ಮನೆಯ ಮುಂದೆ ಗಿಡಗಳನ್ನು ಬೆಳೆಸಿ ಸೊಳ್ಳೆಗಳನ್ನು ಓಡಿಸಿ..!!

0
673

ಇತ್ತೀಚಿನ ವರ್ಷಗಳಲ್ಲಿ ಸೊಳ್ಳೆಗಳಿಂದ ಹರಡುತ್ತಿರುವ ಡೆಂಗ್ಯು, ಚಿಕೂನ್‌ ಗುನ್ಯಾ, ಮಲೇರಿಯಾ ಸೇರಿದಂತೆ ಹಲವು ರೋಗಗಳು ಜನರನ್ನು ಬೆಚ್ಚಿ ಬೀಳಿಸುತ್ತಿವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸೊಳ್ಳೆಗಳ ನಿವಾರಣಿಗೆ ಮಸ್ಕಿಟೋ ಕಾಯಿಲ್ ಗಳನ್ನು ಬಳಸುತ್ತಾರೆ. ಆದರೆ ಅದರ ವಾಸನೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ ಯಾವುದೇ ಸೈಡ್ ಎಫೆಕ್ಟ ಇಲ್ಲದೆ ಸೊಳ್ಳೆಯ ಸಮಸ್ಯೆಯಿಂದ ದೂರವಾಗಬಹುದು. ಇದಕ್ಕೆ ಪರಿಹಾರವಾಗಿರುವಂತೆ ಸಸ್ಯಗಳನ್ನು ಬೆಳೆಸುವ ಮೂಲಕ ನೈಸರ್ಗಿಕವಾಗಿ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ.

ಸೊಳ್ಳೆಗಳನ್ನು ನಿಯಂತ್ರಿಸುವ ಬಹೂಪಯೋಗಿ ಔಷಧೀಯ ಸಸ್ಯಗಳನ್ನು ಮನೆಯ ಮುಂಭಾಗ ಇಲ್ಲವೆ ತಾರಸಿಯ ಮೇಲೆ ಅತೀ ಕಡಿಮೆ ಜಾಗದಲ್ಲಿ ಕುಂಡಗಳಲ್ಲಿ ಬೆಳೆಸಬಹುದು. ಈ ಗಿಡಗಳು ಬೀರುವ ಸುವಾಸನೆಯು ಸೊಳ್ಳೆಗಳನ್ನು ಮನೆಯ ಬಳಿ ಸುಳಿಯದಂತೆ ಮಾಡುತ್ತವೆ. ಇದರಿಂದ ರಾಸಾಯನಿಕ ಬಳಕೆ ಇಲ್ಲದೆ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ.

ಸೊಳ್ಳೆ ನಿವಾರಕ ಸಸ್ಯಗಳು

ತುಳಸಿ, ಲೆಮನ್‌ ಬಾಮ್‌, ಚೆಂಡು ಹೂ, ಕ್ಯಾಟ್‌ನಿಪ್‌ ಸಿಟ್ರೋನೆಲ್ಲ ಗ್ರಾಸ್‌, ರೋಸ್‌ಮೆರಿ, ಥೈಮ್‌, ನೀಲಗಿರಿ, ಲ್ಯಾವೆಂಡರ್‌, ಪುದೀನ, ಬೆಳ್ಳುಳ್ಳಿ, ಟೀ ಟ್ರೀ, ಜೆರೇನಿಯಮ್‌(ಕಾಡುಸೊಪ್ಪು), ಲ್ಯಾಂಟನ ನಂತಹ ಸಸ್ಯಗಳನ್ನು ಮನೆಯ ಮುಂದಿನ ಕೈತೋಟಗಳಲ್ಲಿ, ಇಲ್ಲವೆ ಕುಂಡಗಳಲ್ಲಿ, ತಾರಸಿ ತೋಟಗಳಲ್ಲಿ ಬೆಳೆಸುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ. ಈ ಸಸ್ಯಗಳಿಂದ ಹೊರಹೊಮ್ಮುವ ಸುವಾಸನೆ ಸೊಳ್ಳೆಗಳನ್ನು ದೂರಾಗಿಸುತ್ತವೆ. ಆಹ್ಲಾದಕರ ವಾತಾವರಣದೊಂದಿಗೆ ಮನೆಯ ಅಂದವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ.

ಇದರಲ್ಲಿರುವ ಕೆಲವು ಸಸ್ಯಗಳು ರಾತ್ರಿಯ ವೇಳೆ ಕೂಡ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಗಾಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ (ಆಕ್ಸಿಜನ್) ಬಿಡುಗಡೆಯಾಗಿ ಪರಿಸರ ಸಮತೋಲನ ವಾಗುವುದರ ಜೊತೆಗೆ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುತ್ತವೆ. ಆಯುರ್ವೇದದಲ್ಲಿ ಔಷಧಗಳ ದೃಷ್ಟಿಯಿಂದಲೂ ಈ ಸಸ್ಯಗಳು ಬಹಳಷ್ಟು ಉಪಯೋಗಿ ಹಾಗೂ ಮಹತ್ವದಾಗಿದೆ.