ನು ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಅದರಂತೆ ಥುನ್ಬರ್ಗ್​ ಈ ಪ್ರಶಸ್ತಿಯನ್ನು ಗೆದ್ದರೆ ನೊಬೆಲ್​ ಶಾಂತಿ ಪುರಸ್ಕಾರ ಗೆದ್ದ ಜಗತ್ತಿನ ಅತಿ ಸಣ್ಣ ವಯಸ್ಸಿನವಳು ಆಗಲಿದ್ದಾಳೆ. ಇಂದಿನವರೆಗೆ ಈ ಪ್ರಶಸ್ತಿ ಪಾಕಿಸ್ತಾನದ ಮಲಾಲಾ ಯೂಸೂಫಾಜಿ ಹೆಸರಿನಲ್ಲಿ ಇದೆ. ಇವರು 17 ವರ್ಷದವಳಾಗಿದ್ದಾಗ ಪ್ರಶಸ್ತಿ ಗೆದ್ದ ಕಿರಿಯಳಾಗಿದ್ದಳು.

Also read: ಒಂದು ದಿನದ ಊಟಕ್ಕೆ ಪರದಾಡುತ್ತಿದ್ದ ರೈತನ ಮಗ ಈಗ 3,415 ಕೋಟಿ ರೂ ಕಂಪನಿಯ ಒಡೆಯನಾದ ಕಥೆ ಕೇಳಿ, ನಿಮಗೂ ಜೀವನದಲ್ಲಿ ಸಾಧನೆ ಮಾಡೋಕ್ಕೆ ಸ್ಪೂರ್ತಿ ಸಿಗುತ್ತೆ!!

16 ವರ್ಷಕ್ಕೆ ನೊಬೆಲ್‌ ?

ಕಳೆದ ವರ್ಷ ಆಗಸ್ಟ್‌ನಲ್ಲಿ ‘ಹವಾಮಾನಕ್ಕಾಗಿ ಶಾಲೆ ಬಂದ್‌’ ಎಂಬ ಅಭಿಯಾನವನ್ನು ಆರಂಭಿಸಿದ ಥನ್ಬರ್ಗ್‌ಗೆ ನೊಬೆಲ್‌ ಶಾಂತಿ ಪುರಸ್ಕಾರ ನೀಡುವಂತೆ ನಾರ್ವೆಯ ಸಂಸದರು ಶಿಫಾರಸು ಮಾಡಿದ್ದಾರೆ. ಇವಳು ಹವಾಮಾನ ಬದಲಾವಣೆಯ ಪರಿಹಾರೋಪಾಯದ ನಿಟ್ಟಿನಲ್ಲಿ ಶೀಘ್ರ ಕ್ರಮಕ್ಕೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ ಸ್ವೀಡನ್‌ನ 16 ವರ್ಷದ ಗ್ರೇಟಾ ಥನ್ಬರ್ಗ್‌ ಅವರನ್ನು ಈ ವರ್ಷದ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಈ ಕೇಳಿ ಬರುತ್ತಿರುವ ಸುದ್ದಿಗಳಂತೆ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರನ್ನು ಈ ಬಾರಿಗೆ ನೊಬೆಲ್ ಶಾಂತಿ​ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ಗಾಳಿಸುದ್ದಿಗಳು ಎಲ್ಲೆಡೆ ಹಬ್ಬಿತ್ತು. ಆದರೆ ಈ ಇಮ್ರಾನ್ ಖಾನ್ ಅವರಿಗೆ ಮತ್ತೊಬ್ಬ ಸ್ಪರ್ಧಿಯನ್ನು ಊಹಿಸುವಲ್ಲಿ ಜಗತ್ತು ಯೋಚನೆಯಲ್ಲಿತ್ತು. ಅದರಂತೆ 16 ವರ್ಷದ ಸ್ವಿಡೀಶ್​ನ ಪರಿಸರವಾದಿ ಗ್ರೇಟಾ ಥುನ್ಬರ್ಗ್​ ಈ ಬಾರಿಯ ನೊಬೆಲ್ ಶಾಂತಿ​ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದು ಆಶ್ಚರ್ಯ ಮೂಡಿಸಿದೆ. ಏಕೆಂದರೆ ಹವಾಮಾನ ಬದಲಾವಣೆ ಕುರಿತು ಈ ಬಾಲಕಿ ಮಾಡಿರುವ ಕೆಲಸ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಗುರುತಿಸಿ, ಇವರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

Also read: ರೈಲಿನ ಚಾಲಕನ ಕಣ್ಣಿಗೆ ಕಾರದಪುಡಿ ಹಾಕಿದ ದುಷ್ಕರ್ಮಿಗಳು; ಕಣ್ಣಿನ ಉರಿಯಲ್ಲೇ 18 ರೈಲು ಓಡಿಸಿ 2000 ಪ್ರಯಾಣಿಕರನ್ನು ಕಾಪಾಡಿದ ಚಾಲಕ..

ಥನ್ಬರ್ಗ್‌ ಪ್ರತಿಭಟನೆ ವೈರಲ್‌;

ಸೈಕಲ್‌ ಮೂಲಕ ಸ್ವೀಡನ್‌ ಸಂಸತ್‌ಗೆ ತೆರಳುವ ಥನ್ಬರ್ಗ್‌ ವಾರದ ಪ್ರತಿಭಟನೆಯು ವೈರಲ್‌ ಆಗಿದ್ದು, ಈ ಅಭಿಯಾನಕ್ಕೆ 105ಕ್ಕೂ ಹೆಚ್ಚು ದೇಶಗಳು ಕೈಜೋಡಿಸಿವೆ. ಇದೇ ಶುಕ್ರವಾರ 105 ರಾಷ್ಟ್ರಗಳ 1659 ನಗರಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಲಕ್ಷಾಂತರ ಯುವಕರು ಭಾಗವಹಿಸುವ ನಿರೀಕ್ಷಿಯಿದೆ. ಇವರು ಕಳೆದ ಡಿಸೆಂಬರ್​ನಲ್ಲಿ ಪೋಲೆಂಡ್​ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಕುರಿತು ಮಾತನಾಡಿದ್ದಳು. ಕಳೆದ ವರ್ಷದ ಜನವರಿಯಲ್ಲಿ ದಾವೋಸ್​ನಲ್ಲಿ ವರ್ಲ್ಡ್​ ಎಕನಾಮಿಕ್​ ಫೋರಂನಲ್ಲಿ ಇದೇ ವಿಚಾರವಾಗಿ ವಿಷಯ ಮಂಡನೆ ಮಾಡಿದ್ದರು. 2019ರ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಒಟ್ಟು 223 ವ್ಯಕ್ತಿಗಳು ಮತ್ತು 78 ಸಂಸ್ಥೆಗಳನ್ನು ಶಿಫಾರಸು ಮಾಡಲಾಗಿದೆ. ಡಿಸೆಂಬರ್‌ನಲ್ಲಿ ನೊಬೆಲ್‌ ಶಾಂತಿ ಪುರಸ್ಕಾರ ಘೋಷಿಸಲಾಗುತ್ತದೆ.

ಏನಿದು ನೊಬೆಲ್ ಶಾಂತಿ​ ಪುರಸ್ಕಾರ?

Also read: ಹಾಳು ಬಿದ್ದ ಕೆರೆಗೆ ಮರು ಜನ್ಮ ನೀಡಿದ ಬೆಂಗಳೂರಿನ ಟೆಕ್ಕಿ; ಬರಿ 45 ದಿನಗಳಲ್ಲಿ ಮಾಡಿದ ಕೆರೆಯ ಜೀರ್ಣೋದ್ದಾರ ನೋಡಿ ಇನ್ನೂ ಅನೇಕರು ಉತ್ತೇಜನಗೊಳ್ಳಲಿ

ನೊಬೆಲ್ ಪ್ರಶಸ್ತಿಯನ್ನು ಜಗತ್ತಿನ ಅತ್ಯುಚ್ಚ ಸನ್ಮಾನ ಎಂದು ಪರಿಗಣಿಸಲಾಗಿದೆ. ನವೆಂಬರ್ 2005 ರವರೆಗೆ ಒಟ್ಟು 776 ನೊಬೆಲ್ ಪದಕಗಳನ್ನು ನೀಡಲಾಗಿದೆ. ಅದರಲ್ಲಿ 758-ನ್ನು ಸಾಧಕರಿಗೆ ನೀಡಲಾಗಿದ್ದು, ಉಳಿದ 18-ನ್ನು ಸಂಸ್ಥೆಗಳಿಗೆ ನೀಡಲಾಗಿದೆ. ನೊಬೆಲ್‌ರ ಮರಣೋತ್ತರ ಪ್ರಕಾರ ವ್ಯಕ್ತಿಗಳ ಮತ್ತು ಸಂಘಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ. ಇದರ ಹಿಂದೆ ಆಲ್ಫ್ರೆಡ್ ನೋಬೆಲ್ ‘ಡೈನಮೈಟ್’ ವಿಸ್ಪೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಪೋಟಕವು ಯುದ್ದಗಳಲ್ಲಿ ಹೆಚ್ಚಾಗಿ ಬಳಕೆಯಾದರಿಂದ ಈತನು ಅಪಾರ ಸಂಪತ್ತನ್ನು ಗಳಿಸಿದ. ಆದರೆ ತನ್ನಿಂದ ಕಾರಣವಾದ ಸಾವು – ನೋವುಗಳಿಂದ ವಿಚಲಿತಗೊಂಡು, 1895 ರಲ್ಲಿ ತನ್ನ ಸಂಪತ್ತಿನ 94% ಭಾಗವನ್ನು ಈ ಪ್ರಶಸ್ತಿಗಳ ಸ್ತಾಪನೆಗೆ ನಮೂದಿಸಿದ.