ಹೆಚ್ ಎಎಲ್ ಅಸಿಸ್ಟೆಂಟ್ ಮತ್ತು ಆಪರೇಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
1750

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಸಿಸ್ಟೆಂಟ್ & ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 13,2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: BSNL ಜ್ಯೂನಿಯರ್ ಟೆಲಿಕಾಮ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: (Name Of The Posts): ಅಸಿಸ್ಟೆಂಟ್ ಮತ್ತು ಆಪರೇಟರ್

ಸಂಸ್ಥೆ (Organisation): ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್

ವಿದ್ಯಾರ್ಹತೆ (Educational Qualification): (Mcom,Diploma,ITI); ಅಸಿಸ್ಟೆಂಟ್ (Admin/Accounts): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿರುವುದರ ಜೊತೆಗೆ PC ಆಪರೇಶನ್ಸ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ ಪ್ರಮಾಣಪತ್ರಗಳನ್ನು ಹೊಂದಿರಬೇಕು.

ಅಸಿಸ್ಟೆಂಟ್ (Q.C./Inspection)(commercial): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣದ ಯಾವುದೇ ಮಂಡಳಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷಗಳ ನಿಯಮಿತ/ ಪೂರ್ಣ ಕಾಲಿಕ ಡಿಪ್ಲೋಮ ಅನ್ನು ಮಾಡಿರಬೇಕು.

ಅಸಿಸ್ಟೆಂಟ್ (civil works): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣದ ಯಾವುದೇ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷದ ನಿಯಮಿತ/ಪೂರ್ಣ ಕಾಲಿಕ ಡಿಪ್ಲೋಮಾವನ್ನು ಮಾಡಿರಬೇಕು.

ಆಪರೇಟರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿಯ ನಂತರ ಫಿಟ್ಟರ್/ ಇಲೆಕ್ಟ್ರೀಶಿಯನ್/ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ನಲ್ಲಿ ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೇಟ್ + 2 ವರ್ಷಗಳ ನಿಯಮಿತ/ಪೂರ್ಣಕಾಲಿಕ ಐಟಿಐ ಅನ್ನು ಮಾಡಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿ ಶುಲ್ಕದ ವಿವರವನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ಅರ್ಜಿಸಲ್ಲಿಸುವ ಪ್ರಕ್ರಿಯೆ:

Step 1: ಮೊದಲು ಅಧಿಕೃತ ವೆಬ್ ಸೈಟ್ https://hal-india.co.in/ ಗೆ ಭೇಟಿ ಕೊಡಿ
Step 2: ನಂತರ career section ಮೇಲೆ ಕ್ಲಿಕ್ ಮಾಡಿ
Step 3: ತದನಂತರ “HAL Recruitment 2019 For Assistant & Operator Posts” ಹುದ್ದೆಯ ಬಗೆಗೆ ಕಾಣಸಿಗುತ್ತದೆ.
Step 4: ನಂತರ ಅರ್ಜಿಯನ್ನು ಭರ್ತಿ ಮಾಡಿ
Step 5: ಅರ್ಜಿ ಶುಲ್ಕ ಪಾವತಿಸಿ
Step 6:ಎಲ್ಲವೂ ಪೂರ್ಣಗೊಳಿಸಿದ ನಂತರ ಮೇಲೆ ಕ್ಲಿಕ್ ಮಾಡಿ, ಕೊನೆಯಲ್ಲಿ ಅರ್ಜಿಯನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

ಹೆಚ್ಚಿನ ಮಾಹಿತಿಗಾಗಿ: https://hal-india.co.in/ ಕ್ಲಿಕ್ ಮಾಡಿ.