ಮೈಸೂರಿನಲ್ಲಿ ನಡೆದ ಯೋಗ ಕಾರ್ಯಕ್ರಮ ವಿಶ್ವ ದಾಖಲೆ ಬರೆದು ಗಿನ್ನಿಸ್ ಪುಟ ಸೇರಿದೆ..!

0
568

ಹೌದು ಮೈಸೂರು ನಗರದ ರೇಸ್ಕೊರ್ಸ್ ಮೈದಾನದಲ್ಲಿ ೬೦ ಸಾವಿರ ಜನರು ಏಕ ಕಾಲಕ್ಕೆ ಏಕ ಕಾಲದಲ್ಲಿ ಯೋಗ ಮಾಡುವ ಮೂಲಕ ಮೈಸೂರು ನಗರ ಇಂದು ವಿಶ್ವ ದಾಖಲೆ ನಿರ್ಮಿಸಿದೆ.ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವ ಸದಾನಂದಗೌಡ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

60 ಸಾವಿರ ಮಂದಿಯಿಂದ ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಂಡು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಭ್ಯಾಸ ನಡೆಸಿದರು. ಇಂದು ನಡೆದ ಯೋಗ ದಿನವನ್ನು ಎರಡು ಬೃಹತ್ ಕ್ರೇನ್ ಕ್ಯಾಮಾರ, ಎರಡು ಡ್ರೋಣ್ ಕ್ಯಾಮಾರಗಳನ್ನ ಬಳಸಿ ಕಾರ್ಯಕ್ರಮದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಇಡೀ ಯೋಗ ಪ್ರದರ್ಶನದ ಸಂಪೂರ್ಣ ವಿಡಿಯೋ ಹಾಗೂ ಟಿಕೆಟ್ ಮಾಹಿತಿಯನ್ನ ಗಿನ್ನಿಸ್ ವರ್ಡ್ ರೇಕಾಡ್ ಸಂಸ್ಥೆಗೆ ರವಾನಿಸಲಾಗುತ್ತದೆ.


2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಲಾಗಿತ್ತು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ಈ ದಾಖಲೆಯನ್ನು ಮುರಿದಿರವು ಮೈಸೂರು ನಗರ ಗಿನ್ನಿಸ್ ದಾಖಲೆಗೆ ಸಾಕ್ಷಿ ಆಗಲಿದೆ.