ಗುಜರಾತಿ ಶೈಲಿಯ ಬೆಂಡೆಕಾಯಿ ಪಲ್ಯ. ಮಾಡುವ ವಿಧಾನ..

0
2484

ತರಕಾರಿಗಳಲ್ಲೇ ವಿಭಿನ್ನವಾದ ರುಚಿ ಮತ್ತು ಆರೋಗ್ಯಕ್ಕೆ ಬೇಕಾದ ಹತ್ತುಹಲವಾರು ಅಂಶಗಳನ್ನು ಒಳಗೊಂಡಿರುವ ಬೆಂಡೆಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ? ಇದನ್ನು ಹಳ್ಳಿಯಲ್ಲಿ ಹೆಚ್ಚಾಗಿ ಹಸಿಯದಾಗಿ ತಿನ್ನಲು ಕೊಡುತ್ತಾರೆ. ಬೆಂಡಿಕಾಯಿ ತಿನ್ನುವುದು ಬರಿ ರುಚಿಗೆ ಮಾತ್ರವಲ್ಲದೆ ಇದನ್ನು ತಿನ್ನುವುದರಿಂದ ದೇಹದಲ್ಲಿರುವ ಕಲ್ಮಶಗಳನ್ನು ಕೂಡ ಹೊರಹಾಕುತ್ತೆ. ಕೆಲವೊಂದು ಧರ್ಮದಲ್ಲಿ ಯಾವುದೇ ವ್ಯಕ್ತಿ ಸಾವಿನಂತ ಕೆಟ್ಟ ವಿಷಯವನ್ನು ತಿಳಿಸಲು ಬಂದಾಗೆ ಆ ವ್ಯಕ್ತಿಗೆ ತಿನ್ನಲು ಹಸಿ ಬೆಂಡೆಕಾಯಿ ಕೊಡುತ್ತಾರೆ. ಏಕೆಂದರೆ ಕೆಟ್ಟ ವಿಚಾರ ತಿಳಿಸಲು ಬಂದ ವ್ಯಕ್ತಿಯ ಬಾಯಿಯಲ್ಲಿ ವಿಷ ತುಂಬಿರುತ್ತೆ ಈ ಬೆಂಡೆಕಾಯಿ ತಿಂದರೆ ವ್ಯಕ್ತಿಯ ಮನಸ್ಸಿನ ವಿಷಕೂಡ ಹೋಗುತ್ತೆ. ಆದಕಾರಣ ಬೆಂಡಿಯನ್ನು ಪ್ರತಿಯೊಬ್ಬರೂ ತಿನ್ನಲೇಬೇಕು. ಇಷ್ಟೆಲ್ಲ ಅಂಶಗಳನ್ನು ಒಳಗೊಂಡಿರುವ ಬೆಂಡೆಯಿಂದ ಹೊಸ ರುಚಿಯ ಗುಜರಾತಿ ಶೈಲಿಯ ಬೆಂಡೆಕಾಯಿ ಪಲ್ಯ. ಮಾಡುವ ವಿಧಾನ ಇಲ್ಲಿದೆ ನೋಡಿ.

Also read: ಖಾರ ಪ್ರಿಯರಿಗೆ ಇಷ್ಟವಾಗುವ ಆಂಧ್ರ ಶೈಲಿಯ ಟೊಮೆಟೊ ಪಪ್ಪು, ತಯಾರಿಸುವ ವಿಧಾನ..!!

ಬೇಕಾಗುವ ಪದಾರ್ಥಗಳು:

 • 1/4 ಕೆಜಿ ಬೆಂಡೆಕಾಯಿ
 • 2 ಆಲೂಗಡ್ಡೆ
 • 1 ಈರುಳ್ಳಿ
 • ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
 • ಹಸಿ ಮೆಣಸಿನಕಾಯಿ 3-4
 • ನಿಂಬೆ ರಸ 1 ಚಮಚ
 • ಅರಿಶಿಣ ಪುಡಿ ಅರ್ಧ ಚಮಚ
 • ಕೊತ್ತಂಬರಿ ಪುಡಿ 1 ಚಮಚ
 • ಸಾಸಿವೆ ಮೆಂತೆ ಬೀಜ ಅರ್ಧ ಚಮಚ
 • ರುಚಿಗೆ ತಕ್ಕ ಉಪ್ಪು
 • ಎಣ್ಣೆ 2 ಚಮಚ

ತಯಾರಿಸುವ ವಿಧಾನ:

Also read: ಡ್ರೈ ಫ್ರೂಟ್ಸ್-ನಿಂದ ಮಾಡಿದ ಪೌಷ್ಟಿಕಾಂಶಯುಕ್ತ, ಗೋಕಾಕ್ ಕರದಂಟು ಮಾಡುವ ವಿಧಾನ..!!

 1. ಬೆಂಡೆಕಾಯಿಯನ್ನು ತೊಳೆದು ಅದನ್ನು ಬಟ್ಟೆಯಿಂದ ಒರೆಸಿ ಚಿಕ್ಕ ಗಾತ್ರದಲ್ಲಿ ಕತ್ತರಿಸಿ. ಆಲೂಗಡ್ಡೆಯನ್ನು ಕತ್ತರಿಸಿ.
 2. ಈಗ ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದು ಬಿಸಿಯಾದಾಗ 1 ಚಮಚ ಎಣ್ಣೆ ಹಾಕಿ, ಬೆಂಡೆಕಾಯಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ, ನಂತರ ಅದನ್ನು ತೆಗೆದು ಮತ್ತೊಂದು ಬಟ್ಟಲಿಗೆ ಹಾಕಿಡಿ.
 3. ಈಗ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಸಾಸಿವೆ ಹಾಕಿ, ನಂತರ ಮೆಂತೆ ಬೀಜ ಹಾಕಿ 2 ನಿಮಿಷ ಫ್ರೈ ಮಾಡಿ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
 4. ನಂತರ ಆಲೂಗಡ್ಡೆ ಹಾಕಿ 5 ನಿಮಿಷ ಫ್ರೈ ಮಾಡಿ, ಈಗ ಫ್ರೈ ಮಾಡಿದ ಬೆಂಡೆಕಾಯಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪವೇ-ಸ್ವಲ್ಪ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ.
 5. ನಂತರ ಪಾತ್ರೆಯ ಮುಚ್ಚಳ ತೆಗೆದು 5 ನಿಮಿಷ ಫ್ರೈ ಮಾಡಿ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿದರೆ ಬೆಂಡೆಕಾಯಿ ಪಲ್ಯ ರೆಡಿ.