ಜಿಮ್-ಗಳಲ್ಲಿ ಬಾಡಿ ಬಿಲ್ಡಿಂಗ್ ಮಾಡಲು ಟ್ರೈನರ್-ಗಳ ಮಾತು ಕೇಳಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ, ಅದರಿಂದ ನಿಮ್ಮ ಪುರುಷತ್ವಕ್ಕೇ ಕುತ್ತು ಬಂದೀತು!!

0
339

ಹದಿ ಹರೆಯದ ಯುವಕ- ಯುವತಿಯರಲ್ಲಿ ಆಕರ್ಷಕ ದೇಹವನ್ನು ಹೊಂದಬೇಕು ಎನ್ನುವ ಮನೋಭಾವನೆ ಪ್ರತಿಯೋಬ್ಬರಲ್ಲಿವೂ ಇರುತ್ತೆ ಅದಕ್ಕಾಗಿ ತಾಲೀಮು, ಜಿಮ್ ಸೇರಿಕೊಂಡು ಕಟ್ಟಮಸ್ತಾದ ಮೈ ಬೆಳೆಸಿಕೊಳ್ಳುವುದು ಈಗಿನ ಟ್ರೆಂಡ್ ಆಗಿದೆ. ಕೆಲವರಂತೂ ಅದರಲ್ಲಿ ಕೆಲವರಂತೂ ಬೇಗನೆ ಮೈ ಬೆಳೆದು ಬಾಡಿ ಬಿಲ್ಡ್ ಮಾಡಿಕೊಳ್ಳಲು ಹಲವು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಇದನ್ನೇ ಬಂಡವಾಳ ಮಾಡಿಕೊಂಡು ಹಲವು ಕಂಪನಿಗಳು ಅಪಾಯಕಾರಕ ಸ್ಟಿರಾಯ್ಡ್ ಮಾರಾಟ ಮಾಡುತ್ತಿವೆ. ಇಂತಹದೆ ಒಂದು ಘಟನೆ ರಾಜಧಾನಿಯಲ್ಲಿ ನಡೆದಿದ್ದು ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ನೀಡಿದ ಜಿಮ್ ಟ್ರೈನರ್ ಜೈಲು ಸೇರಿದ್ದಾನೆ.

Also read: ವಾಸ್ತು ಹೇಳುವ ಜ್ಯೋತಿಷಿಗಳನ್ನು, ಕರೆಸುವ ಮುನ್ನ ಎಚ್ಚರ; ಆಪ್ತಮಿತ್ರ ಸಿನಿಮಾ ಕತೆ ಕಥೆಕಟ್ಟಿ ಯುವತಿಯ ಹೆಸರಲ್ಲಿ 30 ಲಕ್ಷ ವಂಚನೆ ಮಾಡಿದ ಸ್ವಾಮೀಜಿ..

ಹೌದು ಜಿಮ್ ಮಾಡುವುದರಿಂದ ಹಲವು ಸೈಡ್ ಎಫೆಕ್ಟ್ ಇವೆ ಎನ್ನುವುದು ಹಲವರ ಅನುಭವವಾದರೆ ಇನ್ನೂ ಬೇಗನೆ ದೇಹ ಬೆಳಸಿಕೊಳ್ಳಲು ತೆಗೆದುಕೊಳ್ಳುವ ಹಲವು ಮಾತ್ರೆ, ಪೌಡರ್- ಗಳು ಪುರುಷರಿಗೆ ಅಪಾಯಕಾರಿ ಎನ್ನುವುದು ಅಷ್ಟೇ ಪಕ್ಕಾ ಎನ್ನುವುದು ಸಾಭಿತಾಗಿದೆ. ಇಂತಹದೆ ಔಷಧಿಯನ್ನು ನೀಡಿ ಜಿಮ್‍ಗೆ ತೆರಳುವವರ ಜೀವನವನ್ನೇ ಹಾಳು ಮಾಡುತ್ತಿದ್ದ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಇದು ನಡೆದಿದ್ದು ನಗರದ ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಜಿಮ್ ತರಬೇತುದಾರ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈತ ಜಿಮ್‍ಗೆ ಬರುವವರಿಗೆಲ್ಲ ಹಾನಿಕಾರಕ ಔಷಧಿ ಸ್ಟಿರಾಯ್ಡ್ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಇದರ ಮೇಲೆ ಅನುಮಾನಗೊಂಡ ಪೊಲೀಸರು ಆಗಸ್ಟ್ 21ರಂದು ಜಿಮ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಜಿಮ್‍ನಲ್ಲಿ ಹಲವು ಸ್ಟಿರಾಯ್ಡ್ ಔಷಧಿಯ ಬಾಕ್ಸ್ ಗಳು ಪತ್ತೆಯಾಗಿದ್ದವು. ಈ ದಾಳಿಯ ವೇಳೆ ದೇಹವನ್ನು ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‍ಗಳ ಜೊತೆಗೆ ಕೆಲವು ಪ್ರೊಟೀನ್ ಬಾಟಲ್‍ಗಳು ಸಹ ಪತ್ತೆಯಾಗಿವೆ. ಆನ್‍ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಳ್ತಿದ್ದ ಆರೋಪಿ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಈ ಭಯಾನಕ ಔಷಧಿಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗಲಿದೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಜಪ್ತಿಯಾದ ಔಷಧಗಳ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Also read: ಹೇರ್ ಫಾಲ್ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ; ಸ್ವಲ್ಪ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಕುತ್ತು, ಯಾಕೆ ಅಂತ ಈ ಮಾಹಿತಿ ನೋಡಿ.!

ಅದಕ್ಕಾಗಿ ಒಂದೇ ವಾರದಲ್ಲಿ ದಪ್ಪವಾಗುವ, ಬಾಡಿ ಬಿಲ್ಡ್ ಆಗುವ ಔಷಧಿಗಳನ್ನು ಆನ್ಲೈನ್ ಸೇರಿದಂತೆ ಇತರೆ ವ್ಯಕ್ತಿಗಳಿಂದ ಪಡೆದುಕೊಳ್ಳುವಾಗ ಎಚ್ಚರ ವಹಿಸುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಆರೋಗ್ಯದ ಜೊತೆಗೆ ಪುರುಷತ್ವವನ್ನು ಕಳೆದುಕೊಳ್ಳುವ ಸ್ಥಿತಿ ಬರುವುದರಲ್ಲಿ ಅನುಮಾನವಿಲ್ಲ.