ಹಾಗಲ ಕಾಯಿ ಚಟ್ನಿ ಪುಡಿ ಮಾಡುವ ವಿಧಾನ

0
1397

ಬೇಕಾಗುವ ಸಾಮಾಗ್ರಿಗಳು:

*ಒಣಕೊಬ್ಬತುರಿ – 4 ಕಪ್ಪು

*ಹಾಗಲಕಾಯಿ -1/4 ಕೆ.ಜಿ

*ಬಿಡಿಸಿದ ಕರಿಬೇವಿನ ಎಸಳು –ಒಂದು ದೊಡ್ಡ ಬಟ್ಟಲಿನಷ್ಟು.

*ಉದ್ದಿನ ಬೇಳೆ –ಒಂದು ಕಪ್,

*ಬ್ಯಾಡಗಿ ಮೆಣಸಿನಕಾಯಿ – 25,

*ಹುಣಿಸೆ ಹಣ್ಣು –ದೊಡ್ಡ ನಿಂಬೆಗಾತ್ರ,

*ಬೆಲ್ಲ – 1 ಚೂರು,

*ಇಂಗು –ಕಡಲೇ ಗಾತ್ರ

*ಅರಿಶಿಣ ಸ್ವಲ್ಪ

*ಸಾಸುವೆ -1/2 ಚಮಚ, ಉಪ್ಪು ರುಚಿಗೆ.

ಮಾಡುವ ವಿಧಾನ:

ಹಾಗಲಕಾಯಿಯನ್ನು ತೊಳೆದು ತೆಳ್ಳಗೆ ಸ್ಲೈಸ್ ಮಾಡಿ. ಬಿಸಿಲಿನಲ್ಲಿ ಬಟ್ಟೆಯ ಮೇಲೆ ಹರವಿ ಒಣಗಿಸಿ. ಉದ್ದಿನ ಬೇಳೆಯನ್ನು ಕೆಂಪಗೆ ಹುರಿದಿ ಪುಡಿ ಮಾಡಿ. ಒನಮೆಣಸಿನಕಾಯಿ ಮತ್ತು ಕರಿಬೇವಿನ ಎಸಳಿಗೆ ಸ್ವಲ್ಪ ಎಣ್ಣೆಹಾಕಿ ಗರಿಗರಿಯಾಗುವವರೆಗೆ ಸಣ್ಣ ಉರಿಯ ಮೇಲೆ ಹುರಿಯಿರಿ. ಹುಣಸೆಯನ್ನು ಚೂರು ಮಾಡಿ ಎಣ್ಣೆಯಲ್ಲಿ ಕರಿದುಕೊಳ್ಳಿ. ಒಣಗಿದ ಹಾಗಲಕಾಯಿ ಚೂರುಗಳನ್ನು ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ. ಹುರಿದ ಮೆಣಸಿನಕಾಯಿ, ಉಪ್ಪು ಹುಣಸೆಹಣ್ಣನ್ನು ಮಿಕ್ಸಿಯಲ್ಲಿ ಪುಡಿಮಾಡಿ. ಹುರಿದ ಹಾಗಲಕಾಯಿ, ಒಣಕೊಬ್ಬರಿ ತುರಿಯನ್ನು ಪುಡಿ ಮಾಡಿ, ಉಪ್ಪು ಬೆಲ್ಲ ಹಾಕಿ. ನಂತರ ಎಲ್ಲ ಪುಡಿಗಳನ್ನು ಒಟ್ಟಿಗೆ ಮಿಕ್ಸಿಯಲ್ಲಿ ಬೆರೆಸಿ, ಬಾಣಲೆಯಲ್ಲಿ ಎಣ್ಣೆ, ಸಾಸುವೆ, ಇಂಗು ಒಗ್ಗರಣೆಮಾಡಿ, ನಂತರ ಚಟ್ಟಿಪುಡಿಯನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಬೆರೆಸಿ ಬಾಟಲುಗಳಿಗೆ ತುಂಬಿಸಿಡಿ. ಸಕ್ಕರೆ ಖಾಯಿಲೆ ಇರುವವರು ಈ ಚಟ್ನಿ ಪುಡಿಯನ್ನು ದಿನವೂ ತಿನ್ನಬಹುದು. ಕರೀಬೇವು ಹಾಕುವುದರಿಂದ ಆರೋಗ್ಯಕ್ಕೆ ಒಳ್ಳೆಯದು.