ದೀಪಾವಳಿಗೆ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಮೋದಿ ಅವರು ಭಾರತೀಯರಿಗೆ ಭರ್ಜರಿ ಗಿಫ್ಟ್ ಕೊಡಲಿದ್ದಾರೆಯೇ..?

0
1737

ದೀಪಾವಳಿಗೆ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಭರ್ಜರಿ ಗಿಫ್ಟ್ ನೀಡುವ ಬಗ್ಗೆ ಒಂದು ತಿಂಗಳ ಮುಂಚಿತವಾಗಿಯೇ ಸುಳಿವು ನೀಡಿದೆ. ಹೌದು, ಈ ಸುದ್ದಿ ಸುಳ್ಳೇನು ಅಲ್ಲ. ಆದ್ರೆ ಇದರಿಂದ ಸರ್ಕಾರಿ ನೌಕರರಿಗೆ ಅಷ್ಟೇ ಅಲ್ಲ ಪೆಟ್ರೋಲ್ ಬಳಸುವ ಎಲ್ಲರ ಮುಖದಲ್ಲಿ ಮಂದಹಾಸ ಮೂಡಲಿದೆ.

ಇತ್ತೀಚಿಗೆ ಅಮೆರಿಕದಲ್ಲಿ ಬೀಸಿದ ಚಂಡಮಾರುತದ ಪರಿಣಾಮ ನೇರವಾಗಿ ತೈಲೋತ್ಪನಗಳ ಮೇಲೆ ಬಿದ್ದಿದೆ. ಇದರಿಂದ ತೈಲಬೆಲೆ ಏರಿಕೆ ಆಗಿತ್ತು. ಆದ್ದರಿಂದ ದೇಶದಲ್ಲಿಯೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಲಾಗಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೆಂದ್ರ ಪ್ರದಾನ್ ತಿಳಿಸಿದ್ದಾರೆ. ಇನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ತೈಲ ಕಂಪನಿಗಳಿಗೆ ಲಾಭವಾಗಲಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚು ಲಾಭವಾಗಲಿದೆ ಎಂದಿದ್ದಾರೆ.

ಯಾವ ದೇಶದಲ್ಲಿ ತೈಲೋತ್ಪನಗಳ ಬೆಲೆ ಏನು

ಪೆಟ್ರೋಲ್: ಪಾಕ್ 40.82, ಬಾಂಗ್ಲಾದಲ್ಲಿ 69.16, ನೇಪಾಳದಲ್ಲಿ 61.88 ಇದ್ದು ನೆರೆಯ ಶ್ರೀಲಂಕಾದಲ್ಲಿ 49.80 ರೂಪಾಯಿಗೆ ಒಂದು ಲೀಟರ್ ಸಿಗಲಿದೆ. ಇನ್ನು ಡೀಸೆಲ್ ಸಹ ಭಾರತದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಅದರ ಮಾಹಿತಿ ಪಾಕ್ 47.15, ಬಾಂಗ್ಲಾದಲ್ಲಿ 52.27, ನೇಪಾಳದಲ್ಲಿ 46.72 ಇದ್ದು ನೆರೆಯ ಶ್ರೀಲಂಕಾದಲ್ಲಿ 40.83 ರೂಪಾಯಿಗೆ ಒಂದು ಲೀಟರ್ ಸಿಗಲಿದೆ. ಇನ್ನು ಈ ಎರಡನ್ನು ತುಲನೆ ಮಾಡಿದ್ರೆ ಎಲ್‍ಪಿಸಿ ಸಿಲೆಂಡರ್ ನಮ್ಮ ದೇಶದಲ್ಲಿ ಕೊಂಚ ಅಗ್ಗವಾಗಿ ದೊರೆಯುತ್ತದೆ. ಭಾರತದಲ್ಲಿ 14 ಕೆ.ಜಿ ಸಿಲಿಂಡರ್487 ರೂ ಆದ್ರೆ, ಪಾಕ್ 1081.32, ಬಾಂಗ್ಲಾದಲ್ಲಿ 639.50, ನೇಪಾಳದಲ್ಲಿ 836.62 ಇದ್ದು ನೆರೆಯ ಶ್ರೀಲಂಕಾದಲ್ಲಿ 638.68 ರೂಪಾಯಿಗೆ ಸಿಗಲಿದೆ.

ಇನ್ನು ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಮಾರಿದ್ರೆ ಯಾರಿಗೆ ಎಷ್ಟು ಲಾಭ ಎನ್ನುವ ಪ್ರಶ್ನೆ ಏಳುತ್ತದೆ. ಒಂದು ಅಂದಾಜಿನ ಪ್ರಕಾರ 30.70 ಡೀಲರ್ ಶುಲ್ಕ, 21.48 ಅಬಕಾರಿ ಸುಂಕ, 3.24 ರೂ ಡೀಲರ್ ಕಮಿಷನ್, 14.96 ರೂ ವ್ತಾಟ್ ಬೀಳಲಿದೆ. ಇದೇ ಒಂದು ಲೀಟರ್ ಡೀಸೆಲ್ ಮಾರಿದ್ರೆ 30.54 ಡೀಲರ್ ಶುಲ್ಕ, 17.33 ಅಬಕಾರಿ ಸುಂಕ, 2.18ರೂ ಡೀಲರ್ ಕಮಿಷನ್, 8.67 ರೂ ವ್ತಾಟ್ ಬೀಳಲಿದೆ.

ಇನ್ನು ಪರಿಸರವಾದಿಗಳ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಗಣನಿಯ ಇಳಿಕೆ ಆಗಬಾರದು. ಇದರಿಂದ ವಾಹನಗಳು ಹೆಚ್ಚಿನ ಸಂಖ್ಯೆಗೆ ರಸ್ತೆಗೆ ಇಳಿಯುತ್ತವೆ ಎಂದು ಊಹಿಸಿದ್ದಾರೆ.