ಬಿಗ್ ಬ್ರೇಕಿಂಗ್ ಅಂಗವಿಕಲ ಮಾಸಾಶನ, ವೃದ್ದಾಪ್ಯ ವೇತನವನ್ನು ಎರಡರಷ್ಟು ಹೆಚ್ಚಿಸಿದ ಸಿಎಂ ಕುಮಾರಸ್ವಾಮಿ..

0
363

ಗ್ರಾಮ ವಾಸ್ತವ್ಯದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತಿಯೊಂದು ಹಳ್ಳಿಯಲ್ಲೂ ಜನರ ಕಷ್ಟ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಬಡಜನರಿಗೆ ಹಲವು ಬಗೆಯ ಸಹಾಯ ಮಾಡುತ್ತಿದ್ದಾರೆ. ಈ ಗ್ರಾಮ ವಾಸ್ತವ್ಯದಿಂದ ಹಲವರು ಏನೇ ಮಾತನಾಡಿದರು ತಲೆ ಕೆಡಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಮಾನವಿತೆಯ ದೃಷ್ಟಿಯಿಂದ ಹಲವು ಹೊಸ ಯೋಜನೆಯನ್ನು ಮತ್ತು ಭರವಸೆಗಳನ್ನು ನೀಡುತ್ತಿದ್ದಾರೆ. ಅದರಂತೆ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಸುಮಾರು 49 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡುತ್ತಿರುವ ಸಿಎಂ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಸಿಎಂ ವೃದ್ದಾಪ್ಯ ವೇತನವನ್ನು 1000 ರಿಂದ ಎರಡು ಸಾವಿರಕ್ಕೆ ಹಾಗೂ ಅಂಗವಿಕಲರ ಮಾಸಾಶನವನ್ನು 2500 ವರೆಗೆ ಏರಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಹೌದು ಅಂಗವಿಕಲರಿಗೆ ಮತ್ತು ವೃದ್ದರಿಗೆ ನೀಡುತ್ತಿರುವ ಸಹಾಯ ಧನ ಸಾಕಾಗುತ್ತಿಲ್ಲ, ಎನ್ನುವ ಹಲವು ಬೇಡಿಕೆಗಳು ಹಲವು ದಿನಗಳಿಂದ ನಡೆಯುತ್ತಾನೆ ಇತ್ತು ಅದಕ್ಕೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಯಚೂರಿನ ಕರೆಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ವೃದ್ದಾಪ್ಯ ವೇತನವನ್ನು 1000 ರಿಂದ ಎರಡು ಸಾವಿರಕ್ಕೆ ಮತ್ತು ಅಂಗವಿಕಲರ ಮಾಸಾಶನವನ್ನು 2500 ವರೆಗೆ ಹೆಚ್ಚಳ ಮಾಡಲಾಗುತ್ತದೆ. ಇದು ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದಿದ್ದಾರೆ.

Also read: ಗ್ರಾಮ ವಾಸ್ತವ್ಯದಲ್ಲಿ ಸಿಎಂ ದರ್ಪ; ಮೋದಿಗೆ ವೋಟ್‌ ಹಾಕಿ ನಮ್‌ ಹತ್ರ ಸಮಸ್ಯೆ ಹರಿಸಲು ಬರ್ತೀರಾ, ನಿಮಗೆಲ್ಲಾ ಲಾಠಿ ಚಾರ್ಜ್‌ ಮಾಡಿಸ್ಬೇಕಾ ಎಂದ ಕುಮಾರಸ್ವಾಮಿ..

ಅದರಂತೆ ಕೃಷಿ ಅಭಿವೃದ್ಧಿಗೆ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದು, ಕೃಷಿಕರು ಸುಸ್ಥಿರ ಬದುಕು ರೂಪಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದ ಅವರು, ಎನ್ ಪಿಎಸ್ ನೌಕಕರ ನೋವು ನನಗೆ ಅರ್ಥವಾಗಿದ್ದು, ಎನ್ ಪಿಎಸ್ ರದ್ದು ಮಾಡಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗಿದ್ದು, ವರದಿ ಬಂದ ತಕ್ಷಣ ತಮ್ಮನ್ನು ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಮೊದಲು ಹಿರಿಯ ನಾಗರಿಕರಿಗೆ ಇದ್ದ 600ಮಾಸಾಶನವನ್ನು‌1 ಸಾವಿರಕ್ಕೆ ಹೆಚ್ಚಿಸಿದ್ದೆ. ಈಗ ಅದನ್ನು 2 ಸಾವಿರಕ್ಕೆ ಹಾಗೂ ವಿಕಲಚೇತನರೂ ನೆಮ್ಮದಿಯಿಂದ ಇರಬೇಕು ಎಂಬ ದೃಷ್ಟಿಯಿಂದ ಅವರ ಮಾಸಾಶನವನ್ನು 2500ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

Also read: ವಾಹನ ಸವಾರರೆ ಎಚ್ಚರ; ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಬಿಳ್ಳಲಿದೆ ಲಕ್ಷ ಲಕ್ಷ ದಂಡ!..

ಇವರ ಈ ಅಭಿವೃದ್ದಿಯನ್ನು ಸಹಿಸದ ಪತ್ರಿಪಕ್ಷಗಳು ರೈತರ ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಅನಗತ್ಯ ಟೀಕೆ ಮಾಡುತ್ತಿವೆ. ಇವರು ಬರಿ ರಾಜಕೀಯ ದ್ವೇಷವನ್ನು ಬೆಳೆಸುತ್ತಿದ್ದಾರೆ ಎನ್ನುವ ರೀತಿಯಲ್ಲಿ ಸಿಎಂ ತಮ್ಮ ಶೈಲಿಯಲ್ಲಿಯೇ ಚಾಟಿ ಬಿಸಿದ ಸಿಎಂ ರಾಯಚೂರು ಜಿಲ್ಲೆಯಲ್ಲಿ 272.22ಕೋಟಿ ರೂ. ರೈತರ ಸಾಲಮನ್ನಾಗೆ ಇದುವರೆಗೆ ರಾಯಚೂರು ಜಿಲ್ಲೆಗೆ ಸಂದಾಯ ಮಾಡಲಾಗಿದೆ ಎಂದು ಹೇಳಿದರು. ಪ್ರಾಮಾಣಿಕವಾಗಿ ರೈತರ ಸಾಲಮನ್ನಾಗೆ ಹಾಗೂ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿರುವುದಾಗಿ ತಿಳಿಸಿದ ಸಿಎಂ ಕುಮಾರಸ್ವಾಮಿ ಅವರು ರೈತರ ಸಾಲಮನ್ನಕ್ಕಾಗಿ ಒಂದು ವರ್ಷದಲ್ಲಿಯೇ 25ಸಾವಿರ ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ಬಡ ಜನರಿಗೆ ಅನುಕೂಲವಾದರೆ ಸಾಕು ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.