ಮದುವೆ ಕಾರ್ಯಕ್ರಮದಲ್ಲಿ 90 ಲಕ್ಷ ರೂ. ಹಣ ಎಸೆದು ರಸ್ತೆ ಉದ್ದಕ್ಕೂ ಸಂಭ್ರಮಿಸಿದ ಕುಟುಂಬಸ್ಥರು; ಕಂತೆ ಕಂತೆ ಹಣ ನೋಡಿ ಮುಗಿಬಿದ್ದು ಆರಿಸಿಕೊಂಡ ಜನರು.!

0
674

ಹಣಕ್ಕಾಗಿ ಎಷ್ಟೊಂದು ಕಷ್ಟ ಪಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಕೆಲವರಿಗೆ ಹಣದ ಬೆಲೆಯೇ ಗೊತ್ತಿರುವುದಿಲ್ಲ, ಅದಕ್ಕಾಗಿ ಬೇಕಾಬಿಟ್ಟಿಯಾಗಿ ಹಣ ಎಸೆದು ಸುದ್ದಿಯಾಗುತ್ತಾರೆ. ಇದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದ್ದು, ಮದುವೆ ಮೆರವಣಿಗೆಯಲ್ಲಿ ರಸ್ತೆ ಉದ್ದಕ್ಕೂ 500, 2000 ಸಾವಿರ ರೂ. ನೋಟುಗಳನ್ನು ಚೀಲದಲ್ಲಿ ತುಂಬಿಕೊಂಡು ಬಂದು ಎಸೆದಿದ್ದಾರೆ. ಈ ವೇಳೆ ಸೇರಿದ ಜನರು ಮುಗಿಬಿದ್ದು ನೋಟುಗಳನ್ನು ಆರಿಸಿಕೊಂಡಿದ್ದಾರೆ. ಹೀಗೆ ತೋರಿದ ಒಟ್ಟು ಹಣ 90 ಲಕ್ಷವೆಂದು ಅಂದಾಜು ಮಾಡಲಾಗಿದ್ದು, ನೋಟು ತೂರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು ಕೆಲವು ಜಾತ್ರೆ, ಮದುವೆ, ಸಮಾರಂಭಗಳಲ್ಲಿ ಹಣ ತೋರಿ ಸಂಭ್ರಮಾಚರಣೆ ಮಾಡುವುದು ಸಹಜವಾಗಿದೆ. ಅದರಂತೆ ಕೆಲವು ಸಮಾಜದಲ್ಲಿ ಮದುಮಕ್ಕಳ ಮೇಲೆ ಹಣದಿಂದ ದೃಷ್ಟಿ ತೆಗೆದು ತೂರುವುದು ಕೂಡ ಪದ್ಧತಿಯಾಗಿದೆ. ಅದೇರಿತಿಯಲ್ಲಿ ಗುಜರಾತಿನ ಜಾಮ್‍ನಗರದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಬರೋಬ್ಬರಿ 90 ಲಕ್ಷ ರೂ. ಹಣ ಎಸೆದು ಸಂಭ್ರಮಿಸಿದ ಘಟನೆ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದವರಿಗೆ ಇದು ಯಾವುದೋ ಸಿನಿಮಾ ಚಿತ್ರೀಕರಣ ಅನಿಸಿದರು ಇದು ಅಸಲಿಗೆ ಸತ್ಯವಾಗಿದೆ.

Also read: ಮದುವೆ ಪಿಕ್ಸ್ ಆದ ಬಳಿಕ ಮದುಮಗ ಶೌಚಾಲಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರೆ ವಧುಗೆ ಸಿಗುತ್ತೆ ರೂ.51 ಸಾವಿರ.!

ನವೆಂಬರ್ 30ರಂದು ವರ ಮದುವೆಮನೆಗೆ ಮೆರವಣಿಗೆ ಮೂಲಕ ಹೋಗುತ್ತಿದ್ದನು. ಈ ವೇಳೆ ವರನ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆಯುದ್ದಕ್ಕೂ ಹಣವನ್ನು ಎಸೆಯುವ ಮೂಲಕ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸಿದ್ದಾರೆ. ಈ ಮದುವೆಯನ್ನು ಚೇಲಾ ಗ್ರಾಮದ ಜಡೇಜಾ ಕುಟುಂಸ್ಥರು ಆಯೋಜಿಸಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ ಮೆರವಣಿಗೆಯಲ್ಲಿ 90 ಲಕ್ಷ ರೂ. ಅನ್ನು ಎಸೆಯಲಾಗಿದೆ. ಇದರಲ್ಲಿ ಕೇವಲ 2 ಸಾವಿರ ಹಾಗೂ 500 ರೂ. ನೋಟುಗಳನ್ನು ಸುರಿಮಳೆ ಗೈದಿದ್ದಾರೆ.

ಹಣ ಎಸೆದು ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರೆ. ಇನ್ನೂ ಕೆಲವರು ತಾವು ಮದುವೆ ಸಂಭ್ರದಲ್ಲಿ ಇದ್ದರೆ ಹಣ ಸಿಗುತ್ತಿತು ಎಂದು ಹೇಳಿದ್ದಾರೆ. ಮೆರವಣಿಗೆ ವೇಳೆ ಒಂದು ಹಣದ ಕಂತೆ ಖಾಲಿ ಆಗುತ್ತಿದ್ದಂತೆ ಮತ್ತೊಂದು ಹಣದ ಕಂತೆಯನ್ನು ತೆಗದು ಸುರಿಮಳೆ ಗೈದಿದ್ದಾರೆ. ನೋಟುಗಳನ್ನು ಎಸೆಯುತ್ತಿದ್ದ ಕಾರಣ ಅಲ್ಲಿದ್ದ ಜನರಿಗೆ ನೋಟಿನ ಮಳೆ ಆಗುತ್ತಿದೆ ಎಂದು ಎನಿಸುತ್ತಿತ್ತು. ಮೆರವಣಿಗೆ ಮುಂದೆ ಹೋದ ತಕ್ಷಣ ಸ್ಥಳೀಯರು ಕೆಳಗೆ ಬಿದ್ದಿದ್ದ ನೋಟುಗಳನ್ನು ತೆಗೆದುಕೊಂಡಿದ್ದಾರೆ. ಮದುವೆಯಾದ ನಂತರ ವರ ವಧುವನ್ನು ಹೆಲಿಕಾಪ್ಟರ್ ಮೂಲಕ ಕುಂದಾದ್ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾನೆ.


Also read: ಮದುವೆಯಾಗಿ 7 ವರ್ಷದ ನಂತರ ಪ್ರಿಯಕರನ ಜೊತೆ ಹೆಂಡತಿಗೆ ಮದುವೆ ಮಾಡಿದ ಪತಿ; ಈ ತ್ಯಾಗಕ್ಕೆ ಭಾರಿ ಮೆಚ್ಚುಗೆ.!

ಅಷ್ಟೇ ಅಲ್ಲದೆ ವರನ ಅಣ್ಣ ಮದುವೆ ಉಡುಗೊರೆಯಾಗಿ ಒಂದು ಕೋಟಿ ಮೌಲ್ಯದ ಕಾರನ್ನು ಉಡುಗೊರೆ ಆಗಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲವನ್ನು ನೋಡಿದ ಜನರು ಇಷ್ಟೊಂದು ಹಣ ತೂರಿದ್ದಾರೆ ಎಂದರೆ ಮದುವೆ ಊಟ, ಉಡುಗರೆ ಹೇಗೆ ಇರಬಹುದು ಎಂದು ಲೆಕ್ಕಹಾಕಿದ್ದಾರೆ.