ಕಲಬುರಗಿಯ ಮಹಾನಗರ ಪಾಲಿಕೆಯಲ್ಲಿ ಉರ್ದು ನಾಮಫಲಕ ಹೇಗೆ ಬಂತು?? ಕನ್ನಡ ಬೋರ್ಡ್-ಅನ್ನೇ ಹಾಕಬೇಡಿ ಅಂತ ಹೇಳಿದ್ಯಾಕೆ??

0
403
gulbarga-urdu-board-controversy

ಕಲ್ಬುರ್ಗಿ ಮಹಾನಗರ ಪಾಲಿಕೆಯ ನೂತನ ಕಟ್ಟಡದ ಮೇಲೆ ಕನ್ನಡ ಹಾಗೂ ಇಂಗ್ಲೀಷ್‌ ನಲ್ಲಿ ನಾಮಫಲಕಗಳಿದ್ದವು.. ಆದರೆ ಕೆಲವು ಕಿಡಿಗೇಡಿಗಳು ಅಲ್ಲಿ ಉರ್ದು ನಾಮ ಒಹಲಕವನ್ನು ತಂದು ಹಾಕಿ ವಿವಾದವನ್ನು ಸೃಷ್ಟಿ‌ಮಾಡಿದ್ದಾರೆ..

ಭಾನುವಾರ ಯಾರೂ ಇಲ್ಲದ ಸಮಯ ನೋಡಿಕೊಂಡು ಈ ರೀತಿಯಾದ ಕೆಲಸವನ್ನು ಮಾಡಿದ್ದಾರೆ.. ವಿಷಯ ತಿಳಿದ ತಕ್ಷಣ ಮಹಾನಗರ ಪಾಲಿಕೆ ಸಿಬ್ಬಂದಿ ಉರ್ದು ನಾಮ ಫಲಕವನ್ನು ತೆಗೆಸಿದ್ದಾರೆ.. ಜೊತೆಗೆ ಈ ಕೃತ್ಯ ಎಸಗಿದವರ ವಿರುದ್ಧ ಪೋಲೀಸರಿಗೆ ದೂರನ್ನು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ..

ಇದು ಸ್ಥಳೀಯ ಮುಸ್ಲಿಂ ಸಂಘಟನೆಗಳ ಕಿವಿಗೆ ಬಿದ್ದೊಡನೆ ಮಹಾನಗರ ಪಾಲಿಕೆಯ ಮುಂದೆ ಜಮಾಯಿಸಿ.. ಉರ್ದು ನಾಮ ಫಲಕ ತೆರವು ಮಾಡಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ.. ತಡರಾತ್ರಿಯವರೆಗೂ ಮಹಾನಗರ ಪಾಲಿಕೆಯ ಕಟ್ಟಡದ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ.. ಉರ್ದು ನಾಮಫಲಕ ಬೇಡವೆಂದ ಮೇಲೆ ಕನ್ನಡ ಹಾಗೂ ಇಂಗ್ಲೀಷ್ ನಾಮ ಫಲಕಗಳು ಬೇಡ ಎಂದು ನಾಮಫಲಕಕ್ಕೆ ಮಸಿ ಎರಚಿ ಗಲಾಟೆ ಮಾಡಿದ್ದಾರೆ..

ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಪೋಲೀಸರು ಪ್ರತಿಭಟನಾ ನಿರತ 30 ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ..

ಗಡಿ ಜಿಲ್ಲೆಗಳಲ್ಲಿ ಭಾಷಾ ವಿವಾದಗಳು ನಡೆಯುತ್ತಲೇ ಇವೆ.. ಆದರೆ ಸರ್ಕಾರಿ ಕಛೇರಿ ಒಂದರ ಮೇಲೆ ಯಾರೂ ಇಲ್ಲದಾಗ ಬಂದು ನಾಮಫಲಕವನ್ನೇ ಹಾಕಿ ಕಣ್ಮರೆಯಾಗಿರುವುದನ್ನು‌ ಕಂಡರೆ ಕಿಡಿಗೇಡಿತನ ಎಷ್ಟರ ಮಟ್ಟಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ..

ಈ ಬಗ್ಗೆ ಪೋಲೀಸರು ಆರೋಪಿಗಳನ್ನು ಆದಷ್ಟು ಬೇಗ ವಶಕ್ಕೆ ಪಡೆದು ಮತ್ತೊಮ್ಮೆ ಈ ರೀತಿಯಾದ ಘಟನೆ ಸಂಭವಿಸದಂತೆ ನೋಡಿಕೊಳ್ಳಬೇಕಿದೆ..