ಇಂದು ಭಾರಿ ಕುತೂಹಲ ಮೂಡಿಸಿರುವ ಗುಜರಾತ್ ಎಲೆಕ್ಷನ್-ನ ಮೊದಲ ಹಂತ ನಡೆಯುತ್ತಿದೆ!! ಮೋದಿಯವರ ತವರಲ್ಲಿ ಕಾಂಗ್ರೆಸ್ ಗೆಲ್ಲಲ್ಲು ಸಾಧ್ಯವೇ??

0
441

ಗುಜುರಾತ್ ವಿಧಾನಸಭೆ ಚುನಾವಣೆಯ ಮತದಾನ ಈಗಾಗಲೇ ಶುರುವಾಗಿದೆ, ಇಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಜನರು ಹಾಗು ವಿವಿಧ ರಾಜಕೀಯ ಪಕ್ಷಗಳು ಸಿದ್ದರಾಗಿದ್ದಾರೆ. ತಿಂಗಳು ಗಟ್ಟಲೆ ನಡೆದ ಮತದಾನ ಪ್ರಚಾರ ಕಾರ್ಯಕ್ಕೆ ಅಂತ್ಯವಾಗಿದೆ.

ಈ ಬಾರಿ ಅಧಿಕಾರ ಹಿಡಿಯಲೇಬೇಕು ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಅದಲ್ಲದೆ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅವರ ತವರು ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಮೋದಿ ತವರು ರಾಜ್ಯದಲ್ಲಿ 22 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ, ಹೀಗಾಗಿ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.

ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ ವಿಷಯಗಳು ಇವು:

  • ಅಯೋಧ್ಯೆಯ ನಿವೇಶನ ವಿವಾದ
  • ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ
  • ರಾಹುಲ್‌ ಅವರಿಂದ ದೇವಾಲಯಗಳಿಗೆ ಸಂದರ್ಶನ

ಕಾಂಗ್ರೆಸ್‌ ಬಿಜೆಪಿ ಭದ್ರಕೋಟೆಯಲ್ಲಿ ತನ್ನ ಚುನಾವಣಾ ಪ್ರಚಾರದಲ್ಲಿ ಮುಖ್ಯವಾಗಿ ಪ್ರಸ್ತಾಪಿಸಿದ ವಿಷಯಗಳು ಇವು:

  • ನೋಟ್-ಬ್ಯಾನ್ ನಿಂದ ಆದ ಅಡ್ಡ ಪರಿಣಾಮಗಳು
  • GST ಯಿಂದ ಸಾಮಾನ್ಯರಿಗೆ ಆಗುವ ನಷ್ಟಗಳು
  • ಆಧಾರ್ ಕಾರ್ಡ್ ಕಡ್ಡಾಯ

ಬಿಜೆಪಿಯ ಪ್ರಣಾಳಿಕೆ ವಿಷಯ:

ಬಿಜೆಪಿ ಕಳೆದ ಬಾರಿ ಪ್ರಣಾಳಿಕೆಯಲ್ಲಿ ಭಾರಿ ಭರವಸೆಗಳನ್ನು ನೀಡಿತ್ತು, ಆದರೆ ಈ ಬಾರಿ ಅಂತಹ ಯಾವುದೇ ಭರವಸೆ ನೀಡಿಲ್ಲ. ಕಳೆದ ಐದು ವರ್ಷಗಳಲ್ಲಿ ಆರ್ಥಿಕ ವೃದ್ಧಿ ದರ ಶೇ 10ಕ್ಕಿಂತಲೂ ಹೆಚ್ಚಿದೆ ಎಂದು ಮಾತ್ರ ಹೇಳಿದೆ, ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಚುನಾವಣೆಯ ಕೇಂದ್ರ ವಿಚಾರ ಅಭಿವೃದ್ಧಿಯನ್ನು ಬಿಟ್ಟು ಬೇರೆ ಯಾವ ವಿಷಯವನ್ನು ಹೇಳಬಾರದೆಂದು ಕಾಂಗ್ರೆಸ್‌ ತನ್ನ ಪಕ್ಷದವರಿಗೆ ಎಚ್ಚರಿಸಿದೆ.