ಹೇರ್ ಸ್ಪಾದಿಂದ ಬಕ್ಕತನ ಸಮಸ್ಯೆಯನ್ನು ನಿವಾರಿಸಿಕೊಳ್ಳಿ

0
544

ಹೇರ್ ಸ್ಪಾವನ್ನು ನಿಮ್ಮ ಮನೆಯಲ್ಲಿಯೇ ಮಾಡಿಕೊಳ್ಳಿ ಬಕ್ಕತನದ ಸಮಸ್ಯೆಯನ್ನು ನಿವಾರಿಸಿಕೊಳ್ಳಿ

ಇದು ಕೂದಲಿಗೆ ಹೊಳಪನ್ನುಂತೂ ನೀಡಿಯೇ ನೀಡುತ್ತದೆ, ಜೊತೆಗೆ ಇದನ್ನು 3 ತಿಂಗಳ ಕಾಲ ಪ್ರತಿವಾರವೂ ಮಾಡಿಸುತ್ತಿದ್ದರೆ ಬಕ್ಕತನದ ಸಮಸ್ಯೆ ಉದ್ಭವಿಸುವುದೇ ಇಲ್ಲ.

*ಬಿಸಿ ನೀರಿನಲ್ಲಿ ಕ್ಲೋನ್ ಆಯಿಲ್ ಹಾಕಿ ಹಾಗೂ ಕೂದಲನ್ನು ಮುಳುಗಿಸಿ, ಬಳಿಕ ಟವಲ್ ನಿಂದ ತಲೆ ಕಟ್ಟಿಕೊಳ್ಳಿ.

*ಈಗ ಒಂದು ಲೋಟದಲ್ಲಿ ರೋಸ್ ವಾಟರ್ ಹಾಕಿಕೊಂಡು ಕೂದಲಿಗೆ ಶಿರೋಧಾರಾ ಕೊಡಿ. ಅಂದರೆ ಲೋಟದಿಂದ ನಿಧಾನವಾಗಿ ಸುರಿಯಿರಿ. ಈ ಪ್ರಕ್ರಿಯೆಯನ್ನು 3-4 ಸಲ ಪುನರಾವರ್ತಿಸಿ. ಇದರಿಂದ ಹೊಟ್ಟಂತೂ ಹೋಗುತ್ತದೆ. ಜೊತೆಗೆ ಕೇಶವರ್ಣ ಸ್ಥಿರವಾಗುತ್ತದೆ. ಈ ನೀರನ್ನು ಕ್ಲೋನ್ ಆಯಿಲ್ ನ ಟಬ್ ನಲ್ಲಿ ಬೀಳಿಸಿ.

*ಒಂದು ಕಪ್ ಬಿಸಿ ಹಾಲುನ್ನು ಲೋಟದಲ್ಲಿ ಹಾಕಿಕೊಳ್ಳಿ ಮತ್ತು ಕೂದಲಿಗೆ ಶಿರೋಧಾರ ಕೊಡಿ. ನಂತರ ಡಬ್ ನಿಂದ ನೀರು ಹಾಕಿಕೊಳ್ಳಿ. ಈ ಪ್ರಕ್ರಿಯೆಯನ್ನು 3-4 ಬಾರಿ ಮಾಡಿ. ತಲೆ ಕೆಳಗೆ ನೀರಿನ ಟಬ್ ಇಟ್ಟಿರಬೇಕು. ಏಕೆಂದರೆ ಹಾಲು ಕೂಡ ಅದೇ ನೀರಿನಲ್ಲಿ ಮಿಶ್ರಣಗೊಳ್ಳಬೇಕು. ಈ ರೀತಿ ಕೂದಲಿಗೆ ನೀರು ಹಾಗೂ ಹಾಲಿನ ಧಾರೆಯನ್ನು 3-4 ಸಲ ಕೊಡಿ.

*ಕೂದಲಿಗೆ ಹೇರ್ ಎಇಪೇರ್ ಕ್ರೀಮ್ ಲೇಪಿಸಿ. ಇದು ತುಂಡಾದ ಕೂದಲು ಮತ್ತು ಹೊಟ್ಟು ಉಂಟಾಗದಂತೆ ತಡೆಯುತ್ತದೆ.

*ನೀರಿನಿಂದ 2-3 ಚಮಚ ಹೇರ್ ಟಾನಿಕ್ ಹಾಗೂ ಅಷ್ಟೇ ಪ್ರಮಾಣದಲ್ಲಿ ಕುದಿಸಿ ಆರಿಸಿದ ಹೇರ್ ಆಯಿಲ್ ಹಾಕಿ.

*ಈಗ ಪಾತ್ರೆಯೊಂದರಲ್ಲಿ ಟಬ್ ನಲ್ಲಿನ ನೀರನ್ನು ತುಂಬಿಕೊಂಡು ಸುಮಾರು 20 ನಿಮಿಷಗಳ ಕಾಲ ತಲೆ ಮೇಲೆ (ಕೂದಲನ್ನು ಅತ್ತಿತ್ತ ಸರಿಸುತ್ತ) ಸುರಿಯುತ್ತಾ ಇರಿ.

*ಮೊಸರು ಇಲ್ಲವೆ ಟೋನರ್ ನಲ್ಲಿ ಹೇರ್ ಪ್ಯಾಕ್ ಮಿಶ್ರಣ ಮಾಡಿಕೊಳ್ಳಿ. ಸಾಧ್ಯವಾದರೆ ಮೊಸರಿನಲ್ಲಿ ಪಂಚಗಂಧಾ ಆಯಿಲ್ ಹಾಕಿಕೊಳ್ಳಿ.

*ಈಗ ಶ್ಯಾಂಪೂವಿನಿಂದ ಕೂದಲು ತೊಳೆದುಕೊಳ್ಳಿ.