ಟ್ರಂಪ್ ಭದ್ರತೆಗಾಗಿ ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್; ಬೀದಿಯಲ್ಲಿ ಜೋಳಿಗೆ ಕಟ್ಟಿ ಕರ್ತವ್ಯ ನಿರ್ವಹಿಸಿದ ತಾಯಿಗೆ ಭಾರಿ ಮೆಚ್ಚುಗೆ.!

0
157

ಭಾರತದ ಆಗಮಿಸಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದಾರೆ. ಈ ವೇಳೆ ವಿಶೇಷ ಭದ್ರತೆ ನೀಡಲಾಗಿದ್ದು, 100ಕ್ಕೂ ಹೆಚ್ಚು ಭದ್ರತಾ ಅಧಿಕಾರಿಗಳು, ಅಮೆರಿಕದ ಜೊತೆಗೆ ಗುಜರಾತಿನ ಖಡಕ್ ಅಧಿಕಾರಿಗಳು, 25 ಐಪಿಎಸ್, 65 ಎಸಿಪಿಗಳ ಭದ್ರತೆ, 1000ಕ್ಕೂ ಹೆಚ್ಚು ಎಸ್‍ಐ/ಎಎಸ್‍ಐಗಳು ಸುಮಾರು 12,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್‍ಗಾಗಿ ವಿಶೇಷ ಮಹಿಳಾ ಪಡೆ ನಿಯೋಜಿಸಲಾಗಿದ್ದು, ಈ ವೇಳೆ ಮಹಿಳಾ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದು ಭಾರಿ ವೈರಲ್ ಆಗಿದೆ.

ಹೌದು ಟ್ರಂಪ್ ಆಗಮನದ ಹಿನ್ನೆಲೆಯಲ್ಲಿ ಅಹಮದಾಬಾದ್​ನಲ್ಲಿ ಲಕ್ಷಾಂತರ ಜನರು ಸೇರುವುದರಿಂದ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಹಸುಗೂಸಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿಯೇ ಜೋಳಿಗೆಯನ್ನು ಕಟ್ಟಿ ಮಗುವನ್ನು ತೂಗುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ಅದರಂತೆ ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ 10 ಜನರ ತಂಡ ನೇಮಿಸಲಾಗಿದೆ. ತಂಡದಲ್ಲಿರುವ ಸದಸ್ಯರೆಲ್ಲ ಮಹಿಳಾ ಅಧಿಕಾರಿಗಳೇ ಆಗಿರುತ್ತಾರೆ. ಅದರಂತೆ ಮಹಿಳಾ ಪೇದೆ ಸಂಗೀತಾ ಪರ್ಮಾರ್ ಅವರನ್ನು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕಾಗಿ ಅಹಮದಾಬಾದ್‍ನಲ್ಲಿ ನಿಯೋಜಿಸಲಾಗಿದೆ.

@aninews.in

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗುಜರಾತ್​ನ ವಡೋದರಾದ ಗೋರ್ವಾ ಪೊಲೀಸ್ ಠಾಣೆಯ ಕಾನ್ಸ್​ಟೆಬಲ್ ಸಂಗೀತಾ ಪರ್ಮೆರ್ ಅವರನ್ನು ‘ಕೆಮ್ಚೋ ಟ್ರಂಪ್’ಕಾರ್ಯಕ್ರಮದ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇವರಿಗೆ 1 ವರ್ಷದ ಗಂಡುಮಗುವಿದ್ದು, ಆ ಮಗುವನ್ನು ನೋಡಿಕೊಳ್ಳುವ ಸಲುವಾಗಿ ತಮ್ಮ ಜೊತೆಗೆ ಕರೆತಂದಿದ್ದಾರೆ. ಮಗುವಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅಹಮದಾಬಾದ್​ನಲ್ಲಿ ಭದ್ರತೆಗೆ ಹೋಗುವುದು ಕಷ್ಟವಾಗುತ್ತದೆ ಎಂದು ತಮ್ಮ ಮೇಲಧಿಕಾರಿಗಳಿಗೆ ಸಂಗೀತಾ ತಿಳಿಸಿದ್ದರು. ಕೊನೆಗೆ ಬೇರೆ ದಾರಿಯಿಲ್ಲದೆ ಅಹಮದಾಬಾದ್​ಗೆ ತೆರಳಲು ನಿರ್ಧರಿಸಿದ ಅವರು ತಮ್ಮೊಂದಿಗೆ ಮಗನನ್ನು ಕೂಡ ಕರೆತಂದಿದ್ದಾರೆ. ಕೆಲಸದ ನಡುವೆಯೂ ತಮ್ಮ ಮಗುವನ್ನು ನೋಡಿಕೊಳ್ಳುವ ಮೂಲಕ ಕರ್ತವ್ಯದ ಜೊತೆಗೆ ತಾಯ್ತನದ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ.

@aninews.in

ಈ ಬಗ್ಗೆ ಎಎನ್​ಐ ವರದಿ ಪ್ರಕಟಿಸಿದ್ದು,ತನ್ನನ್ನು ನಿಯೋಜನೆ ಮಾಡಿರುವ ಏರಿಯಾದ ಬಸ್​ಸ್ಟಾಂಡ್​ನಲ್ಲಿಯೇ ಸೀರೆಯ ಜೋಳಿಗೆ ಕಟ್ಟಿ, ಅದರಲ್ಲಿ ಮಗುವನ್ನು ಮಲಗಿಸಿ ತೂಗುತ್ತಿರುವ ಮಹಿಳಾ ಕಾನ್​ಸ್ಟೇಬಲ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಗೀತಾ ಅವರು, ನಾನು ಅಹಮದಾಬಾದ್‍ಗೆ ಬಂದಾಗ ಮಗವನ್ನು ನಿಯೋಜನಾ ಸ್ಥಳದಿಂದ 24 ಕಿ.ಮೀ ದೂರದಲ್ಲಿರುವ ಸಾಕೇತ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಬಿಟ್ಟಿದ್ದೆ. ಆದರೆ ಮಗು ತುಂಬಾ ಅಳುತ್ತಿತ್ತು. ಹೀಗಾಗಿ ಒಂದು ದಿನದ ಬಳಿಕ ಮಗವನ್ನು ತೆಗದುಕೊಂಡು ಬಂದೆ. ಬಳಿಕ ನಾನು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಮಗುವನ್ನು ತೆಗದುಕೊಂಡು ಬರಲು ಆರಂಭಿಸಿದೆ. ನಾನು ಬೆಳಗ್ಗೆ 8 ಗಂಟೆಗೆ ಇಲ್ಲಿಗೆ ಬಂದು ರಾತ್ರಿ 9 ಗಂಟೆಗೆ ಹೊರಡುತ್ತೇನೆ. ಎರಡೂ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಕೆಲವೊಮ್ಮೆ ಮಗುವಿಗೆ ಹಾಲುಣಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬಾಹುಬಲಿ ಅವತಾರದಲ್ಲಿ ಭಾರತಕ್ಕೆ ಡೊನಾಲ್ಡ್‌ ಟ್ರಂಪ್‌; ಟ್ವಿಟ್ಟರ್​ನಲ್ಲಿ ಅಮೇರಿಕಾ ಅಧ್ಯಕ್ಷ ಶೇರ್ ಮಾಡಿದ ವೀಡಿಯೋ ಭಾರಿ ವೈರಲ್.!