ಹಜ್ಜ್ ಯಾತ್ರಾರ್ಥಿಗಳ ಸೇವೆಗೆ ಐಎಫ್ಎಫ್ ಕಾರ್ಯಕರ್ತರು ಸಿದ್ಧ

0
761

ಅರೇಬಿಯಾ ಜಿದ್ದಾ : ಹಜ್ಜ್ ಸಂದರ್ಭದಲ್ಲಿ ಯಾತ್ರಾರ್ಥಿಗಳ ಸೇವೆಗೈಯ್ಯಲು ಭಾರತೀಯ ಸಮಾಜ ಕಲ್ಯಾಣ ಸಂಘಟನೆ ಇಂಡಿಯನ್ ಫೆಟರ್ನಿಟಿ ಫೋರಂ(ಐಎಫ್‌ಎಫ್)ನ ಪರಿಣಿತ 1000 ಕಾರ್ಯ ಕರ್ತರು ಸನ್ನದ್ಧರಾಗಿದ್ದಾರೆ ಎಂದು ಹಜ್ಜ್ ಸ್ವಯಂ ಸೇವೆಯ ಸಂಯೋಜಕರಾದ ಅಬ್ದುಲ್ ಘನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತೀಯ ಮೂಲದ ಸ್ವಯಂ ಸೇವಕರನ್ನು ಹೊಂದಿರುವ ಮತ್ತು ವಿವಿಧ ಭಾಷೆಗಳನ್ನು ಮಾತ ನಾಡುವ ಭಾರತೀಯರು ಸೌದಿ ಅರೆಬಿಯಾದಲ್ಲಿ ಭಾರತದಿಂದ ಬರುವ ಮೊಟ್ಟಮೊದಲ ವಿಮಾನ ದಿಂದ ಹಿಡಿದು ಯಾತ್ರಾರ್ಥಿಗಳು ಅಲ್ಲಿಂದ ಹಿಂದಿರುಗುವವರೆಗೂ ತಮ್ಮ ಸೇವೆಯನ್ನು ಒದಗಿಸಲಿ ದ್ದಾರೆ.

ಮಕ್ಕಾ ಮತ್ತು ಮದೀನಾಗಳಲ್ಲಿ ವೇದಿಕೆಯ ಸ್ವಯಂ ಸೇವಕರು ಯಾತ್ರಾರ್ಥಿಗಳನ್ನು ಸ್ವಾಗತಿಸಿ ವೃದ್ಧರು ಮತ್ತು ಅಶಕ್ತರಿಗೆ ಬಸ್‌ಗಳು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸಲಿದ್ದಾರೆ. ಗಾಲಿ ಕುರ್ಚಿ ವ್ಯವಸ್ಥೆ, ನೀರಿನ ವ್ಯವಸ್ಥೆ, ಲಗೇಜ್ ಮತ್ತು ಇತರ ಸಾಮಗ್ರಿಗಳನ್ನು ಸಾಗಿಸುವ ವ್ಯವಸ್ಥೆಗಳನ್ನೂ ಮಾಡಲಿದ್ದಾರೆ.

ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೇವೆ ಒದಗಿಸಲು ಸ್ವಯಂ ಸೇವಕರು ಹಜ್ಜ್ ಸಮಿತಿ ಮತ್ತು ವೈದ್ಯಕೀಯ ತಂಡದೊಂದಿಗೆ ಸಮನ್ವಯಕಾರರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಪಿ.ಕೆ. ಮುಹಮ್ಮದ್ ಬಶೀರ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮೊರಯೂರ್, ಹೊಸದಿಲ್ಲಿ ವಿಭಾಗದ ಅಧ್ಯಕ್ಷ ಹಬೀಬುಲ್ಲಾ, ತಮಿಳುನಾಡು ವಿಭಾಗದ ಅಧ್ಯಕ್ಷ ಶೇಕ್ ಬಶೀರ್, ಕರ್ನಾಟಕ ವಿಭಾಗದ ಕಾರ್ಯದರ್ಶಿ ಹಾರಿಸ್, ಇ.ಎಂ.ಅಬ್ದುಲ್ಲಾ, ಕಬೀರ್ ಉಪಸ್ಥಿತರಿದ್ದರು.

ಹಜ್ಜ್ ಯಾತ್ರಾರ್ಥಿಗಳಿಗಾಗಿ ನಕ್ಷೆ:

ಭಾರತೀಯ ಹಜ್ಜ್ ಯಾತ್ರಾರ್ಥಿಗಳಿಗೆ ನೆರವಾಗುವುದಕ್ಕಾಗಿ ಮಕ್ಕಾ ಹಾಗೂ ಆಝೀಝಿಯಗಳಲ್ಲಿ ಇರುವ ಯಾತ್ರಾರ್ಥಿಗಳ ವಸತಿ ಪ್ರದೇಶವನ್ನೋಳಗೊಂಡ ಸಂಪೂರ್ಣ ನಕ್ಷೆಯೊಂದನ್ನು ಇಂಡಿಯಾ ಫ್ರೆಟರ್ನಿಟಿ ಫಾರಂ ಸಿದ್ದಪಡಿಸಿದೆ. ಮೀನಾದ ಟೆಂಟ್ ಸಿಟಿಯ ತಾಜಾ ನಕ್ಷೆಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಮೀನಾ ಟೆಂಟ್ ಲೊಕೇಟರ್ ಆ್ಯಪ್;

ಕಳೆದ ವರ್ಷ ಇಂಡಿಯಾ ಫ್ರೆಟರ್ನಿಟಿ ಫಾರಂ ಮೀನಾ ದಲ್ಲಿ ಟೆಂಟ್ ಗಳನ್ನು ಪತ್ತೆಹಚ್ಚುವುದಕ್ಕಾಗಿ ಆ್ಯಂಡ್ರಾಯಿಡ್ ಆಧಾರಿತ ಆ್ಯಪ್ ಆಝೀಝಿಯಾ ವಸತಿ ಪ್ರದೇಶ ಮತ್ತು ಮೀನಾದ ಇಡೀ ಟೆಂಟ್ ಸಿಟಿಯನ್ನು ಒಳಗೊಳ್ಳಲಿದ್ದು, ಹಾಜಿಗಳಿಗೆ ತಮ್ಮ ಸ್ಥಳಗಳಿಗೆ ತಮ್ಮ ಸ್ಥಳಗಳಿಗೆ ಅಥವಾ ವಸತಿ ಕಟ್ಟಡಗಳಿಗೆ ಸುಲಭವಾಗಿ ತಲುಪಲು ನೆರವಾಗಲಿದೆ.

ಮುದಸ್ಸಿರ್ (ಕೋ-ಆರ್ಡಿನೇಟರ್), ಫೈಝಲ್.ಟಿ (ಅಸಿಸ್ಟೆಂಟ್ ಕೋ-ಆರ್ಡಿನೇಟರ್). ಮುಜೀಬುರ್ರಹಮಾನ್ (ಸ್ವಯಂ ಸೇವಕ ನಾಯಕ). ಇಸ್ಮಾಯಿಲ್ (ಸಹ ನಾಯಕ) ಇವರ ನೇತೃತ್ವದಲ್ಲಿ ಸಂಪೂರ್ಣ ಕಾರ್ಯಚರಣೆಯು ಸಂಯೋಜಿಸ್ಪಡಲಿದೆ.