ಧೂಮಪಾನಿ ವ್ಯಕ್ತಿಯ ಶ್ವಾಸಕೋಶ ನೋಡಿ ವೈದ್ಯೆರೆ ಶಾಕ್; ಈ ಭಯಾನಕ ಕಪ್ಪು ಶ್ವಾಸಕೋಶ ನೋಡಿದರೆ ಜೀವನದಲ್ಲಿ ಸಿಗರೇಟ್ ನೆನಪಿಗೆ ಬರೋದಿಲ್ಲ.!

0
201

ಈಗೀಗ ಸಿಗರೇಟ್ ಎನ್ನುವುದು ಒಂದು ರೀತಿಯಲ್ಲಿ ಪ್ಯಾಶನ್ ಆಗಿದೆ ಎಂದರು ತಪ್ಪಾಗಲಾರದು, ಏಕೆಂದರೆ ಅದೇನ್ ಕಂಡು ಇಷ್ಟೊಂದು ಜನರು ಧೂಮಪಾನ ಚಟಕ್ಕೆ ಶರಣಾಗಿದ್ದಾರೋ ಗೊತ್ತಿಲ್ಲ, ಅರ್ಧದಷ್ಟು ಜನರು ಸಿಗರೇಟ್ ಹಿಡಿಯುತ್ತಿದ್ದಾರೆ. ಇದರಲ್ಲಿ ಬರಿ ಪುರುಷರು ಮಾತ್ರ ದಾಸರಾಗಿಲ್ಲ, ಮಹಿಳೆಯರು ಕೂಡ ಸಿಗರೇಟ್ ಚಟಕ್ಕೆ ಬಿದಿದ್ದು, ಮತ್ತಷ್ಟು ಅಪಾಯ ಹೆಚ್ಚುತ್ತಿದೆ. ಹೀಗೆ ಕೆಲವರು ಇದರಿಂದ ಹೊರ ಬರಲು ಪ್ರಯತ್ನ ಪಟ್ಟರು ಆಗದೆ ಅರ್ಧದಲ್ಲೇ ಸಾವನ್ನು ಕಾಣುತ್ತಿದ್ದಾರೆ. ಈ ಎಲ್ಲ ಯೋಚಯಲ್ಲಿ ಒಂದು ವೇಳೆ ನೀವು ಧೂಮಪಾನ ಬಿಡದಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತೆ ಎನ್ನುವುದಕ್ಕೆ ವ್ಯಕ್ತಿ ಶ್ವಾಸಕೋಶ ನೋಡಿದರೆ ತಿಳಿಯುತ್ತೆ.

Also read: ಧೂಮಪಾನ ಮಾಡುವ ಮುನ್ನ ಈ ಮಾಹಿತಿ ನೋಡಿ; ಸಿಗರೇಟ್ ಸಹವಾಸ ನಿಮ್ಮ ಲೈಂಗಿಕ ಜೀವನಕ್ಕೆ ಕುತ್ತು ತರಬಹುದು..

ಹೌದು ನಾಳೆ ಬಿಡುತ್ತೇನೆ ನಾಡಿದು ಬಿಡುತ್ತೇನೆ ಎನ್ನುತ್ತಾ ಸಿಗರೇಟ್, ಬೀಡಿ ಸೇದುವುದನ್ನು ಮುಂದಕ್ಕೆ ಹಾಕಿದರೆ ಸಾವು ಕೂಡ ಮುಂದಕ್ಕೆ ಬರುತ್ತದೆ. ಹೀಗೆ ಧೂಮಪಾನ ಸೇವಿಸುವ ವ್ಯಕ್ತಿಯೊಬ್ಬನ ಶ್ವಾಸಕೋಶ ಯಾವ ಮಟ್ಟಕ್ಕೆ ಹಾಳಾಗಿ, ಕಪ್ಪಾಗಿರುತ್ತದೆ ಎಂಬುದನ್ನು ಚೀನಾ ವೈದ್ಯರು ತೋರಿಸಿದ್ದಾರೆ ಇದು ಯಾವ ಮಟ್ಟದಲ್ಲಿದೆ ಎನ್ನುವುದನ್ನು ನೋಡಿದ ವೈದ್ಯರೇ ಶಾಕ್ ಆಗಿದ್ದಾರೆ. ಏಕೆಂದರೆ ಸಿನಿಮಾ ವೀಕ್ಷಣೆಗೂ ಮುನ್ನ ನೋಡಿರುವುದು ಸಾಮಾನ್ಯ. ಆದರೆ, ನಿಜ ಜೀವನದಲ್ಲಿ ಹೇಗೆ ಆಗಿದೆ ಎನ್ನುವುದನ್ನು ದೇಹ ದಾನದ ಬಳಿಕ ಆತನ ದೇಹದ ಅಂಗಾಂಗ ಪಡೆಯುವಾಗ ಆತನ ಶ್ವಾಸಕೋಶ ನೋಡಿ ವೈದ್ಯರು ತಿಳಿಸಿದ್ದಾರೆ.

Also read: ಸಿಗರೇಟ್ ಸೇದೋ ಚಟ ಕಲಿಯೋದು ಸುಲಭ ಬಿಡೋದು ಕಷ್ಟ, ಸಿಗರೇಟ್ ಬಿಡುವುದು ಕಷ್ಟ ಆಗುತ್ತಿದ್ದರೆ ಈ ಜ್ಯೂಸ್ ಮಾಡಿಕೊಂಡು ಕುಡಿಯಿರಿ!!

ಇಂತಹ ಶ್ವಾಸಕೋಶ ಹೊಂದಿರುವ ಚೀನಾದ 52 ವರ್ಷದ ವ್ಯಕ್ತಿಯೊಬ್ಬ ಕಳೆದ 30 ವರ್ಷದಿಂದ ಚೈನ್​ ಸ್ಮೋಕಿಂಗ್​ ವ್ಯಸನಕ್ಕೆ ಗುರಿಯಾಗಿದ್ದ. ಈತ ಸಾವನ್ನಪ್ಪಿದ್ದು, ಆತನ ದೇಹವನ್ನು ದಾನ ಮಾಡಿದ್ದಾನೆ. ಮಿದುಳು ನಿಷ್ಕ್ರಿಯಗೊಂಡ ಈ ವ್ಯಕ್ತಿಯನ್ನು ಸಿಟಿ ಸ್ಕ್ಯೂನ್​ಗೆ ಒಳಪಡಿಸದ ಹಿನ್ನೆಲೆ ಆಸ್ಪತ್ರೆಯವರು ದೇಹ ಪಡೆದಿದ್ದಾರೆ. ದೇಹ ದಾನದ ಬಳಿಕ ಆತನ ದೇಹದ ಅಂಗಾಂಗ ಪಡೆಯುವಾಗ ಆತನ ಶ್ವಾಸಕೋಶ ನೋಡಿ ವೈದ್ಯರು ಬೆರಗಾಗಿದ್ದಾರೆ. ಗುಲಾಬಿ ಬಣ್ಣದಲ್ಲಿರಬೇಕಾದ ಶ್ವಾಸಕೋಶ ಕಪ್ಪು ಬಣ್ಣದಲ್ಲಿದ್ದು, ಅನೇಕ ರಂಧ್ರಗಳು ಕೂಡ ಅದರಲ್ಲಿ ಪತ್ತೆಯಾಗಿದೆ.

ಜಿಯಾಂಗ್ಸುವಿನ ವುಕ್ಸಿ ಪೀಪಲ್ಸ್​ ಆಸ್ಪತ್ರೆಯ ವೈದ್ಯರು ತಕ್ಷಣಕ್ಕೆ ಆತನ ಶ್ವಾಸಕೋಶದ ವಿಡಿಯೋವನ್ನು ಶೇರ್​ ಮಾಡಿದ್ದು, ಧೂಮಪಾನ ವ್ಯಸನಿಗಳಿಗೆ ಎಚ್ಚರಿಕೆ ರವಾನೆ ಮಾಡಿದ್ದಾರೆ. ಅಲ್ಲದೇ ಧೂಮಪಾನ ತ್ಯಜಿಸಿ ಎಂದು ಹ್ಯಾಷ್​ಟ್ಯಾಗ್​ ಬಳಸಿ ಎಂದು ಕೂಡ ಮನವಿ ಮಾಡಿದ್ದಾರೆ. ಚೀನಾದಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಿದ್ದು, ಈ ಚಿತ್ರವನ್ನು ನೋಡಿದ ಮೇಲಾದರೂ ನಿಮ್ಮ ಶ್ವಾಸಕೋಶದ ಮೇಲೆ ಕಾಳಜಿ ಇರಲಿ. ದೇಶದ ಅನೇಕ ಜನರ ಶ್ವಾಸಕೋಶ ಇದೇ ರೀತಿ ಇರಬಹುದು ಎಂದಿದ್ದಾರೆ. ಅಲ್ಲದೇ ದೇಹ ದಾನ ಮಾಡಿದ ಈತನ ದೇಹವನ್ನು ತಿರಸ್ಕಾರ ಮಾದಿದ್ದಾರೆ.

Also read: ಸಿಗರೇಟ್-ಗೆ ಒಳ್ಳೆ ಪರ್ಯಾಯ ಎಂದು ಹೇಳುತ್ತಿರುವ `ಈ’ ಸಿಗರೇಟ್-ನಿಂದ ಸಾವು ಇನ್ನೂ ಬೇಗ ಬರುತ್ತಾ??

ಇದೇ ರೀತಿ ನೀವು ಹೆಚ್ಚು ಧೂಮಪಾನ ಮಾಡುತ್ತಿದ್ದರೆ, ನಿಮ್ಮ ಶ್ವಾಸಕೋಶವನ್ನು ನಾವು ಸ್ವೀಕರಿಸುವುದಿಲ್ಲ, ದೇಹದಾನ ಮಾಡುವ ಮುನ್ನ ಈ ವಿಷಯಗಳ ಬಗ್ಗೆ ಕೂಡ ಎಚ್ಚರವಹಿಸಿ. ಈ ಚಿತ್ರಣ ನೋಡಿದ ಬಳಿಕವೂ ಧೂಮಪಾನ ಮಾಡಲು ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಪ್ರತಿಯೊಬ್ಬ ಧೂಮಪಾನಿಯ ಮುಂದಿನ ಪರಿಸ್ಥಿತಿಯನ್ನು ಇಗಲೇ ತೋರಿಸಿದೆ. ಕೆಲವರು ಇದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಹೋಗಿದ್ದಾರಂತೆ.