ಅರಿಶಿನದ ಈ ಉಪಯೋಗಗಳು ಗೊತ್ತಾದ್ರೆ ಚಿಕ್ಕ ಪುಟ್ಟುದಕ್ಕೆಲ್ಲ ಡಾಕ್ಟರ ಹತ್ರ ಹೋಗೋದು ನಿಲ್ಲಿಸ್ತೀರಾ!!!!

0
2484

ಅರಿಶಿನವು ಮಸಾಲೆ ಸಾಂಬಾರಪದಾರ್ಥವು.. ಶುಭ ಕಾರ್ಯಗಳಲ್ಲಿ ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಅರಿಶಿನವು ಕಟು- ಕಹಿ, ಉಷ್ಣಕಾರಿ, ಶೋಧಕ ಗುಣವುಳ್ಳದ್ದು, ಮೈ ಚರ್ಮವನ್ನು ಸುಂದರವಾಗಿರಿಸುವುದು.

೧) ಗಂಟಲು ನೋವು, ಗಂಟಲು ಬಾವುಗಳಿಗೆ:

ಅರ್ಧ ಚಮಚ ಶುದ್ಧ ಅರಿಶಿನಪುಡಿಯನ್ನು ಸ್ವಲ್ಪ ಬೆಲ್ಲ ಹಾಗು ಹಾಲಿಗೆ ಬೆರೆಸಿ ಕಾಯಿಸಿ ಚೆನ್ನಾಗಿ ಪೇಸ್ಟಿನಂತೆ ಅರೆದು ಕೊಳ್ಳಬೇಕು. ಈ ಮಿಶ್ರಣವನ್ನು ಗಂಟಲಿನ ಬಾಗಕ್ಕೆ ಹಚ್ಚಿಕೊಂಡಲ್ಲಿ ಗಂಟಲು ನೋವು ಗುಣವಾಗುತ್ತದೆ.

೨) ಕೆಮ್ಮು ನೆಗಡಿ ಉಸಿರಾಟದ ತೊಂದರೆ , ಗಂಟಲಲ್ಲಿ ಕೆರೆತಗಳಿಗೆ:

ಶುದ್ಧ ಅರಿಶಿನ ಪುಡಿಯನ್ನು ಅರ್ಧ ಕಪ್ಪು ಹಾಲಿನಲ್ಲಿ ಕಾಯಿಸಿ ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ದಿನದಲ್ಲಿ ಎರಡು ಬಾರಿ ಕುಡಿಯಬೇಕು.

೩) ಕಾಮಾಲೆಗೆ :

ಶುದ್ಧ ಅರಿಶಿನ ಪುಡಿ ಅರ್ಧ ಚಮಚ ಒಂದು ಲೋಟ ಮಜ್ಜಿಗೆಗೆ ಬೆರಿಸಿ ಬೆಳಿಗ್ಗೆ ಕಾಳಿ ಹೊಟ್ಟೆಯಲ್ಲಿ ಸತತ ಏಳು ದಿನ ಸೇವಿಸಿದಲ್ಲಿ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

೩) ಕುರುಗಳು ಒಡೆಯಲು:

ಹರಳೆಣ್ಣೆಯಲ್ಲಿ ಅರಿಶಿನ ಪುಡಿಯನ್ನು ಕಲಿಸಿ ಬಿಸಿ ಮಾಡಿ ಕುರುಗಳಿಗೆ ಹಚ್ಚಬೇಕು . ದಿನದಲ್ಲಿ ಎರಡು ಬಾರಿ ಲೇಪಿಸುವುದರಿಂದ ಕುರುಗಳು ಒಡೆಯುತ್ತವೆ.

೪) ಉಗುರು ಸುತ್ತಿಗೆ :

ಅರಿಶಿನ ಪುಡಿ, ಒಂದಿಷ್ಟು ಸುಣ್ಣ ಅದಕ್ಕೆ ಒಂದಿಷ್ಟು ಕೊಬ್ರಿ ಎಣ್ಣೆ ಬೆರೆಸಿ ದಪ್ಪನಾಗಿ ಉಗುರು ಸುತ್ತಿಗೆ ಮೆತ್ತಿ ಬಟ್ಟೆ ಕಟ್ಟಬೇಕು.

೫) ಅನಾವಶ್ಯಕವಾದ ಕೂದಲನ್ನು ನಿವಾರಿಸಿಕೊಳ್ಳಲು:

ಸ್ತ್ರೀಯರ ಮುಖ ಮತ್ತು ತುಟಿಗಳ ಮೇಲಿನ ಕೂದಲ ನಿವಾರಣೆಗೆ ರಾತ್ರಿ ಹೊತ್ತು ಅರಿಶಿನವನ್ನು ಹಚ್ಚಿ ಬೆಳಿಗ್ಗೆ ಬಿಸಿ ನೀರಿನಿಂದ ತೊಳೆದು ಕೊಳ್ಳಬೇಕು.

೬) ಗಾಯಗಳಿಗೆ/ ರಕ್ತ ಸ್ರಾವವಾಗುತ್ತಿದ್ದರೆ :

ಅರಿಶಿನ ಪುಡಿಯನ್ನು ಲೇಪನ ಮಾಡಿ ಬಟ್ಟೆ ಕಟ್ಟಿದರೆ ರಕ್ತ ಸೋರುವುದು ನಿಲ್ಲುತ್ತದೆ. ಅರಿಶಿನ ಪುಡಿಗೆ ಬೇವಿನ ಎಲೆ ಪುಡಿಯನ್ನು ಸೇರಿಸಿ ಗಾಯಗಳಿಗೆ ಹಚ್ಚಿದರೆ ಆಂಟಿ ಸೆಪ್ಟಿಕ್ ನಂತೆ ಕೆಲಸ ಮಾಡುತ್ತದೆ.

೭) ಕಣ್ಣುಗಳ ನೋವು, ಕಣ್ಣಿನ ಉರಿ ನಿವಾರಣೆಗೆ:

ಒಂದು ಚಮಚ ಅರಿಶಿನ ಪುಡಿಯನ್ನು ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಿ ಎರಡು ಲೋಟಕ್ಕಿಳಿದಾಗ ಕಷಾಯವನ್ನು ಸೋಸಿಕೊಂಡು ಕಣ್ಣುಗಳನ್ನು ತೊಳೆದುಕೊಳ್ಳಬೇಕು.

೮) ಚರ್ಮ ರೋಗಗಳಿಗೆ, ಮೊಡವೆ , ಚಿಬ್ಬು ನಿವಾರಣೆಗೆ:

ಅರಿಶಿನ ಪುಡಿ ಒಂದು ಚಮಚ , ಒಂದು ಚಮಚ ಶ್ರೀಗಂಧದ ಪುಡಿಯನ್ನು ನಿಂಬೆ ಹಣ್ಣಿನ ರಸದಲ್ಲಿ ಅರೆದು,ಈ ಪೇಸ್ಟ್ ಅನ್ನು ಲೇಪನ ಮಾಡಿದ್ದಲ್ಲಿ ಚರ್ಮ ರೋಗಗಳೆಲ್ಲ ನಿವಾರಣೆಯಾಗುವುದು.