ಸೀಬೆ ಹಣ್ಣು ಮಾತ್ರ ಅಲ್ಲ, ಅದರ ಸಿಪ್ಪೆ ಎಲೆಯು ಕೂಡ ಔಷಧೀಯಗುಣ ಇದೆ ಅನ್ನೋದು ನಿಮಗೆ ಗೊತ್ತಾ..?

0
2057

ಸಿಟ್ರಿಸ್ ಹಣ್ಣುಗಳಿಗಿಂತ ಭಿನ್ನ ರುಚಿಯುಳ್ಳ, ಆದರೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ‘ಸಿ’ಯನ್ನು ಹೊಂದಿರುವ ಹಣ್ಣೆಂದರೆ ಸೀಬೆ.

source: timescaribbeanonline.com

ಸೀಬೆಹಣ್ಣು – ಬೀಟಾ ಕ್ಯಾರೋಟಿನ್, ಲೈಕೋಪಿನ್, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್ (ನಂಜು ನಿವಾರಕ), ಪೊಟ್ಯಾಸಿಯಂ ಮುಂತಾದವುಗಳಿಂದ ಕೂಡಿರುವ ವಿಶಿಷ್ಟ ಹಣ್ಣು. ಎಲೆ, ತೊಗಟೆ, ಹಣ್ಣು ಇವು ಸೀಬೆ ಹಣ್ಣಿನಲ್ಲಿರುವ ಔಷಧಿಯುಕ್ತ ಭಾಗಗಳು

1. ಎಲೆಗಳನ್ನು ಜಜ್ಜಿ ಕಲ್ಕದಿಂದ ಮಾಡಿ ಗಾಯಕ್ಕೆ ಹಚ್ಚಿದರೆ ಬೇಗನೆ ಗುಣವಾಗುತ್ತದೆ.

2. ಎಲೆಯ ಕಷಾಯದಿಂದ ನೆಗಡಿ, ಕೆಮ್ಮು ಶಮನ.

3. ಎಲೆಯ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿಹುಣ್ಣು, ಹಲ್ಲುನೋವು, ವಸಡಿನ ಊತ ನಿವಾರಣೆ.

guava2

4. ಎಲೆಯ ಮತ್ತು ತೊಗಟೆಯ ಕಷಾಯವನ್ನು ಸೇವಿಸಿದರೆ ಸ್ತ್ರೀಯರಲ್ಲಿ ಬಿಳುಪು ಹೋಗುವುದು ಕಡಿಮೆಯಾಗುತ್ತದೆ. ಚಿಗುರೆಲೆಯ ಕಷಾಯವು ಜ್ವರಹರವಾಗಿದೆ.

5. ಸೀಬೆಕಾಯಿಗಳನ್ನು ಕತ್ತರಿಸಿ, ನೀರಿನಲ್ಲಿ ಹಾಕಿ ಕುದಿಸಿ, ಕಷಾಯ ತಯಾರಿಸಿ. ಇದನ್ನು ಸೇವಿಸಿದರೆ ಭೇದಿ ಮತ್ತು ಮಾಂಸಭೇದಿ ಗುಣವಾಗುತ್ತದೆ.

6. ಸೀಬೆಹಣ್ಣು ರಕ್ತದೊತ್ತಡವನ್ನು ಕೊಲೆಸ್ಟರಾಲ್ ನ್ನು ಕಡಿಮೆಗೊಳಿಸುತ್ತದೆ. ಕ್ಯಾನ್ಸರ್ ನಿರೋಧಕ ಗುಣವನ್ನು ಹೊಂದಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದರಲ್ಲಿ ಪೊಟ್ಯಾಶಿಯಂ ಪ್ರಮಾಣ ಹೆಚ್ಚಿರುವುದರಿಂದ ಇದು ಹೃದಯದ ಬಡಿತವನ್ನು ಕ್ರಮಗೊಳಿಸುತ್ತದೆ. ಸೀಬೆಯಲ್ಲಿರುವ ನಾರಿನಂಶದಿಂದಾಗಿ ಕೊಲೆಸ್ಟರಾಲ್ ಪ್ರಮಾಣ ತಗ್ಗುತ್ತದೆ. ಇದು ದೇಹದಲ್ಲಿ ಸಂಚರಿಸುವ ‘ಪ್ರೀ ರ್ಯಾಡಿಕಲ್ಸ್’ ಅನ್ನು ನಾಶಗೊಳಿಸಿ ಕ್ಯಾನ್ಸರ್ ನ ವಿರುದ್ಧ ಕಾರ್ಯವೆಸಗುತ್ತದೆ.

guava5

7. ಸಿಪ್ಪೆ ತೆಗೆದು ಸೀಬೆಹಣ್ಣನ್ನು ಸೇವಿಸುವುದು ಮಧುಮೇಹಿಗಳಿಗೆ ಹಿತಕರ.

8. ಸೀಬೆಹಣ್ಣಿನ ತಿರುಳನ್ನು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ಅನಂತರ ತೊಳೆದರೆ ಮುಖ ಹೊಳೆಯುತ್ತದೆ. ನಿತ್ಯವೂ ಹೀಗೆ ಮಾಡಿದರೆ ಚರ್ಮದ ನೆರಿಗೆಗಳು ಕಡಿಮೆಯಾಗುತ್ತದೆ.

9. ಸೀಬೆಹಣ್ಣು ವಿಟಮಿನ್ ಎ, ಬಿ ಮತ್ತು ಸಿ ಗಳಿಂದ ಸಮೃದ್ಧವಾಗಿರುವುದರಿಂದ ಚರ್ಮಕ್ಕೆ ಹಿತಕರವಾಗಿದೆ. ಕಪ್ಪು ಚರ್ಮವನ್ನು ಬಿಳಿಗೊಳಿಸುವ ಸೌಂದರ್ಯ ಪ್ರಸಾದನಗಳಲ್ಲಿ ಸೀಬೆಹಣ್ಣಿನ, ಎಲೆಯ ಅಂಶಗಳನ್ನು ಬಳಸುತ್ತಾರೆ.

10. ಸೀಬೆಹಣ್ಣಿನ್ನು ಹಾಲು ಮತ್ತು ಜೇನಿನ ಜೊತೆಗೆ ಕ್ರಮವಾಗಿ ಸೇವಿಸಿದರೆ ಹೃದಯಕ್ಕೆ ಹಿತಕರ.