ಪಾಲಕರ ಪ್ರೀತಿ ತನ್ನ ಮೇಲೆ ಕಡಿಮೆಯಾಯಿತು, ಎಂದು ತಂದೆ-ತಾಯಿಗೆ ಚಾಕುವಿನಿಂದ ಇರಿದು ಕೊಂದ ಮಗ.!

0
265

ಮಕ್ಕಳ ಜೀವನಕ್ಕಾಗಿ ತಂದೆ- ತಾಯಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸುತ್ತಾರೆ. ಜೀವನದಲ್ಲಿ ತಮಗೆ ಏನು ಸಿಕ್ಕಿಲ್ಲ ಅದೆಲ್ಲವನ್ನು ತಮ್ಮ ಮಕ್ಕಳಿಗೆ ನೀಡಿ ಸಂತೋಷ ಪಟ್ಟುಕೊಳ್ಳುವ ಪಾಲಕರಿಗೆ ಈ ದಿನದಲ್ಲಿ ಮಕ್ಕಳು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದಕ್ಕೆ ಘಟನೆಯೊಂದು ನಡೆದಿದ್ದು, ಪ್ರತಿಯೊಂದು ತಂದೆ-ತಾಯಿಗಳು ಮಕ್ಕಳನ್ನು ಬೆಳಸುವಾಗ ಎಚ್ಚರವಹಿಸುವುದು ಒಳ್ಳೆಯದೇ ಎನ್ನುವಂತೆ ಆಗಿದೆ. ಏಕೆಂದರೆ ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿ ಕಾಳಜಿ ಮಾಡಿದರು ತಪ್ಪು, ಅವರ ಪಾಡಿಗೆ ಹೇಗಾದರೂ ಇರಲಿ ಎಂದು ಫ್ರೀಡಂ ಆಗಿ ಬಿಟ್ಟರು ತಪ್ಪಾಗುವಂತ ಕಾಲಮಾನ ಬಂದಿದೆ. ಇದಕ್ಕೆ ಸಾಕ್ಷಿಯಾಗಿ ನನ್ನ ಮೇಲೆ ತಂದೆ-ತಾಯಿಗಳ ಪ್ರೀತಿ ಕಮ್ಮಿಯಾಗಿದೆ ಮಗನೆ ಇರಿದು ಕೊಂಡಿರುವ ಘಟನೆ ನಡೆದಿದೆ.

Also read: ಇಸ್ಪೀಟ್ ಜೂಜಾಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಭೂಪ; ಇಸ್ಪೀಟ್-ನಲ್ಲಿ ಗೆದ್ದ ಸ್ನೇಹಿತರು ಮಹಿಳೆಗೆ ಏನ್ ಮಾಡಿದರು ಗೊತ್ತಾ??

ಹೌದು ನಂಬಲು ಸಾಧ್ಯವಾಗದಿದ್ದರು ಅಸಲಿಗೆ ಸತ್ಯವಾದ ಘಟನೆ ನಡೆದಿದ್ದು. ಪೋಷಕರು ತನಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿಲ್ಲ, ಕಡೆಗಣಿಸುತ್ತಿದ್ದಾರೆ ಎಂದು ಭಾವಿಸಿದ ಮಗ ಹೆತ್ತ ತಂದೆ-ತಾಯಿಗೆ ಚಾಕುವಿನಿಂದ ಇರಿದಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಈ ದುರಂತದಲ್ಲಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದರೆ, ತಾಯಿ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪ್ರತ್ಯಕ್ಷದರ್ಶಿ, ಆರೋಪಿಯ ಸಹೋದರ ಮಯಾಂಕ್​ ಮೆಹ್ತಾ ಪೊಲೀಸರಿಗೆ ದೂರು ನೀಡಿದ್ದಾನೆ. ಆರೋಪಿಯನ್ನು ರಿಷಬ್​ ಮೆಹ್ತಾ(32) ಎಂದು ಗುರುತಿಸಲಾಗಿದೆ. ಮೃತಪಟ್ಟ ತಂದೆ ಸುಶಿಲ್​ ಮೆಹ್ತಾ ಮತ್ತು ಆಸ್ಪತ್ರೆಯಲ್ಲಿರುವ ತಾಯಿ ಚಂದರ್ ಮೆಹ್ತಾ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಿದ್ದು ಏನು?

ಪ್ರತಿದಿನ ರಿಷಬ್​ ತನ್ನ ಪೋಷಕರೊಂದಿಗೆ ಜಗಳವಾಡುತ್ತಿದ್ದ ಎಂದು ಆತನ ಸಹೋದರ ಮಯಾಂಕ್​ ಆರೋಪಿಸಿದ್ದಾನೆ. ನಿನ್ನೆ ನಾನು ಮಾರ್ಕೆಟ್​ಗೆ ಹೋಗಿದ್ಧಾಗ ರಿಷಬ್​ ಈ ಕೃತ್ಯ ಎಸಗಿದ್ದಾನೆ ಎಂದು ಸಹೋದರ ಆರೋಪ ಮಾಡಿದ್ಧಾನೆ. ‘ಘಟನೆ ನಡೆದಾಗ ನಾನು​ ಮಾರ್ಕೆಟ್​ಗೆ ಹೋಗಿದ್ದೆ. ಬಳಿಕ ಆತನ ಚಿಕ್ಕಪ್ಪ ಫೋನ್​ ಮಾಡಿ ಮನೆಯಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿದರು. ರಿಷಬ್​ ನಿನ್ನ ತಂದೆ-ತಾಯಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಅವರು ಹೇಳಿದರು. ತಕ್ಷಣ ನಾನು ಮನೆಗೆ ತೆರಳಿ ರಿಷಬ್​ನನ್ನು ತಡೆಯಲು ಯತ್ನಿಸಿದೆ. ಆದರೆ ಅವನು ನನಗೂ ಚಾಕುವಿನಿಂದ ಇರಿದ. ಇದರಿಂದ ನನ್ನ ಕೈಗೆ ಪೆಟ್ಟಾಗಿದೆ,” ನಂತರ ನಾನು ಬಿಡಿಸಿ ಅಪ್ಪ-ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ಅಲ್ಲಿನ ವೈದ್ಯರು ಅಪ್ಪ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಅಮ್ಮನಿಗೆ ಗಂಭೀರಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಯಾಂಕ್ ಹೇಳಿದ್ದಾನೆ. ಹೊಟ್ಟೆ, ಕುತ್ತಿಗೆ ಮತ್ತು ಎದೆ ಭಾಗದಲ್ಲಿ ತೀವ್ರವಾಗಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Also read: ಸಣ್ಣ ವಿಚಾರಕ್ಕೆ ಜಗಳವಾಡಿ ಗಂಡನ ಮನೆ ಬಿಟ್ಟು ಬಂದಿದ್ದ ಹೆಂಡತಿಯನ್ನು ಸಂಸಾರ ಮಾಡಲು ಕರೆದಿದ್ದಕ್ಕೆ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಹೆಂಡತಿ.!

ಈ ಸಂಬಂಧ ಮಯಾಂಕ್ ತನ್ನ ಸಹೋದರನ ವಿರುದ್ಧ ದೂರು ನೀಡಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಅದಕ್ಕಾಗಿ ಮಕ್ಕಳನ್ನು ಆಸೆಯಿಂದ ಬೆಳಸುವುದಕ್ಕಿಂತ ಪ್ರೀತಿಯಿಂದ ಬೆಳಸಬೇಕು ಇಲ್ಲದಿದ್ದರೆ ಸಮಾಜಕ್ಕೆ ಅವರೇ ರೌಡಿಗಳಾಗುತ್ತಾರೆ. ಒಟ್ಟಾರೆಯಾಗಿ ಜನ್ಮ ನೀಡಿ ಸಾಕಿದ ಪಾಲಕರು ಮಕ್ಕಳಿಂದಲೇ ಸಾಯುವುದು ಅಮಾನವೀಯ.