ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸೆಕ್ಸ್ ಫಿಲಂ ಹೀರೋ? ಬ್ಲೂ ಫಿಲಂ ಹೀರೋಯಿನ್ ಯಾರೆಂದು ಗೊತ್ತು, ಹೆಚ್. ವಿಶ್ವನಾಥ್ ವಿರುದ್ಧ ಸಾ.ರಾ. ಮಹೇಶ್ ಹೇಳಿಕೆ.!

0
1411

ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಒಬ್ಬ ಅತೃಪ್ತ ಪ್ರೇತಾತ್ಮ. ಒಬ್ಬ ಬ್ಲೂ ಬಾಯ್!​ ಇವನು ಸೆಕ್ಸ್ ಫಿಲಂ ಹೀರೋ, ಹೀರೋಯಿನ್ ಜೊತೆ ಮಾತಾಡಿದ್ದಕ್ಕೆ ದಾಖಲೆ ಇದೆ ಎಂದು ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದು ಭಾರಿ ವೈರಲ್ ಆಗಿದೆ. ಇವೆಲ್ಲ ಮಾತುಗಳ ಹಿಂದೆ ಬಹುದಿನಗಳಿಂದ ಹೆಚ್. ವಿಶ್ವನಾಥ್ ಮತ್ತು ಸಾ.ರಾ. ಮಹೇಶ್ ಇಬ್ಬರ ನಡುವೆ ನಡೆಯುತ್ತಿರುವ ವಯಕ್ತಿಕ ವಿಚಾರಗಳೆ ಕಾರಣವಾಗಿದ್ದು. ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ ಸಾ.ರಾ. ಮಹೇಶ್ ಬಾಂಬ್ ಸಿಡಿಸಿದ್ದಾರೆ.

Also read: ಉಪ ಚುನಾವಣೆ ಸಿದ್ದವಾದ ಕಾಂಗ್ರೆಸ್; 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ, ಯಾವ ಕ್ಷೇತ್ರಕ್ಕೆ ಯಾರು ಪ್ರಭಾವಿ ಅಭ್ಯರ್ಥಿ??

ಹೌದು ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ. ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿ ಕೊಳ್ಳುತ್ತೀರಾ ಹೆಚ್. ವಿಶ್ವನಾಥ್ ಒಬ್ಬ ಅತೃಪ್ತ ಪ್ರೇತಾತ್ಮ. ತನ್ನ ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆ ಅತೃಪ್ತ ಪ್ರೇತಾತ್ಮ ನಿನ್ನೆ ಸುದ್ದಿಗೋಷ್ಠಿ ಮಾಡಿದೆ. ರಾಜ್ಯದ ಜನರು ಪ್ರವಾಹದ ನೀರಿನಲ್ಲಿ ಮುಳುಗಿದಾಗ ಅವರು ಏನು ಮಾಡುತ್ತಿದ್ದರು? ಧೈರ್ಯವಿದ್ದರೆ ನನ್ನ ಮೇಲಿನ ಆರೋಪ ನಿಜವೆಂದು ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮೈಸೂರಿನಲ್ಲಿ ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ.

ಇವೆಲ್ಲ ವಿಚಾರಗಳ ಹಿಂದೆ ನಿನ್ನೆಯಷ್ಟೇ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಕೆಲವರ ಆಸ್ತಿ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ 200 ಪಟ್ಟು ಹೆಚ್ಚಾಗಿದೆ. ನಾನು ಇಷ್ಟು ವರ್ಷಗಳಿಂದ ರಾಜಕೀಯದಲ್ಲಿದ್ದರೂ ಆಸ್ತಿ ಮಾರಿ ಸಾಲ ಮಾಡಿಕೊಂಡಿದ್ದೇನೆ ಎಂದು ಪರೋಕ್ಷವಾಗಿ ಶಾಸಕ ಸಾ.ರಾ. ಮಹೇಶ್ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಮಹೇಶ್ ಹೆಚ್​. ವಿಶ್ವನಾಥ್​ ಒಬ್ಬ ಬ್ಲೂ ಬಾಯ್​.​ ಬ್ಲೂ ಫಿಲಂ ಹೀರೋ ಹೆಚ್​. ವಿಶ್ವನಾಥ್​. ಅದರ ಹೀರೋಯಿನ್ ಯಾರೆಂದು ಕೂಡ ನಮಗೆ ಗೊತ್ತು. ಅವರೆಂತಹ ಕೊಚ್ಚೆಗುಂಡಿ ಅಂತ ಎಲ್ಲರಿಗು ಗೊತ್ತು. ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ನಂತರ ಹೆಚ್​. ವಿಶ್ವನಾಥ್​ ಹೋಗಿ ಹುಚ್ ವಿಶ್ವನಾಥ್ ಆಗಿದ್ದಾರೆ. ಆದಷ್ಟು ಬೇಗ ಅವರನ್ನು ನಿಮಾನ್ಸ್​ಗೆ ಸೇರಿಸಬೇಕು ಎಂದು ಹೇಳಿಕೆ ನೀಡಿ.

Also read: ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪರಿಸರ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿ ಸರಳತೆ ಮೆರೆದ ನರೇಂದ್ರ ಮೋದಿಯವರ ವೀಡಿಯೋ ಭಾರಿ ವೈರಲ್.!

25 ಲಕ್ಷ ದುಡ್ಡು ಪಡೆದಿದ್ದೇನೆ ಈ ವರ್ಗಾವಣೆ ಮಾಡಿ ಕೊಡಿ ಎಂದು ಅವತ್ತು ಕೇಳಿದರಲ್ಲ. ಅದನ್ನು ನಾನು ಮಾಡಿಸಿ ಕೊಡಲಿಲ್ಲ ಎಂದು ಹೀಗೆ ಮಾತನಾಡುತ್ತಿದ್ದೀರಾ? ನೀವು ವಕೀಲರಾಗಿದ್ದಾಗ ಒಬ್ಬ ವಿಧವೆ ನಿಮ್ಮ ಬಳಿ ನ್ಯಾಯ ಕೇಳೋಕೆ ಬಂದ ಅವರ ಕಥೆ ಏನಾಯ್ತು ಎಂದು ಹೇಳಬೇಕಾ? 1994 ರಲ್ಲಿ ಕೆಆರ್ ನಗರದ ಹಳ್ಳಿಗಳಿಗೆ ನೀವು ಹೋದಾಗ ಮನೆ ಬಾಗಿಲು ಯಾಕೆ ಹಾಕಿ ಕೊಳ್ಳುತ್ತಿದ್ದರು ಅನ್ನೋದು ಹೇಳಬೇಕಾ? ಎಂದು ವಿಶ್ವನಾಥ್ ಅವರನ್ನು ಪ್ರಶ್ನೆ ಮಾಡಿ. ನಾನು ಅವರಿಗಿಂತ ಹೆಚ್ಚು ಏಕವಚನದಲ್ಲಿ ಮಾತಾಡಬಲ್ಲೆ. ಆದರೆ, ನಮ್ಮ ತಂದೆ ಸಂಸ್ಕಾರ ಕಲಿಸಿದ್ದಾರೆ. ಅದಕ್ಕೆ ಆ ರೀತಿ ನಾನು ಮಾತನಾಡುವುದಿಲ್ಲ.

ಹೆಚ್​. ವಿಶ್ವನಾಥ್​ ಅವರಿಗೆ 4 ಎಕರೆ ಜಮೀನಿತ್ತು ಎಂಬುದು ನಮಗೂ ಗೊತ್ತು. ನಾನು ಮಾಡಿದ ವ್ಯಾಪಾರ ಸಾಕಾಗಿಲ್ಲ ಅಂತ ಅದಕ್ಕಿಂತ ದೊಡ್ಡದಕ್ಕೆ ಹೋಗಿದ್ದೀರಾ? ಈ ನನ್ನ ಆರೋಪ ಸುಳ್ಳಾದರೆ ಆಣೆ ಮಾಡೋಕೆ ಯಾಕೆ ಭಯ? ನಿಮ್ಮ ಬಗ್ಗೆ ಏಕವಚನದಲ್ಲಿ ಮಾತಾನಾಡೋದು ಕಷ್ಟವಲ್ಲ. ನೀವು ಹಿರಿಯರು ಅನ್ನೋ ಕಾರಣಕ್ಕೆ ನಾನು ಏಕವಚನದಲ್ಲಿ ಮಾತಾಡಿಲ್ಲ. ಎಂದು ಹೇಳಿದ್ದಾರೆ.