ಎರಡು ರಾಜ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಹೋರಾಟ ರಾಹುಲ್-ಗೆ ನಿರಾಸೆ?? ಗೆಲುವಿನ ಹಾದಿಯತ್ತ ಬಿಜೆಪಿ…

0
497

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಲೆ ಎಲ್ಲೆಡೆ ಇನ್ನು ಇದೆ ಎಂಬುದಕ್ಕೆ ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಜನ ಸಾತ್ ನೀಡುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿಗೆ ನಡೆದ ಗುಜುರಾತ್ ಮತ್ತು ಹಿಮಾಚಲ್-ಪ್ರದೇಶ್-ನಲ್ಲಿ ನಡೆದ ಚುನಾವಣೆಗಳೆ ಸಾಕ್ಷಿ, ಇಂದು ನಡೆದ ಮತ ಎಣಿಕೆಯಲ್ಲಿ ಬಿಜಿಪಿ ಎರಡು ರಾಜ್ಯಗಳಲ್ಲಿ ಉತ್ತಮ ಬಹುಮತಗಳೊಂದಿಗೆ ಮುಂದಿದೆ.

ಎರಡು ರಾಷ್ಟೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಹಾಗು ಪ್ರಧಾನಿಯವರ ತವರು ರಾಜ್ಯ ಗುಜುರಾತ್-ನಲ್ಲಿ ಕೇಸರಿ ಪಕ್ಷ ಇತ್ತೀಚಿಗೆ ತಿಳಿದ ವರದಿಯ ಪ್ರಕಾರ 182 ಸದಸ್ಯಬಲ ವಿರುವ ರಾಜ್ಯದಲ್ಲಿ 106 ಸ್ಥಾನಗಳನ್ನು ಪಡೆದು ಮುನ್ನಡೆಯಲ್ಲಿದೆ, ಇನ್ನು ಎರಡನೇ ಸ್ಥಾನವನ್ನು ತಮ್ಮ ಪಕ್ಷ ಪಡೆಯಲಿದೆ ಎಂಬ ಪುರಾವೆಯೊಂದಿಗೆ ರಾಹುಲ್ ಗಾಂಧಿ ನೇತೃತ್ವವಹಿಸಿದ್ದ ಕಾಂಗ್ರೆಸ್ ಕೇವಲ 71 ಪಡೆದಿದೆ ಮತ್ತು ಸ್ವತಂತ್ರ ಸ್ಪರ್ಧಿಗಳು 5 ಸ್ಥಾನ ಪಡೆದಿದ್ದಾರೆ.

ಇನ್ನು ಹಿಮಾಚಲ್-ಪ್ರದೇಶದ ಮತ ಎಣಿಕೆ ಕಡೆ ನೋಡುವುದಾದರೆ 68 ಸದಸ್ಯಬಲ ವಿರುವ ಈ ರಾಜ್ಯದಲ್ಲಿಯೂ ಸಹ ಬಿಜೆಪಿ ಪಕ್ಷ 45 ಸ್ಥಾನಗಳೊಂದಿಗೆ ಮುಂದಿದೆ, ಇನ್ನು ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಸ್ವತಂತ್ರವಾಗಿ ಸ್ಪರ್ದಿಸಿದವರು 4 ಸ್ಥಾನ ಪಡೆದಿದ್ದಾರೆ.

ಇನ್ನು ಮತ ಎಣಿಕೆ ಪೂರ್ಣವಾಗಿಲ್ಲವಾದ್ದರಿಂದ ಯಾವ ಪಕ್ಷ ಎರಡು ರಾಜ್ಯಗಳಲ್ಲಿ ಎಷ್ಟು ಸ್ಥಾನ ಪಡೆಯಲಿದೆ ಎಂಬುದು ಕುತೂಹಲವನ್ನು ಮೂಡಿಸಿದೆ.